ಸೂರ್ಯ ಕುಮಾರ್ ಯಾದವ್ 
ಕ್ರಿಕೆಟ್

T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಭಾರತಕ್ಕೆ ಭಾರಿ ಹೊಡೆತ; ಸೆಮಿಫೈನಲ್ ಹಾದಿ ಕಠಿಣ

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಡೇವಿಡ್ ಮಿಲ್ಲರ್ 63 ಮತ್ತು ಡೆವಾಲ್ಡ್ ಬ್ರೆವಿಸ್ 45 ರನ್ ಗಳಿಸುವುದರೊಂದಿಗೆ ಒಟ್ಟು 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.

ಅಹಮದಾಬಾದ್: ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ತಮ್ಮ ಮೊದಲ ಸೂಪರ್ 8 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋತ ನಂತರ T20 ವಿಶ್ವಕಪ್ 2026 ರ ಸೆಮಿಫೈನಲ್‌ ಪ್ರವೇಶಿಸುವ ಸಾಧ್ಯತೆಗೆ ಭಾರಿ ಹೊಡೆತ ಬಿದ್ದಿದೆ.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಡೇವಿಡ್ ಮಿಲ್ಲರ್ 63 ಮತ್ತು ಡೆವಾಲ್ಡ್ ಬ್ರೆವಿಸ್ 45 ರನ್ ಗಳಿಸುವುದರೊಂದಿಗೆ ಒಟ್ಟು 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಜಸ್ಪ್ರೀತ್ ಬುಮ್ರಾ ಮಾತ್ರ ಮೂರು ವಿಕೆಟ್ ಪಡೆಯುವುದರೊಂದಿಗೆ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದರು.

ಬಳಿಕ ದಕ್ಷಿಣ ಆಫ್ರಿಕಾ ನೀಡಿದ 188 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತ, ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು. ಸೋಲಿನ ಪರಿಣಾಮ ಭಾರತದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಉಳಿದಿರುವ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಒಂದು ಪಂದ್ಯವನ್ನು ಗೆದ್ದರೆ ಇತರ ಫಲಿತಾಂಶಗಳು ಮತ್ತು ಸರಾಸರಿ ರನ್ ರೇಟ್ ಆಧಾರದ ಮೇಲೆ ಭಾರತದ ಭವಿಷ್ಯ ಅವಲಂಬಿತವಾಗಿದೆ.

ಭಾರತ ಎರಡು ಪಂದ್ಯಗಳನ್ನು ಗೆದ್ದರೆ? ಭಾರತ ತನ್ನ ಎರಡೂ ಪಂದ್ಯಗಳನ್ನು ಗೆದ್ದರೆ, 2 ಪಂದ್ಯಗಳಿಂದ 4 ಪಾಯಿಂಟ್ ಬರುತ್ತದೆ. ಇತರ ಎರಡು ತಂಡಗಳು ಸಹ 4 ಅಂಕಗಳನ್ನು ಹೊಂದಿಲ್ಲದಿದ್ದರೆ ಸೆಮಿಫೈನಲ್ ಪ್ರವೇಶಿಸಬಹುದು. ದಕ್ಷಿಣ ಆಫ್ರಿಕಾ ತನ್ನ ಉಳಿದಿರುವ ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಮತ್ತು ವೆಸ್ಟ್ ಇಂಡೀಸ್- ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಗೆದ್ದವರು ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ ಈಗಾಗಬಹುದು. ಇಲ್ಲಿ ಭಾರತದ ಸೆಮಿಫೈನಲ್ ಹಾದಿ ಸರಾಸರಿ ರನ್ ರೇಟ್ ಆಧಾರದ ಮೇಲೆ ಕಠಿಣವಾಗಲೂಬಹುದು.

ಭಾರತ ಒಂದು ಪಂದ್ಯ ಗೆದ್ದರೆ? ಭಾರತ ಕೇವಲ ಒಂದು ಪಂದ್ಯವನ್ನು ಗೆದ್ದರೆ, ದಕ್ಷಿಣ ಆಫ್ರಿಕಾ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ವೆಸ್ಟ್ ಇಂಡೀಸ್-ಜಿಂಬಾಬ್ವೆ ಪಂದ್ಯದ ವಿಜೇತರ ವಿರುದ್ಧ ಭಾರತ ಗೆಲುವು ಸಾಧಿಸಬೇಕು. ಹಾಗಾದಲ್ಲಿ ಭಾರತ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಲಾ 2 ಅಂಕಗಳನ್ನು ಹೊಂದಿರುತ್ತದೆ. ಮತ್ತೊಮ್ಮೆ, ಭಾರತದ ಅರ್ಹತೆ ಸಂಪೂರ್ಣವಾಗಿ ಸರಾಸರಿ ರನ್ ರೇಟ್ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಉಳಿದಿರುವ ಪಂದ್ಯಗಳು

ಫೆಬ್ರವರಿ 23: ವೆಸ್ಟ್ ಇಂಡೀಸ್ ವಿರುದ್ಧ ಜಿಂಬಾಬ್ವೆ (ಮುಂಬೈ)

ಫೆಬ್ರವರಿ 26: ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ (ಅಹಮದಾಬಾದ್)

ಫೆಬ್ರವರಿ 26: ಭಾರತ ವಿರುದ್ಧ ಜಿಂಬಾಬ್ವೆ (ಚೆನ್ನೈ)

ಮಾರ್ಚ್ 1: ದಕ್ಷಿಣ ಆಫ್ರಿಕಾ ವಿರುದ್ಧ ಜಿಂಬಾಬ್ವೆ (ದೆಹಲಿ)

ಮಾರ್ಚ್ 1: ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2nd PUC result ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ; ಕೊನೆಯ ಸ್ಥಾನ ಯಾವ ಜಿಲ್ಲೆಗೆ? ಟಾಪರ್ ಯಾರು?

ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ. 60ಕ್ಕೂ ಹೆಚ್ಚು ಮತದಾನ

ಪತ್ನಿಗಾಗಿ ಅಧಿಕಾರ ದುರುಪಯೋಗ: 15 ದಿನಕ್ಕೆ ಕಾರ್ಮಿಕ ಸಚಿವರನ್ನು ವಜಾಗೊಳಿಸಿದ ನೇಪಾಳ ಪ್ರಧಾನಿ!

ಇಸ್ರೇಲ್ ಮಹಾ ಬೇಟೆ: ಹಿಜ್ಬುಲ್ಲಾ ಉಗ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸಿಮ್ ಹತ್ಯೆ!

ಕೊಪ್ಪಳ: ನವ ವಿವಾಹಿತೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​: ಮುಸ್ಲಿಂ ಯುವಕನ ಜತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

SCROLL FOR NEXT