ವೈಭವ್ ಸೂರ್ಯವಂಶಿಗೆ ಗಾಯ 
ಕ್ರಿಕೆಟ್

36 ಎಸೆತಗಳಲ್ಲಿ ಭರ್ಜರಿ ಶತಕ: ವೈಭವ್ ಸೂರ್ಯವಂಶಿಗೆ ಗಾಯ; ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಕಷ್ಟ?

ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್ ಪರವಾಗಿ ಅದ್ಭುತವಾಗಿ ಆಡಿದ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಗಾಯದಿಂದ ಬಳಲುತ್ತಿದ್ದಾರೆ.

ಐಪಿಎಲ್ 2026ನೇ ಪಂದ್ಯದಲ್ಲಿ ಶನಿವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಭರ್ಜರಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಮೇಲೇರಿದೆ. ಟಾಸ್ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ, ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಎಸ್ಆರ್‌ಎಚ್ ತಂಡವು 18.3 ಓವರ್‌ಗಳಲ್ಲಿಯೇ ಐದು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಆರ್‌ಆರ್ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.

ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್ ಪರವಾಗಿ ಅದ್ಭುತವಾಗಿ ಆಡಿದ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಗಾಯದಿಂದ ಬಳಲುತ್ತಿದ್ದಾರೆ. ವೈಭವ್ ಎಸ್‌ಆರ್‌ಎಚ್ ವಿರುದ್ಧ 36 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದರು. ಇದು ಐಪಿಎಲ್ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಶತಕವಾಗಿದೆ.

ಆದಾಗ್ಯೂ, 15 ವರ್ಷದ ಬಾಲಕ ಎರಡನೇ ಇನಿಂಗ್ಸ್‌ನಲ್ಲಿ ಬೌಂಡರಿ ಕಡೆಗೆ ಹೋಗುತ್ತಿದ್ದ ಚೆಂಡನ್ನು ಬೆನ್ನಟ್ಟುವ ವೇಳೆ ನೋವಿನಿಂದ ಬಳಲುತ್ತಿರುವುದು ಕಂಡು ಬಂತು. ಬಳಿಕ ಕುಂಟುತ್ತಲೇ ಮೈದಾನದಿಂದ ಹೊರನಡೆದರು. ಜೋಫ್ರಾ ಆರ್ಚರ್ ಅವರ ಎಸೆತವನ್ನು ಇಶಾನ್ ಕಿಶನ್ ಕವರ್ಸ್ ಕಡೆಗೆ ಹೊಡೆದರು. ಮೂರನೇ ಓವರ್‌ನ ಕೊನೆಯ ಎಸೆತದ ವೇಳೆ, ವೈಭವ್ ಚೆಂಡನ್ನು ತಡೆಯಲು ಓಡಿದರಾದರೂ, ತಡೆಯಲು ಸಾಧಅಯವಾಗಲಿಲ್ಲ. ತಕ್ಷಣವೇ ಅವರು ಅಸ್ವಸ್ಥತೆಯಿಂದ ಕೆಳಗೆ ಬಿದ್ದರು ಮತ್ತು ಫಿಜಿಯೋಗಳು ಆಗಮಿಸಿ ಅವರನ್ನು ಗಮನಿಸಿದರು.

ಮತ್ತೆ ಎದ್ದು ನಿಂತರೂ ಅವರು ಕಂಫರ್ಟ್ ಆಗಿರುವಂತೆ ಕಾಣಲಿಲ್ಲ. ವಾಸ್ತವವಾಗಿ, ಅವರಿಗೆ ಮೈದಾನದಿಂದ ಹೊರ ನಡೆಯಲು ಕೂಡ ಬೆಂಬಲ ಬೇಕಿತ್ತು. ಕುಂಟುತ್ತಲೇ ಅವರು ಅಂತಿಮವಾಗಿ ಮೈದಾನದಿಂದ ಹೊರನಡೆದರು. ಜೈಪುರದ ಬಿಸಿಲಿನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 14 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿದ ಅವರು, ದೇಹದಲ್ಲಿ ನೀರಿನ ಕೊರತೆಯನ್ನು ಅನುಭವಿಸಿರಬಹುದು. ಇದರಿಂದಾಗಿಯೇ ಅವರು ಮೈದಾನದಿಂದ ಹೊರನಡೆಯುವಂತಾಯಿತು.

ಪಂದ್ಯದ ನಂತರ ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೋರ್, 'ಅವರ ಮಂಡಿರಜ್ಜುಗಳಲ್ಲಿ ನೋವು ಕಾಣಿಸಿದೆ. ಆದರೆ, ಈಗ ಅವರು ಚೆನ್ನಾಗಿ ಕಾಣುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆದ್ದರಿಂದ ಅವರು ಚೆನ್ನಾಗಿ ಕಾಣುತ್ತಿದ್ದಾರೆ. ನಾಳೆ ಅವರ ಸ್ಥಿತಿ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ತಿಳಿಯುತ್ತದೆ. ಸದ್ಯ ಯಾವುದೇ ಗಂಭೀರ ಪರಿಸ್ಥಿತಿಯಿಲ್ಲ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

Women's T20 World Cup 2026: 'ಹನುಮಾನ್‌ ಜಿ ಮಹಾನ್'.. ಪಾಕ್ ವಿರುದ್ಧ ಗೆಲುವಿನ ಬಳಿಕ ವಾಯುಪುತ್ರನ ನೆನೆದ Deepti Sharma

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

SCROLL FOR NEXT