ಸಂಜಯ್ ಮಂಜ್ರೇಕರ್ 
ಕ್ರಿಕೆಟ್

T20 World Cup 2026: ಹ್ಯಾಂಡ್ ಶೇಕ್ ವಿವಾದ; ಟೀಂ ಇಂಡಿಯಾ ವಿರುದ್ದ ಸಂಜಯ್ ಮಂಜ್ರೇಕರ್ ಕಿಡಿ! ನೆಟ್ಟಿಗರ ತರಾಟೆ

ಈ ಮಧ್ಯೆ ಭಾರತ ಹ್ಯಾಂಡ್ ಶೇಕ್ ಮಾಡದಿರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ. ಈ ಬೆನ್ನಲ್ಲೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ನೋ ಹ್ಯಾಂಡ್‌ ಶೇಕ್ ಅಭಿಯಾನದ ಬಗ್ಗೆ ಕಿಡಿಕಾರಿದ್ದಾರೆ.

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ - ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಉಭಯ ತಂಡಗಳ ನಾಯಕರು ಹ್ಯಾಂಡ್‌ ಶೇಕ್ ಮಾಡುತ್ತಾರೆಯೋ ಇಲ್ಲವೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಈ ಮಧ್ಯೆ ಭಾರತ ಹ್ಯಾಂಡ್ ಶೇಕ್ ಮಾಡದಿರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ. ಈ ಬೆನ್ನಲ್ಲೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ನೋ ಹ್ಯಾಂಡ್‌ ಶೇಕ್ ಅಭಿಯಾನದ ಬಗ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್‌ ಮಾಡಿರುವ ಸಂಜಯ್ ಮಂಜ್ರೇಕರ್, ಭಾರತ ಆರಂಭಿಸಿರುವ ಈ ನೋ ಹ್ಯಾಂಡ್‌ ಶೇಕ್ ಎಂಬುದು ತುಂಬಾ ಮೂರ್ಖತನದಿಂದ ಕೂಡಿದ ಕೆಲಸ. ನಮ್ಮಂತಹ ರಾಷ್ಟ್ರಕ್ಕೆ ಇದು ಯೋಗ್ಯ ಅಲ್ಲ. ಆಟದ ಉತ್ಸಾಹದಲ್ಲಿ ಸರಿಯಾಗಿ ಆಟವಾಡಿ ಅಥವಾ ಆಟವಾಡಲೇಬೇಡಿ " ಎಂದು ಕಿಡಿಕಾರಿದ್ದಾರೆ.

ಸಂಜಯ್ ಮಂಜ್ರೇಕರ್ ಟ್ವೀಟ್‌ ವಿರುದ್ಧ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.ಈತ ಯಾವಾಗಿನಿಂದ ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಆರಂಭಿಸಿದ", "ಭಯೋತ್ಪಾದಕರ ಜತೆ ಕೈಕುಲುಕುವುದಕ್ಕೆ ನಮಗೇನು ಬುದ್ದಿಕೆಟ್ಟಿದೆಯಾ " ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಪಾಕಿಸ್ತಾನ ತಂಡದ ಜತೆ ನಿಂತಿರುವ ಫೋಟೋಗಳು, ವ್ಯಂಗ್ಯ ಚಿತ್ರಗಳನ್ನು ರಚಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

Asian Games 2026: 'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ': ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ಬೌಲರ್ ಗೆ ಅಭಿಮಾನಿಗಳ ಕಾಟ! Video

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!