ಜೆಮಿಮಾ ರೋಡ್ರಿಗಸ್ 
ಕ್ರಿಕೆಟ್

The Hundred: ಪಾಕಿಸ್ತಾನದ ಕ್ರಿಕೆಟ್ ಆಟಗಾರ್ತಿಯನ್ನು ಅಪ್ಪಿಕೊಂಡ ಜೆಮಿಮಾ ರೋಡ್ರಿಗಸ್, ವಿಡಿಯೋ ವೈರಲ್

2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಕ್ರಿಕೆಟಿಗರು ತಮ್ಮ ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ನಿರಾಕಿಸಿದ್ದರು.

ಗುರುವಾರ 'ದಿ ಹಂಡ್ರೆಡ್' ನಲ್ಲಿ ತಮ್ಮ ಫ್ರಾಂಚೈಸಿಗಳ ನಡುವಿನ ಪಂದ್ಯದ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಜೆಮಿಮಾ ರೊಡ್ರಿಗಸ್ ಪಾಕಿಸ್ತಾನದ ಆಲ್ ರೌಂಡರ್ ಫಾತಿಮಾ ಸನಾ ಅವರನ್ನು ಅಪ್ಪಿಕೊಂಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಸದರ್ನ್ ಬ್ರೇವ್ ಮತ್ತು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ನಡುವಿನ ಪಂದ್ಯ ಮುಗಿದ ನಂತರ ಇಬ್ಬರು ಆಟಗಾರ್ತಿಯರು ಮಾತುಕತೆ ನಡೆಸುತ್ತಿರುವುದು ಕಂಡುಬಂತು.

2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಕ್ರಿಕೆಟಿಗರು ತಮ್ಮ ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ನಿರಾಕಿಸಿದ್ದರು. ಆದಾಗ್ಯೂ, ಪಂದ್ಯ ಮುಗಿದ ನಂತರ, ಎರಡೂ ಫ್ರಾಂಚೈಸಿಗಳ ಆಟಗಾರ್ತಿಯರು ಕೈಕುಲುಕಿದರು. ಜೆಮಿಮಾ ಮತ್ತು ಫಾತಿಮಾ ಕೂಡ ಕೈಕುಲುಕಿದರು.

ಪಂದ್ಯದ ವಿಷಯಕ್ಕೆ ಬಂದರೆ, 'ಸದರ್ನ್ ಬ್ರೇವ್' ಪರ ಆಡುವ ರೋಡ್ರಿಗಸ್ 18 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರೆ, 'ಬರ್ಮಿಂಗ್ಹ್ಯಾಮ್ ಫೀನಿಕ್ಸ್' ಪರ ಫಾತಿಮಾ ಅವರ ಪ್ರದರ್ಶನವು ತುಸು ನಿರಾಶಾದಾಯಕವಾಗಿತ್ತು. ಅಂತಿಮವಾಗಿ ಸದರ್ನ್ ಬ್ರೇವ್ ತಂಡವು 24 ರನ್‌ಗಳ ಅಂತರದಿಂದ ಜಯಗಳಿಸಿತು. ಈ ಗೆಲುವಿನೊಂದಿಗೆ ಬ್ರೇವ್ ತಂಡವು ಈ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ನಾಲ್ಕು ಪಂದ್ಯಗಳಿಗೆ ವಿಸ್ತರಿಸಿಕೊಂಡರೆ, ಫೀನಿಕ್ಸ್ ತಂಡವು ಇನ್ನೂ ಒಂದೂ ಗೆಲುವು ಕಂಡಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದ 'ಬ್ರೇವ್' ತಂಡವು 3 ವಿಕೆಟ್‌ಗೆ 140 ರನ್‌ಗಳ ಮೊತ್ತವನ್ನು ಕಲೆಹಾಕಿತು; ಇದರಲ್ಲಿ ಲಿಜೆಲ್ಲೆ ಲೀ 43 ಮತ್ತು ಮಾಯಾ ಬೌಚಿಯರ್ 45 ರನ್ ಗಳಿಸಿದರು. ರೋಡ್ರಿಗಸ್ ಅಜೇಯ 28 ರನ್ ಗಳಿಸಿ ಅಂತಿಮ ಹಂತದಲ್ಲಿ ವೇಗವಾಗಿ ರನ್ ಕಲೆಹಾಕುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಫಾತಿಮಾ ತಮ್ಮ 15 ಎಸೆತಗಳ ಸ್ಪೆಲ್‌ನಲ್ಲಿ 33 ರನ್ ಬಿಟ್ಟುಕೊಟ್ಟರೆ, ಅಲಾನಾ ಕಿಂಗ್ ಮತ್ತು ಆಲಿಸ್ ಕ್ಯಾಪ್ಸಿ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೆ ಪ್ರತಿಯಾಗಿ, ಟ್ಯಾಮಿ ಬ್ಯೂಮಾಂಟ್ ಮತ್ತು ಡವಿನಾ ಪೆರಿನ್ ಅವರ ನಡುವಿನ 73 ರನ್‌ಗಳ ಜೊತೆಯಾಟದ ನೆರವಿನಿಂದ ಫೀನಿಕ್ಸ್ ತಂಡವು ಉತ್ತಮ ಆರಂಭ ಪಡೆಯಿತು. ಪೆರಿನ್ 43 ಎಸೆತಗಳಲ್ಲಿ 52 ರನ್ ಗಳಿಸಿದರೆ, ಬ್ಯೂಮಾಂಟ್ 22 ರನ್ ಗಳಿಸಿದರು. ಅವರ ವಿಕೆಟ್‌ಗಳ ಪತನದ ನಂತರ ಪಂದ್ಯ ತಿರುವು ಪಡೆಯಿತು.

ಸಾರಾ ಗ್ಲೆನ್ ಅವರು ಪೆರಿನ್ ಅವರನ್ನು ಔಟ್ ಮಾಡಿದರು ಮತ್ತು ಲಾರೆನ್ ಬೆಲ್ ಅವರು ಆಲಿಸ್ ಕ್ಯಾಪ್ಸಿ ಅವರ ವಿಕೆಟ್ ಪಡೆದರು. ಸೋಫಿ ಮೊಲಿನೆಕ್ಸ್ ಅಂತಿಮ ಹಂತದಲ್ಲಿ ಎರಡು ವಿಕೆಟ್ ಕಬಳಿಸಿದರು; ಪರಿಣಾಮವಾಗಿ ಫೀನಿಕ್ಸ್ ತಂಡವು 116/5 ರನ್ ಗಳಿಸಲಷ್ಟೇ ಶಕ್ತವಾಯಿತು. ಎಲ್ಲಿಸ್ ಪೆರ್ರಿ 16 ರನ್‌ಗಳೊಂದಿಗೆ ಹಾಗೂ ಫಾತಿಮಾ 5 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!