ಡರಿಲ್ ಮಿಚೆಲ್ ಶತಕ ಸಂಭ್ರಮ 
ಕ್ರಿಕೆಟ್

3rd ODI: ಭಾರತದ ವಿರುದ್ಧ ಭರ್ಜರಿ ಶತಕ, ಹಲವು ದಾಖಲೆಗಳ ಬರೆದ Daryl Mitchell!

ಡರಿಲ್ ಮಿಚೆಲ್ ಕೇವಲ 131 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ಸಹಿತ 137 ರನ್ ಸಿಡಿಸಿದರು. ಗ್ಲೇನ್ ಫಿಲಿಪ್ಸ್ ಕೂಡ 88 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 106 ರನ್ ಚಚ್ಚಿದರು.

ಇಂದೋರ್: ಭಾರತದ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ನ್ಯೂಜಿಲೆಂಡ್ ಸ್ಟಾರ್ ಬ್ಯಾಟರ್ ಡರಿಲ್ ಮಿಚೆಲ್ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ.

ಇಂದೋರ್ ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ನಲ್ಲಿ ಡರಿಲ್ ಮಿಚೆಲ್ (137) ಮತ್ತು ಗ್ಲೇನ್ ಫಿಲಿಪ್ಸ್ (106) ಅವರ ಅಮೋಘ ಶತಕಗಳ ನೆರವಿನಿಂದ 8 ವಿಕೆಟ್ ಕಳೆದುಕೊಂಡು 337 ರನ್ ಪೇರಿಸಿತು.

ಆರಂಭಿಕ ಆಘಾತದ ಹೊರತಾಗಿಯೂ ನ್ಯೂಜಿಲೆಂಡ್ ಪರ ಡರಿಲ್ ಮಿಚೆಲ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 131 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ಸಹಿತ 137 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಗ್ಲೇನ್ ಫಿಲಿಪ್ಸ್ ಕೂಡ 88 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 106 ರನ್ ಚಚ್ಚಿದರು.

ಭಾರತ vs ನ್ಯೂಜಿಲೆಂಡ್ ಏಕದಿನ ಪಂದ್ಯದಲ್ಲಿ 4ನೇ ಗರಿಷ್ಠ ವೈಯುಕ್ತಿಕ ರನ್ ಗಳಿಕೆ

ಇನ್ನು ಈ ಪಂದ್ಯದಲ್ಲಿ ಮಿಚೆಲ್ ಗಳಿಸಿದ 137ರನ್ ನ್ಯೂಜಿಲೆಂಡ್ ಪರ ಭಾರತದ ವಿರುದ್ಧ ದಾಖಲಾದ ಬ್ಯಾಟರ್ ಒಬ್ಬರ 4ನೇ ಗರಿಷ್ಠ ವೈಯುಕ್ತಿಕ ರನ್ ಗಳಿಕೆಯಾಗಿದೆ. ಇದಕ್ಕೂ ಮೊದಲು 2022ರಲ್ಲಿ ಆಕ್ಲೆಂಡ್ ಪಂದ್ಯದಲ್ಲಿ ಟಾಮ್ ಲಾಥಮ್ ಅಜೇಯ 145ರನ್ ಸಿಡಿಸಿದ್ದರು. ಇದು ಭಾರತದ ವಿರುದ್ಧ ನ್ಯೂಜಿಲೆಂಡ್ ಬ್ಯಾಟರ್ ಗಳಿಸಿದ ಗರಿಷ್ಠ ವೈಯುಕ್ತಿಕ ರನ್ ಗಳಿಕೆಯಾಗಿದೆ.

Highest individual scores for NZ vs IND (ODIs)

  • 145* - Tom Latham, Auckland, 2022

  • 140 - Michael Bracewell, Hyderabad, 2023

  • 138 - Devon Conway, Indore, 2023

  • 137 - Daryl Mitchell, Indore, 2026*

  • 134 - Daryl Mitchell, Wankhede, 2023

  • 131* - Daryl Mitchell, Rajkot, 2026

  • 130 - Daryl Mitchell, Dharamsala, 203

3 ಪಂದ್ಯಗಳ ಏಕದಿನ ಸರಣಿಯಲ್ಲಿ ಗರಿಷ್ಟ ರನ್

ಇನ್ನು ಇಂದಿನ ಶತಕವೂ ಸೇರಿದಂತೆ ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಡರಿಲ್ ಮಿಚೆಲ್ ಒಟ್ಟು 352 ರನ್ ಕಲೆಹಾಕಿದ್ದಾರೆ. ಆ ಮೂಲಕ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಗರಿಷ್ಟ ರನ್ ಕಲೆಹಾಕಿದ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನದ ಬಾಬಪ್ ಆಜಂ ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ 360 ರನ್ ಕಲೆಹಾಕಿದ್ದರು. ಅಂತೆಯೇ 2023ರಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ 360 ರನ್ ಕಲೆಹಾಕಿದ್ದರು.

Most runs in a 3-match ODI bilateral series

  • 360 - Babar Azam vs WI, 2016 (UAE)

  • 360 - Shubman Gill vs NZ, 2023 (Home)

  • 352 - Daryl Mitchell vs IND, 2026 (Away)*

  • 349 - Imrul Kayes vs ZIM, 2028 (Home)

  • 346 - P Nissanka vs AFG, 2024 (Home)

ಭಾರತದ ವಿರುದ್ಧ ಗರಿಷ್ಠ ಬ್ಯಾಟಿಂಗ್ ಸರಾಸರಿ

ಇನ್ನು ಭಾರತ ತಂಡದ ವಿರುದ್ಧ ಗರಿಷ್ಠ ಬ್ಯಾಟಿಂಗ್ ಸರಾಸರಿ ಹೊಂದಿರುವ ಬ್ಯಾಟರ್ ಗಳ ಪಟ್ಟಿಯಲ್ಲೂ ಡರಿಲ್ ಮಿಚೆಲ್ ಅಗ್ರಸ್ಥಾನಕ್ಕೇರಿದ್ದು, ಡರಿಲ್ ಮಿಚೆಲ್ ಬರೊಬ್ಬರಿ 74.1 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. 2ನೇ ಸ್ಥಾನದಲ್ಲಿ 71ರ ಸರಾಸರಿ ಹೊಂದಿರುವ ಜಾರ್ಜ್ ಬೈಲಿ ಇದ್ದು, 62.6 ಸರಾಸರಿ ಹೊಂದಿದ್ದ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಚನ್ 3, ಅದೇ ತಂಡ ಜಾಕಸ್ ಕಾಲಿಸ್ 61.4 ಸರಾಸರಿಯೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

Highest ODI Avg vs India (min 500 runs)

  • 74.1 - Daryl Mitchell*

  • 71.0 - George Bailey

  • 62.6 - Gary Kirsten

  • 61.4 - Jacques kallis

  • 59.9 - Usman Khawaja

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮ್ಮ ಕ್ಷೇತ್ರ ವರುಣಾದಲ್ಲಿ 324 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

ಸಾಕಪ್ಪ ಹೋಗು ಎಷ್ಟು ಹೊಡಿತೀಯಾ: ಶತಕ ಸಿಡಿಸಿದ ಕಿವೀಸ್ ಬ್ಯಾಟ್ಸ್‌ಮನ್‌ನನ್ನು ಪೆವಿಲಿಯನ್‌ಗೆ ತಳ್ಳಿದ Kohli, Video

KSRTC ಸೇರಿದಂತೆ ನಾಲ್ಕು ನಿಗಮಗಳ ನೌಕರರಿಂದ ಮುಷ್ಕರ ಘೋಷಣೆ: ಜ. 29 ರಂದು ಬೆಂಗಳೂರು ಚಲೋ

ಮಹಾ ಸ್ಥಳೀಯ ಸಂಸ್ಥೆ ಚುನಾವಣೆ: ಕೇವಲ ಒಂದು ಮತದಿಂದ ಸೇನಾ-ಯುಬಿಟಿ ಅಭ್ಯರ್ಥಿ ಗೆಲವು!

BBK 12: ಟಾಪ್ 6ರಿಂದ ಹೊರಬಂದ 'ಟಾಸ್ಕ್ ಮಾಸ್ಟರ್' ಧನುಷ್, ಅಭಿಮಾನಿಗಳಿಗೆ ಶಾಕ್

SCROLL FOR NEXT