ಭಾರತ ತಂಡ 
ಕ್ರಿಕೆಟ್

T20 ವಿಶ್ವಕಪ್ 2026: 'ಸ್ಪಲ್ಪನಾದ್ರೂ ಬುದ್ದಿ ಇದ್ಯಾ..?': BCCI ಮತ್ತು ಟೀಂ ಇಂಡಿಯಾಗೆ ICC ನೆರವು ಆರೋಪಕ್ಕೆ ಖಡಕ್ ಉತ್ತರ

T20 ವಿಶ್ವಕಪ್ 2026: 'ಸ್ಪಲ್ಪನಾದ್ರೂ ಬುದ್ದಿ ಇದ್ಯಾ..?': BCCI ಮತ್ತು ಟೀಂ ಇಂಡಿಯಾಗೆ ICC ನೆರವು ಆರೋಪಕ್ಕೆ ಖಡಕ್ ಉತ್ತರ

ನವದೆಹಲಿ: ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಬಿಸಿಸಿಐ ಮತ್ತು ಟೀಂ ಇಂಡಿಯಾಗೆ ಐಸಿಸಿ ಅನಗತ್ಯ ನೆರವು ನೀಡುತ್ತಿದೆ ಎಂಬ ಆರೋಪಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ಖಡಕ್ ತಿರುಗೇಟು ನೀಡಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತ ಇಂದಿನಿಂದ ಚಾಲನೆಗೊಳ್ಳುತ್ತಿದ್ದು, ಗುಂಪು ಹಂತದಲ್ಲಿ ಅಗ್ರಸ್ಥಾನದಲ್ಲಿರುವ ಎಲ್ಲಾ ತಂಡಗಳು ಅಂದರೆ ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಸೂಪರ್ 8 ಹಂತದಲ್ಲಿ ಗುಂಪು 1 ರಲ್ಲಿ ಸ್ಥಾನ ಪಡೆದಿವೆ.

ಗುಂಪು 2 ಆಯಾ ಗುಂಪುಗಳಲ್ಲಿ ಎರಡನೇ ಸ್ಥಾನ ಪಡೆದ ನಾಲ್ಕು ತಂಡಗಳನ್ನು ಒಳಗೊಂಡಿದೆ. ಅಂದರೆ ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಗುಂಪು 2 ರಲ್ಲಿ ಸ್ಥಾನ ಪಡೆದಿವೆ.

ಈ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಅಗ್ರ 4 ರಲ್ಲಿ ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಹಂತಕ್ಕೇರಲಿವೆ.

ಭಾರತಕ್ಕೆ ಐಸಿಸಿ ಅನಗತ್ಯ ನೆರವು ಆರೋಪ

ಈ ನಡುವೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಟೂರ್ನಿಯಲ್ಲಿ ಅಜೇಯ ತಂಡವಾಗಿ ಉಳಿದಿದ್ದು, ಭಾರತಕ್ಕೆ ಅನುಕೂಲಕರ ರೀತಿಯಲ್ಲಿ ಟೂರ್ನಿಯ ವೇಳಾಪಟ್ಟಿ ರಚಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಕೇಳುಬರುತ್ತಿದೆ.

ಸ್ವಲ್ಪನಾದ್ರೂ ಬುದ್ದಿ ಇದ್ಯಾ

ಇನ್ನು ಈ ಆರೋಪಗಳಿಗೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಆಕಾಶ್ ಛೋಪ್ರಾ ಕಿಡಿಕಾರಿದ್ದು, ಭಾರತಕ್ಕೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಮಾಡಲಾಗಿದೆ ಎಂಬ ಸಾಮಾಜಿಕ ಮಾಧ್ಯಮ ಹೇಳಿಕೆಗಳನ್ನು ನಂಬಲು ಯಾವುದೇ ಕಾರಣವಿಲ್ಲ ಎಂದು ಹೇಳಿದರು.

"ಈ ಟೂರ್ನಮೆಂಟ್ ಎರಡು ದೇಶಗಳಲ್ಲಿ ನಡೆಯುತ್ತಿದೆ. ಆದ್ದರಿಂದ, ಭಾರತ ತಮ್ಮ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಆಡಬೇಕು, ಮತ್ತು ಶ್ರೀಲಂಕಾ ಮತ್ತು ಪಾಕಿಸ್ತಾನ ತಮ್ಮ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಬೇಕು. ಆದ್ದರಿಂದ, ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇಡುವುದು ಕಡ್ಡಾಯವಾಗಿದೆ ಮತ್ತು ಭಾರತವು ಬೇರೆ ಗುಂಪಿನಲ್ಲಿರಬೇಕು. ಇಲ್ಲವಾದರೆ ಟೂರ್ನಿ ಸುಗಮವಾಗಿ ಹೇಗೆ ಸಾಗುತ್ತದೆ ಎಂದು ಆಕಾಶ್ ಚೋಪ್ರಾ ವೀಡಿಯೊದಲ್ಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!

ಹೊಸ ಶೇ.10ರಷ್ಟು ಸುಂಕ ಘೋಷಿಸಿದ Donald Trump; ಭಾರತದ ಮೇಲೆ ಪರಿಣಾಮವೇನು?

ಸುಪ್ರೀಂ ಕೋರ್ಟ್ ತೀರ್ಪಿಗೆ ಡೋಂಟ್ ಕೇರ್: ಶೇ.10ರಷ್ಟು ಜಾಗತಿಕ ಸುಂಕ ಘೋಷಿಸಿದ Donald Trump, ಭಾರತ ಒಪ್ಪಂದ ವಿಷಯ ಪ್ರಸ್ತಾಪ

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಗೆ ಫೆ.26ವರೆಗೆ ನ್ಯಾಯಾಂಗ ಬಂಧನ

ಶ್ರೀನಗರ: ಸಿಆರ್​​ಪಿಎಫ್​ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ವಾಹನ ನದಿಗೆ ಬಿದ್ದು, 9 ಮಂದಿಗೆ ಗಾಯ

SCROLL FOR NEXT