ಸಿಸಿಎಲ್  online desk
ಕ್ರಿಕೆಟ್

CCL 2026: ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು; 12 ವರ್ಷಗಳ ಬಳಿಕ ಟ್ರೋಫಿ ಗೆದ್ದ ಕಿಚ್ಚನ ಪಡೆ!

ಬೆಂಗಾಲ್ ಟೈಗರ್ಸ್ ನೀಡಿದ್ದ 130 ರನ್ ಗಳ ಗುರಿಯನ್ನು 16.4 ಓವರ್ ಗಳಲ್ಲಿ ಕರ್ನಾಟಕ ತಂಡ ತಲುಪಿದ್ದು 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಕೊಯಂಬತ್ತೂರು: ಕೊಯಂಬತ್ತೂರಿನಲ್ಲಿ ನಡೆದ ಸೆಲಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್ 2026) ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಸರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 12 ವರ್ಷಗಳ ಬಳಿಕ ಕಿಚ್ಚ ಸುದೀಪ್ ಪಡೆ ಟ್ರೋಫಿ ಗೆದ್ದಿದೆ.

ಬೆಂಗಾಲ್ ಟೈಗರ್ಸ್ ನೀಡಿದ್ದ 130 ರನ್ ಗಳ ಗುರಿಯನ್ನು 16.4 ಓವರ್ ಗಳಲ್ಲಿ ಕರ್ನಾಟಕ ತಂಡ ತಲುಪಿದ್ದು 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಾಲ್ ಟೈಗರ್ಸ್ ಪರ ಜಾಯ್ ಮುಖರ್ಜಿ ಮತ್ತು ಉದಯ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಪಂದ್ಯದ ಎರಡನೇ ಓವರ್‌ನಲ್ಲಿಯೇ ಸುನೀಲ್ ಬೆಂಗಾಲ್‌ಗೆ ಆಘಾತ ನೀಡಿದರು. ಉದಯ್ ಸಿಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ನಂತರ ಕ್ರೀಸ್ ಗೆ ಬಂದ ಜ್ಯಾಮಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ ಜೆಕೆ ಜ್ಯಾಮಿಯನ್ನು ಕ್ಲೀನ್ ಬೋಲ್ಡ್ ಮಾಡಿ ಬೆಂಗಾಲ್ ತಂಡಕ್ಕೆ ಅಘಾತ ನೀಡಿದರು. ಈ ಬಳಿಕ ಬೆಂಗಾಲ್ ತಂಡ ಬ್ಯಾಟಿಂಗ್ ಲೈನ್ ನಲ್ಲಿ ಕ್ಷೀಣಿಸಿತು. ನಿಗದಿತ 20 ಓವರ್‌ಗಳಲ್ಲಿ ಬೆಂಗಾಲ್ ತಂಡ 129 ರನ್‌ಗಳಿಗೆ ಸರ್ವಪತನ ಕಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!