ಪಾಕಿಸ್ತಾನ ತಂಡ 
ಕ್ರಿಕೆಟ್

T20 World Cup 2026: ಭಾರತ ವಿರುದ್ಧದ ಪಂದ್ಯ, ಪಾಕಿಸ್ತಾನಕ್ಕೆ 'ಮಾನಸಿಕ ಗೆಲುವು' ಎಂದ ಮಾಜಿ ನಾಯಕ! ಏನಿದು ವಿಚಿತ್ರ ಹೇಳಿಕೆ?

ತಾರಿಕ್ ಅವರ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಕೆಲವು ಅಭಿಮಾನಿಗಳು ಅವರನ್ನು 'ಚಕಿಂಗ್' ( chucking) ಎಂದು ಆರೋಪಿಸಿದ್ದಾರೆ.

ಕೊಲಂಬೊ: ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ ಸ್ಪಿನ್ನರ್ ಉಸ್ಮಾನ್ ತಾರಿಕ್ ಬೌಲಿಂಗ್ ಸುತ್ತ ಬಹಳ ದಿನಗಳಿಂದ ನಡೆಯುತ್ತಿರುವ ಚರ್ಚೆಗಳು ಸಲ್ಮಾನ್ ಅಲಿ ಅಘಾ ತಂಡಕ್ಕೆ 'ಮಾನಸಿಕ ಗೆಲುವು' ಎಂದು ಪರಿಗಣಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.

ತಾರಿಕ್ ಅವರ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಕೆಲವು ಅಭಿಮಾನಿಗಳು ಅವರನ್ನು 'ಚಕಿಂಗ್' ( chucking) ಎಂದು ಆರೋಪಿಸಿದ್ದಾರೆ.

ಆದಾಗ್ಯೂ, ಭಾನುವಾರದಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನಾ ಮಾತನಾಡಿರುವ ಹಫೀಜ್, ಕಳೆದ ಕೆಲವು ಪಂದ್ಯಗಳಲ್ಲಿ ತಾರಿಕ್ ಅವರ ಪ್ರದರ್ಶನವು ಭಾರತೀಯ ತಂಡದಲ್ಲಿ ಭಯವನ್ನು ಸೃಷ್ಟಿಸಿದೆ. ಇದು ಪಾಕಿಸ್ತಾನಕ್ಕೆ ಅನುಕೂಲವಾಗಬಹುದು ಎಂದು ಹೇಳಿದ್ದಾರೆ.

ನಾವು ಕ್ರಿಕೆಟ್ ಒಳಹೊಕ್ಕರೆ ಉಸ್ಮಾನ್ ತಾರಿಕ್ ಸುತ್ತ ಎದ್ದಿರುವ ಹೈಪ್ ನಮಗೆ ಮತ್ತೊಂದು ಮಾನಸಿಕ ಗೆಲುವು. ಸದ್ಯ ಯಾರೂ ಕೂಡಾ ಬಾಬರ್ ಅಜಮ್ ಅಥವಾ ಇತರ ಯಾವುದೇ ಆಟಗಾರನ ಬಗ್ಗೆ ಮಾತನಾಡುತ್ತಿಲ್ಲ. ಜನರು ಉಸ್ಮಾನ್ ತಾರಿಕ್ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಅವರು ಪಾಕಿಸ್ತಾನ ಪರ ಕೇವಲ ಒಂದು ಅಥವಾ ಎರಡು ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು ಭಾರತೀಯ ತಂಡದಲ್ಲಿ ತೀವ್ರ ರೀತಿಯ ನಡುಕ ಹುಟ್ಟಿಸಿದ್ದಾರೆ ಎಂದಿದ್ದಾರೆ.

"ಕೇವಲ ಒಬ್ಬ ಆಟಗಾರನ ಬಗ್ಗೆ ನೀವು ಎಷ್ಟು ಬಾರಿ ಚರ್ಚೆಯಾಗುವುದನ್ನು ನೋಡಿದ್ದೀರಿ? ಇಡೀ ಮಾಧ್ಯಮ, ಪ್ರಚಾರ, ಜಗತ್ತು ಎಲ್ಲವೂ ಪಂದ್ಯದ ಫಲಿತಾಂಶದ ಬಗ್ಗೆ ಮಾತ್ರವಲ್ಲ, ಉಸ್ಮಾನ್ ತಾರಿಕ್ ಏನು ಮಾಡುತ್ತಾರೆ ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹಫೀಜ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ವೋಟ್ ಚೋರಿಯಿಂದ ಕಾನೂನು ಚೋರಿ' : ಇಡೀ ವ್ಯವಸ್ಥೆ ನಾಶಕ್ಕೆ ಬಿಜೆಪಿ ಸಂಚು,EC, ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ!

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿಕೆ ಹರಿಪ್ರಸಾದರಿಂದ ದಾಖಲೆ ಬಿಡುಗಡೆ!

Biggboss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!

ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ರೂ. 2.500 ಆರ್ಥಿಕ ನೆರವು: ಬ್ಯಾಂಕ್ ಖಾತೆಗಳಿಗೆ ನೇರ ಜಮೆ!

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!