ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ವಡೋದರಾದಲ್ಲಿ 45ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ನ್ಯೂಜಿಲೆಂಡ್ ವಿರುದ್ಧ 301 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಕೊಹ್ಲಿ 93 ರನ್‌ಗಳ ಮೂಲಕ ಆಸರೆಯಾದರು. 54ನೇ ಏಕದಿನ ಶತಕವನ್ನು ದಾಖಲಿಸಲು ಸಾಧ್ಯವಾಗದಿದ್ದರೂ, ಕೊಹ್ಲಿ 28,000 ರನ್‌ಗಳ ಗಡಿಯನ್ನು ದಾಟುವಲ್ಲಿ ಯಶಸ್ವಿಯಾದರು. ಈ ಮೂಲಕ ಸಚಿನ್ ತೆಂಡೂಲ್ಕರ್ ನಂತರ ಈ ಮೈಲಿಗಲ್ಲು ತಲುಪಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪಂದ್ಯದ ನಂತರದ ಸಂದರ್ಶನದಲ್ಲಿ ಹರ್ಷ ಭೋಗ್ಲೆ, ಭಾರತಕ್ಕಾಗಿ ಡಜನ್‌ಗಟ್ಟಲೆ ಪಂದ್ರಶ್ರೇಷ್ಠ ಪ್ರಶಸ್ತಿ ಮತ್ತು ಪಂದ್ಯಗಳನ್ನು ಗೆದ್ದ ಬಗ್ಗೆ ಕೊಹ್ಲಿಯನ್ನು ಕೇಳಿದರು. 37 ವರ್ಷದ ಕೊಹ್ಲಿ, ಕ್ರೀಡೆಯು ತನಗೆ ಸಾಕಷ್ಟು ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಯಾವುದೇ ಕಲ್ಪನೆ ಇಲ್ಲ. ನಾನು ಅದನ್ನು ಗುರಗಾಂವ್‌ನಲ್ಲಿರುವ ನನ್ನ ಅಮ್ಮನಿಗೆ ಕಳುಹಿಸುತ್ತೇನೆ; ಅವರು ಅವುಗಳನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ನನ್ನ ಇಡೀ ಪ್ರಯಾಣವನ್ನು ನಾನು ಹಿಂತಿರುಗಿ ನೋಡಿದರೆ, ಅದು ನನಗೆ ಒಂದು ಕನಸು ನನಸಾಗಿದ್ದಕ್ಕಿಂತ ಕಡಿಮೆಯಿಲ್ಲ. ನನಗೆ ಯಾವಾಗಲೂ ನನ್ನ ಸಾಮರ್ಥ್ಯ ಏನೆಂಬುದು ತಿಳಿದಿವೆ. ನಾನು ಇಂದು ಇರುವ ಸ್ಥಿತಿಗೆ ನಾನು ಸಾಕಷ್ಟು ಶ್ರಮಿಸಿದ್ದೇನೆ. ದೇವರು ನನಗೆ ತುಂಬಾ ಆಶೀರ್ವದಿಸಿದ್ದಾನೆ ಮತ್ತು ನನ್ನ ಹೃದಯದಲ್ಲಿ ಬಹಳಷ್ಟು ಕೃತಜ್ಞತೆ ಇದೆ. ನನಗೆ ಹೆಮ್ಮೆ ಅನಿಸುತ್ತದೆ' ಎಂದು ಕೊಹ್ಲಿ ಹೇಳಿದರು.
'ನಾನು ಆಡುತ್ತಿರುವ ರೀತಿಯನ್ನು ನೋಡಿದರೆ, ನಾನು ಮೈಲಿಗಲ್ಲುಗಳ ಬಗ್ಗೆ ಯೋಚಿಸುತ್ತಿಲ್ಲ. ನಾವು ಮೊದಲು ಬ್ಯಾಟಿಂಗ್ ಮಾಡಿದ್ದರೆ, ನಾನು ಇನ್ನೂ ಕಠಿಣವಾಗಿ ಆಡುತ್ತಿದ್ದೆ. ಅನುಭವವು ಸಹಾಯ ಮಾಡುತ್ತದೆ. ಆದರೆ, ಮುಖ್ಯ ವಿಷಯವೆಂದರೆ ತಂಡವನ್ನು ಮುನ್ನಡೆಸಿ ಗೆಲುವಿನ ಕಡೆಗೆ ತರುವುದು. ಮೂಲ ಉದ್ದೇಶವೆಂದರೆ ನಾನು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಮತ್ತು ಪರಿಸ್ಥಿತಿ ಕಷ್ಟಕರವಾಗಿದ್ದರೆ, ನಾನು ಆಕ್ರಮಣಕಾರಿ ಹೊಡೆತಗಳನ್ನು ಆಡದೆ ಪ್ರತಿದಾಳಿ ಮಾಡಲು ಪ್ರಯತ್ನಿಸುತ್ತೇನೆ. ಇಂದು ನಾವು ಮೊದಲ 20 ಎಸೆತಗಳಲ್ಲಿ ತ್ವರಿತ ಪಾಲುದಾರಿಕೆಯನ್ನು ಪಡೆಯಬಹುದು ಎಂದು ನನಗೆ ಅನಿಸಿತು' ಎಂದು ಅವರು ಹೇಳಿದರು.
ಕೊಹ್ಲಿ ತಮಗೂ ಮುಂದೆ ಬ್ಯಾಟಿಂಗ್ ಮಾಡುತ್ತಿರುವ ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವಿಕೆಟ್ ಬಿದ್ದ ನಂತರ ಕೊಹ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆಂದು ತಿಳಿದು ಇಡೀ ಪ್ರೇಕ್ಷಕರು ಒಬ್ಬರು ಔಟ್ ಆದಾಗ ಹರ್ಷೋದ್ಗಾರ ವ್ಯಕ್ತಪಡಿಸುತ್ತಾರೆ. ಇಂದು, ರೋಹಿತ್ ಶರ್ಮಾ ವಿಷಯದಲ್ಲೂ ಅದೇ ಸಂಭವಿಸಿತು. ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ಎಂಎಸ್ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವಾಗಲೆಲ್ಲ ಅದೇ ಅನುಭವವನ್ನು ಅನುಭವಿಸುತ್ತಾರೆ.
'ನಿಜವಾಗಿಯೂ ನನಗೆ ಅದರ (ಅವರ ಮುಂದಿರುವ ಬ್ಯಾಟರ್ ಔಟಾದಾಗ ಹರ್ಷೋದ್ಗಾರಗಳು) ಬಗ್ಗೆ ಬೇಸರವಾಗುತ್ತದೆ. ನಾನು ಅದನ್ನು ಎಂಎಸ್ ವಿಚಾರದಲ್ಲೂ ನೋಡಿದ್ದೇನೆ. ಪ್ರೇಕ್ಷಕರು ಉತ್ಸುಕರಾಗುತ್ತಾರೆಂದು ನನಗೆ ಅರ್ಥವಾಗಿದೆ. ನಾನು ಆಟದ ಮೇಲೆ ಗಮನ ಹರಿಸಲು ಪ್ರಯತ್ನಿಸುತ್ತೇನೆ. ನಾನು ಕೃತಜ್ಞನಾಗಿದ್ದೇನೆ; ಅದು ಒಂದು ಆಶೀರ್ವಾದ (ಜನರು ಬಂದು ಅವರನ್ನು ನೋಡುತ್ತಾರೆ). ಅವರ ಸಂತೋಷದ ಮುಖಗಳನ್ನು ನೋಡಿದಾಗ ನನಗೆ ಸಂತೋಷವಾಗುತ್ತದೆ' ಎಂದು ಕೊಹ್ಲಿ ತಿಳಿಸಿದರು.