ಇಟಲಿ ಬ್ಯಾಟರ್ ಬೆಂಜಮಿನ್ ಮಾನೆಂಟಿ. 
ಕ್ರಿಕೆಟ್

T20 World Cup 2026: ಬಾಂಗ್ಲಾದೇಶದ ಬದಲಿಗೆ ಪಂದ್ಯಾವಳಿಯಲ್ಲಿ ಸ್ಥಾನ; ಇಟಲಿ ವಿರುದ್ಧ ಸ್ಕಾಟ್ಲೆಂಡ್‌ಗೆ ಗೆಲುವು!

ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಈಗ ಗ್ರೂಪ್ ಸಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಸ್ಕಾಟ್ಲೆಂಡ್ ಎರಡು ಪಂದ್ಯಗಳನ್ನು ಆಡಿದ್ದರೆ, ಇಂಗ್ಲೆಂಡ್ ಮತ್ತು ವಿಂಡೀಸ್ ತಲಾ ಒಂದು ಪಂದ್ಯಗಳನ್ನು ಆಡಿವೆ.

ಕೋಲ್ಕತ್ತಾ: ಜಾರ್ಜ್ ಮುನ್ಸೆ ಅವರ ಆಕ್ರಮಣಕಾರಿ ಅರ್ಧಶತಕದ ಜೊತೆಗೆ ಆಲ್‌ರೌಂಡರ್ ಮೈಕೆಲ್ ಲೀಸ್ಕ್ ನಾಲ್ಕು ವಿಕೆಟ್‌ ನೆರವಿನಿಂದ ಸ್ಕಾಟ್ಲೆಂಡ್ ಸೋಮವಾರ ನಡೆದ ಟಿ20 ವಿಶ್ವಕಪ್ 2026ರ ಗ್ರೂಪ್ ಸಿ ಪಂದ್ಯದಲ್ಲಿ ಇಟಲಿಯನ್ನು 73 ರನ್‌ಗಳಿಂದ ಸೋಲಿಸಿತು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಎಡಗೈ ಬ್ಯಾಟರ್ ಬೌಲರ್ ಮುನ್ಸೆ, 54 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 84 ರನ್ ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ ಮೈಕೆಲ್ ಲೀಸ್ಕ್ ಕೊನೆಯ ಐದು ಎಸೆತಗಳಲ್ಲಿ ಔಟಾಗದೆ 22 ರನ್ ಗಳಿಸಿದರು.

ಟಾಸ್ ಗೆದ್ದ ಇಟಲಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್ ಮೈಕೆಲ್ ಜೋನ್ಸ್ ಅವರ 37, ಬ್ರೆಂಡನ್ ಮೆಕ್ಲಮ್ 41, ರಿಚಿ ಬೆರಿಂಗ್ಟನ್ ಅವರ 15 ರನ್‌ಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು.

ಇಟಲಿ ಪರ ಅಲಿ ಹಸನ್ ಕೇವಲ 21 ರನ್ ನೀಡಿ ಒಂದು ವಿಕೆಟ್ ಪಡೆದರೆ, ಗ್ರಾಂಟ್ ಸ್ಟೀವರ್ಟ್, ಥಾಮಸ್ ಡ್ರಾಕಾ ಮತ್ತು ಜೆಜೆ ಸ್ಮಟ್ಸ್ ತಲಾ ಒಂದು ವಿಕೆಟ್ ಕಬಳಿಸಿದರು.

ಸ್ಕಾಟ್ಲೆಂಡ್ ನೀಡಿದ 208 ರನ್ ಗುರಿ ಬೆನ್ನತ್ತಿದ ಇಟಲಿಗೆ ಭುಜದ ಗಾಯದಿಂದ ಬಳಲುತ್ತಿದ್ದ ನಾಯಕ ವೇಯ್ನ್ ಮ್ಯಾಡ್ಸೆನ್ ಅವರ ಬ್ಯಾಟಿಂಗ್ ಬಲ ಸಿಗಲಿಲ್ಲ. ಇಟಲಿ 16.4 ಓವರ್‌ಗಳಲ್ಲಿಯೇ ಕೇವಲ 134 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಬೆನ್ ಮಾನೆಂಟಿ (31 ಎಸೆತಗಳಲ್ಲಿ 52) ಮೂಲಕ ಹೋರಾಟ ನೀಡಿದರಾದರೂ ತಂಡವನ್ನು ಸೋಲಿನಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಅವರು 29 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಬೆನ್ ಮತ್ತು ಅವರ ಸಹೋದರ ಹ್ಯಾರಿ ಕೇವಲ 46 ಎಸೆತಗಳಲ್ಲಿ 73 ರನ್ ಗಳಿಸಿ ಭರವಸೆ ಮೂಡಿಸಿದರು. ಹ್ಯಾರಿ ಮಾನೆಂಟಿ 37 ರನ್ ಗಳಿಸಿದರು.

ಟಾಸ್ ಸರಿಯಾಗಿ ಮಾಡುವುದನ್ನು ಬಿಟ್ಟರೆ, ಇಟಲಿ ಅಂದುಕೊಂಡಂತೆ ಏನೂ ಆಗಲಿಲ್ಲ. ಸ್ಕಾಟ್ಲೆಂಡ್ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಫೀಲ್ಡಿಂಗ್ ವೇಳೆ ಎಡ ಭುಜಕ್ಕೆ ಗಾಯ ಮಾಡಿಕೊಂಡು ನಾಯಕ ಮ್ಯಾಡ್ಸೆನ್ ಹೊರನಡೆಯಬೇಕಾಯಿತು ಮತ್ತು ನಂತರ ಪಂದ್ಯದಿಂದಲೇ ಹೊರಗುಳಿಯಬೇಕಾಯಿತು.

ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಈಗ ಗ್ರೂಪ್ ಸಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಸ್ಕಾಟ್ಲೆಂಡ್ ಎರಡು ಪಂದ್ಯಗಳನ್ನು ಆಡಿದ್ದರೆ, ಇಂಗ್ಲೆಂಡ್ ಮತ್ತು ವಿಂಡೀಸ್ ತಲಾ ಒಂದು ಪಂದ್ಯಗಳನ್ನು ಆಡಿವೆ.

ಕಳೆದ ಜುಲೈನಲ್ಲಿ ನಡೆದ ಯುರೋಪಿಯನ್ ಅರ್ಹತಾ ಪಂದ್ಯದಲ್ಲಿ ಇಟಲಿ ವಿರುದ್ಧ ಸೋತು ವಿಶ್ವಕಪ್‌ಗೆ ನೇರ ಸ್ಥಾನವನ್ನು ಕಳೆದುಕೊಂಡಿದ್ದ ಸ್ಕಾಟ್ಲೆಂಡ್ ಈ ಪಂದ್ಯಾವಳಿಯಲ್ಲಿ ಕೊನೇ ಕ್ಷಣದಲ್ಲಿ ಸ್ಥಾನ ಪಡೆದಿದೆ.

ಆಟಗಾರರ ಭದ್ರತೆಯ ನೆಪವೊಡ್ಡಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಾಂಗ್ಲಾದೇಶ, ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕೆಂದು ಬೇಡಿಕೆ ಇಟ್ಟಿತ್ತು. ಇದನ್ನು ನಿರಾಕರಿಸಿದ ಐಸಿಸಿಯು ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಅನ್ನು ಆಯ್ಕೆ ಮಾಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಯಿ ಮುಚ್ಚಿಕೊಂಡು ಇರಬೇಕೆಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು: ನಾನು- ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ; ಡಿಕೆ ಶಿವಕುಮಾರ್

T20 ವಿಶ್ವಕಪ್ 2026, ಪಾಕ್ ಗೆ ಮುಖಭಂಗ, ಕ್ಯಾಮರಾಕ್ಕೆ ಮುಖ ತೋರಿಸಲು ಹೆಣಗಾಡಿದ ಮೊಹ್ಸಿನ್ ನಖ್ವಿ! Video

ಅಧಿಕಾರ ಹಂಚಿಕೆ ಬಿಕ್ಕಟ್ಟು: ಸಿದ್ದು ಜೊತೆಗಿನ ಬಜೆಟ್ ಪೂರ್ವ ಭಾವಿ ಸಭೆ ಕೈಬಿಟ್ಟು, ದೆಹಲಿಗೆ ಡಿಕೆಶಿ ದಿಢೀರ್ ಪ್ರಯಾಣ!

25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ-ಖಾತೆಗಳ ಹಂಚಿಕೆ: 15 ದಿನದಲ್ಲಿ ಬಿ ಖಾತೆಯಿಂದ 'ಎ'ಗೆ ವರ್ಗಾವಣೆ; ಡಿ.ಕೆ. ಶಿವಕುಮಾರ್‌

"Explain Again": ತಮ್ಮದೇ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್! ವಿಪಕ್ಷಗಳ ಪ್ರಶಂಸೆ, Video

SCROLL FOR NEXT