ಅಭಿಷೇಕ್ ಶರ್ಮಾ-ರೋಹಿತ್ ಶರ್ಮಾ 
ಕ್ರಿಕೆಟ್

T20 World Cup: ಪಾಕ್ ವಿರುದ್ಧ ಡಕೌಟ್ ಆದ ಅಭಿಷೇಕ್ ಶರ್ಮಾ; ರೋಹಿತ್ ಶರ್ಮಾ ಗರಂ, Video!

ಡಕ್ ಔಟ್ ಆದ ಅಭಿಷೇಕ್ ಶರ್ಮಾ ಇಂದು ದೊಡ್ಡ ಇನ್ನಿಂಗ್ಸ್ ಆಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಡಕೌಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ನವದೆಹಲಿ: ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಡಕ್ ಔಟ್ ಆಗಿದ್ದಾರೆ. ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಅವರ ಸ್ಪಿನ್‌ ಬಲೆಗೆ ಸಿಕ್ಕಿಬಿದ್ದರು. ಪಂದ್ಯದ ಮೊದಲ ಓವರ್ ಮಾಡುವ ಮೂಲಕ ನಾಯಕ ಆಘಾ ಎಲ್ಲರನ್ನೂ ಅಚ್ಚರಿಗೊಳಿಸಿದರು. ಆಘಾ ಮೊದಲ ಓವರ್ ನ ಆರನೇ ಎಸೆತದಲ್ಲಿ ಮಾಸ್ಟರ್‌ಸ್ಟ್ರೋಕ್ ಎಂದು ಸಾಬೀತಾಯಿತು. ಡಕ್ ಔಟ್ ಆದ ಅಭಿಷೇಕ್ ಶರ್ಮಾ ಇಂದು ದೊಡ್ಡ ಇನ್ನಿಂಗ್ಸ್ ಆಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಡಕೌಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇನ್ನು ಅಭಿಷೇಕ್ ಡಕೌಟ್ ಆಗಿದ್ದಕ್ಕೆ ರೋಹಿತ್ ಶರ್ಮಾ ಕೂಡ ಕೋಪಗೊಂಡರು.

ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಭಾನುವಾರ ನಡೆದ ಗ್ರೂಪ್ ಎ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ನಾಲ್ಕು ಎಸೆತಗಳಲ್ಲಿ ಡಕೌಟ್ ಆಗಿ ಪೆವಿಲಿಯನ್‌ ಸೇರಿದರು. ಮೊದಲ ಓವರ್ ನಂತರ ಭಾರತದ ಸ್ಕೋರ್ 1 ವಿಕೆಟ್‌ಗೆ 1 ರನ್ ಆಗಿತ್ತು. ಇದು ಅಭಿಷೇಕ್ ಅವರ T20 ವಿಶ್ವಕಪ್‌ನ ಎರಡನೇ ಡಕೌಟ್ ಆಗಿದೆ. ಭಾರತದ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ USA ವಿರುದ್ಧ ಅಭಿಷೇಕ್ ಶೂನ್ಯಕ್ಕೆ ಔಟಾಗಿದ್ದರು.

ಹೊಟ್ಟೆಯ ಸೋಂಕಿನಿಂದಾಗಿ ನಮೀಬಿಯಾ ವಿರುದ್ಧದ ಹಿಂದಿನ ಪಂದ್ಯವನ್ನು ಅಭಿಷೇಕ್ ತಪ್ಪಿಸಿಕೊಂಡರು. ಸಂಜು ಸ್ಯಾಮ್ಸನ್ ಮತ್ತು ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಯಿತು. ಪಾಕಿಸ್ತಾನ ತಮ್ಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸದ್ಯದಲ್ಲೇ ಮೋದಿ ಸಂಪುಟ ಪುನರ್ ರಚನೆ: ಅಮಿತ್ ಶಾಗೆ ಉಪ ಪ್ರಧಾನಿ ಪಟ್ಟ? ವರದಿಗಳು

ಇದು ನಿಜಕ್ಕೂ 'ಅಸಹ್ಯಕರ'; ಹೀಗೆ ಆಗುತ್ತಿರುವುದು ಮೂರನೇ ಬಾರಿ: ಆಕ್ರೋಶ ಹೊರಹಾಕಿದ ನಟಿ ತ್ರಿಶಾ!

ಮೈಸೂರು: ಕಾಡಾನೆ ಕಾರ್ಯಾಚರಣೆಗಳಲ್ಲಿ 'ಅಂಬಾರಿ ಆನೆ' ಅಭಿಮನ್ಯುವಿನ ತಾಕತ್ತಾಗಿದ್ದ ಎಡಭಾಗದ ದಂತವೇ ಮುರಿತ!

ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲೇ ಹೆಬ್ಬಾವು ಸಾಕಿದ್ದ ಆಸಾಮಿ; ಅರಣ್ಯ ಇಲಾಖೆ ದಾಳಿ!

ಆಗ್ರಾ: ಸೋನಂ, ಸಿಯಾ ಆಯ್ತು, ಈಗ ರೂಬಿ; ಪತಿಯನ್ನು ಕೊಂದು, ಶವವನ್ನು ಬಾತ್ ರೂಂನ ಟೈಲ್ಸ್ ಕೆಳಗೆ ಹೂತು ಹಾಕಿದ್ದ ಮಹಿಳೆಯ ಬಂಧನ!