ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ನಾಲ್ಕನೇ ಆವೃತ್ತಿಯು ಇಂದು (ಜನವರಿ 9)ಅಧಿಕೃತವಾಗಿ ಆರಂಭವಾಗಲಿದೆ. ನವೆಂಬರ್‌ನಲ್ಲಿ ನಡೆದ ಬೃಹತ್ ಮೆಗಾ-ಹರಾಜಿನಲ್ಲಿ ತಂಡಗಳನ್ನು ಪುನರ್ ರಚಿಸಿದ ಫ್ರಾಂಚೈಸಿಗಳು ಹೊಸ ನಾಯಕತ್ವವನ್ನು ಪರಿಚಯಿಸಿವೆ. ಇದು ಈ ಆವೃತ್ತಿಯನ್ನು ಅತ್ಯಂತ ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಭರವಸೆ ನೀಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡವು 2024ರ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಇಂದು ರಾತ್ರಿ ಸೆಣಸಲಿದೆ.
ಈ ಪಂದ್ಯಾವಳಿಯು ಶುಕ್ರವಾರದಿಂದ ನವಿ ಮುಂಬೈನಲ್ಲಿ ಆರಂಭವಾಗಲಿದ್ದು, ಫೆಬ್ರುವರಿ 5 ರಂದು ಗುರುವಾರ ವಡೋದರಾದಲ್ಲಿ ಫೈನಲ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ. 22 ಪಂದ್ಯಗಳ ಸೀಸನ್ ಎರಡು ಲೆಗ್‌ಗಳಲ್ಲಿ ವಿಭಜನೆಯಾಗಿದ್ದು, ಮೊದಲ 11 ಪಂದ್ಯಗಳು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮತ್ತು ಉಳಿದ ಲೀಗ್ ಪಂದ್ಯಗಳು ಮತ್ತು ಪ್ಲೇಆಫ್‌ಗಳು ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ.
28 ದಿನ ನಡೆಯಲಿರುವ ಪಂದ್ಯಾವಳಿಯಲ್ಲಿ 22 ಲೀಗ್ ಪಂದ್ಯಗಳು ಮತ್ತು ಒಂದು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ನಡೆಯಲಿವೆ. ಡಬಲ್-ಹೆಡರ್ ದಿನಗಳಲ್ಲಿ ಆರಂಭಿಕ ಪಂದ್ಯಗಳನ್ನು ಹೊರತುಪಡಿಸಿ, ಎಲ್ಲ ಸಂಜೆ ಪಂದ್ಯಗಳು ಪ್ರೈಮ್ ಟೈಮ್‌ನಲ್ಲಿ ಪ್ರಾರಂಭವಾಗುತ್ತವೆ.
ಟೇಬಲ್-ಟಾಪರ್‌ಗಳು ನೇರವಾಗಿ ಫೈನಲ್‌ಗೆ ಹೋಗುತ್ತವೆ ಮತ್ತು ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಫೆಬ್ರುವರಿ 3 ರಂದು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗುತ್ತವೆ.
ನವಿ ಮುಂಬೈನಲ್ಲಿ 11 ಆರಂಭಿಕ ಪಂದ್ಯಗಳು
1. ಜನವರಿ 9 ರಂದು ಮುಂಬೈ ಇಂಡಿಯನ್ಸ್ (MI) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
2. ಜನವರಿ 10 ರಂದು ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್
3. ಜನವರಿ 10 ರಂದು ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
4. ಜನವರಿ 11 ರಂದು ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್
5. ಜನವರಿ 12 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್
6. ಜನವರಿ 13 ರಂದು ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್
7. ಜನವರಿ 14 ರಂದು ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್
8. ಜನವರಿ 15 ರಂದು ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್
9. ಜನವರಿ 16 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್
10. ಜನವರಿ 17 ರಂದು ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್
11. ಜನವರಿ 17 ರಂದು ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಡೋದರದಲ್ಲಿ ಉಳಿದ ಪಂದ್ಯಗಳು
12. ಜನವರಿ 19 ರಂದು ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
13. ಜನವರಿ 20 ರಂದು ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
14. ಜನವರಿ 22 ರಂದು ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್
15. ಜನವರಿ 24 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್
16. ಜನವರಿ 26 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್
17. ಜನವರಿ 27 ರಂದು ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್
18. ಜನವರಿ 29 ರಂದು ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
19. ಜನವರಿ 30 ರಂದು ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್
20. ಫೆಬ್ರುವರಿ 1 ರಂದು ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್
21. ಫೆಬ್ರುವರಿ 3 ರಂದು ಎಲಿಮಿನೇಟರ್
22. ಫೆಬ್ರುವರಿ 5 ರಂದು ಫೈನಲ್