ಮೆಗ್ ಲ್ಯಾನಿಂಗ್‌ 
ಕ್ರಿಕೆಟ್

WPL 2026: ನಾಯಕಿ ಸ್ಥಾನದಿಂದ ದೀಪ್ತಿ ಶರ್ಮಾ ಔಟ್; ಮೆಗ್ ಲ್ಯಾನಿಂಗ್‌ಗೆ ಯುಪಿ ವಾರಿಯರ್ಸ್ ಸಾರಥ್ಯ!

WPL ನಲ್ಲಿ ನಾಯಕಿಯಾಗಿ ಲ್ಯಾನಿಂಗ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಮೂರು ಆವೃತ್ತಿಗಳಲ್ಲಿ DC ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ (WPL) 2026ಕ್ಕೂ ಮೊದಲು ಯುಪಿ ವಾರಿಯರ್ಸ್ (UP) ತಂಡವು ಆಸ್ಟ್ರೇಲಿಯಾದ ಐಕಾನ್ ಮೆಗ್ ಲ್ಯಾನಿಂಗ್ ಅವರನ್ನು ತಮ್ಮ ಹೊಸ ನಾಯಕಿಯಾಗಿ ನೇಮಿಸಿದೆ. ಹಿಂದಿನ ಆವೃತ್ತಿವರೆಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಭಾಗವಾಗಿದ್ದ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ ಅನ್ನು 2025ರಲ್ಲಿ ನಡೆದ ಮೆಗಾ ಹರಾಜಿನಲ್ಲಿ 1.90 ಕೋಟಿ ರೂ.ಗಳಿಗೆ ಖರೀದಿಸಲಾಯಿತು. 2025ರ WPL ನಲ್ಲಿ UPW ತಂಡದ ಸ್ಟ್ಯಾಂಡ್-ಇನ್ ನಾಯಕಿಯಾಗಿದ್ದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರ ಬದಲಿಗೆ ಮೆಗ್ ಲ್ಯಾನಿಂಗ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

WPL ನಲ್ಲಿ ನಾಯಕಿಯಾಗಿ ಲ್ಯಾನಿಂಗ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಮೂರು ಆವೃತ್ತಿಗಳಲ್ಲಿ DC ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. UPW ತಂಡವು ತಮ್ಮ ಚೊಚ್ಚಲ WPL ಟ್ರೋಫಿ ಗೆಲ್ಲಲು ಸಹಾಯ ಮಾಡುವ ಜವಾಬ್ದಾರಿ ಈಗ ಆಸ್ಟ್ರೇಲಿಯನ್ ತಂಡದ ಆಟಗಾರ್ತಿ ಮೇಲಿದೆ. ತಂಡವು ಪೂರ್ಣ ಪ್ರಮಾಣದ ನವೀಕರಣಕ್ಕೆ ಒಳಗಾಗಿದ್ದು, WPL 2026ರ ಮೆಗಾ ಹರಾಜಿಗೆ ಮುಂಚಿತವಾಗಿ ಒಬ್ಬ ಅನ್‌ಕ್ಯಾಪ್ಡ್ ಆಟಗಾರ್ತಿಯನ್ನು (ಶ್ವೇತಾ ಸೆಹ್ರಾವತ್) ಮಾತ್ರ ಉಳಿಸಿಕೊಂಡಿತ್ತು.

'ಯುಪಿ ವಾರಿಯರ್ಜ್ ತಂಡದ ನಾಯಕಿಯಾಗಿ ಆಯ್ಕೆಯಾಗಿರುವುದು ನಿಜಕ್ಕೂ ಗೌರವ. ಡಬ್ಲ್ಯುಪಿಎಲ್ ನಾಲ್ಕನೇ ಸೀಸನ್‌ಗೆ ಕಾಲಿಡುತ್ತಿದ್ದಂತೆ, ಲೀಗ್ ವಿಕಸನಗೊಂಡಿದೆ. ಕ್ರಿಕೆಟ್‌ನ ಗುಣಮಟ್ಟ, ಸ್ಪರ್ಧಾತ್ಮಕತೆ ಮತ್ತು ಅತ್ಯಾಕರ್ಷಕ ಹೊಸ ಪ್ರತಿಭೆಗಳ ಹೊರಹೊಮ್ಮುವಿಕೆ ಪ್ರತಿ ವರ್ಷವೂ ಗುಣಮಟ್ಟವನ್ನು ಹೆಚ್ಚಿಸುತ್ತಲೇ ಇದೆ ಎಂಬುದನ್ನು ನೋಡುವುದು ಅದ್ಭುತವಾಗಿದೆ. ಇದು ಅಂತರರಾಷ್ಟ್ರೀಯ ಅನುಭವ ಮತ್ತು ಭಾರತೀಯ ಆಟಗಾರರ ಬಲವಾದ ಮಿಶ್ರಣವನ್ನು ಹೊಂದಿರುವ ಪ್ರತಿಭಾನ್ವಿತ ಗುಂಪು ಮತ್ತು ನಾನು ನಿಜವಾಗಿಯೂ ಮುಂದಿನ ಸವಾಲನ್ನು ಎದುರು ನೋಡುತ್ತಿದ್ದೇನೆ. ನಾವು ಒಟ್ಟಾಗಿ ಶ್ರಮಿಸುತ್ತೇವೆ ಮತ್ತು ಟ್ರೋಫಿಯನ್ನು ಎತ್ತುವ ಪ್ರತಿಯೊಂದು ಅವಕಾಶವನ್ನೂ ನೀಡುತ್ತೇವೆ' ಎಂದು ಲ್ಯಾನಿಂಗ್ ಹೇಳಿದರು.

ಯುಪಿ ವಾರಿಯರ್ಸ್ ತಂಡವು ಜನವರಿ 10 ರಂದು ನವಿ ಮುಂಬೈನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸುವ ಮೂಲಕ ತಮ್ಮ WPL 2026 ಅಭಿಯಾನವನ್ನು ಆರಂಭಿಸಲಿದೆ. ಫೈನಲ್ ಪಂದ್ಯ ಫೆಬ್ರುವರಿ 5 ರಂದು ವಯೋದರದಲ್ಲಿ ನಡೆಯಲಿದೆ.

ಯುಪಿ ವಾರಿಯರ್ಸ್ ತಂಡ

ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸೋಫಿ ಎಕಲ್‌ಸ್ಟೋನ್, ಮೆಗ್ ಲ್ಯಾನಿಂಗ್, ಫೀಬೆ ಲಿಚ್‌ಫೀಲ್ಡ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಆಶಾ ಶೋಭನಾ, ದೀಂದ್ರಾ ಡಾಟಿನ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಗಿರಿ, ತಾರಾ ನಾರಿಸ್, ಚೋಲೆ ಟ್ರಯಾನ್, ಸುಮನ್ ಮೀನಾ, ಜಿ ತ್ರಿಶಾ, ಪ್ರತೀಕಾ ರಾವಲ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವೆನೆಜುವೆಲಾ ಮೇಲೆ ಅಮೆರಿಕ ಮತ್ತೊಂದು ದಾಳಿ; ತೈಲ ಟ್ಯಾಂಕರ್ ವಶಕ್ಕೆ, ರಷ್ಯಾ ಖಂಡನೆ, Video

ಜನಗಣತಿ 2027: ಮನೆ ಪಟ್ಟಿಗಳನ್ನು ಒಳಗೊಂಡ ಮೊದಲ ಹಂತ ಏಪ್ರಿಲ್ 1 ರಿಂದ ಆರಂಭ

'ಹೊಡಿತಾಳೆ.. ಬಡಿತಾಳೆ ನನ್ ಹೆಡ್ತಿ': ನಟ Dhanush ಪೊಲೀಸ್ ದೂರು! ಮದುವೆಯಾದ 9 ತಿಂಗಳಿಗೇ ಬೀದಿಗೆ ಬಂದ ಸಂಸಾರ!

'ಗಂಡಸರ ಮನಸ್ಸೂ ಅರ್ಥವಾಗಲ್ಲ, ಯಾವಾಗ ರೇಪ್‌/ಕೊಲೆ ಮಾಡ್ತಾರೋ ಗೊತ್ತಿಲ್ಲ': ನಟಿ ರಮ್ಯಾ ವಿವಾದಾತ್ಮಕ ಪೋಸ್ಟ್

10 ವರ್ಷಗಳಲ್ಲಿ ಗುಜರಾತ್ ಬಿಜೆಪಿ ಸಂಸದರ ಆಸ್ತಿ ಹಲವು ಪಟ್ಟು ಹೆಚ್ಚಳ: ADR ವರದಿ

SCROLL FOR NEXT