ಟೀಂ ಇಂಡಿಯಾದಿಂದ ಸಾಕಷ್ಟು ದೂರವಿದ್ದ ಬಳಿಕವೂ ಅವಕಾಶ ಸಿಕ್ಕಾಗಲೆಲ್ಲ ಡೆತ್ ಓವರ್‌ಗಳಲ್ಲಿ ಪ್ರಭಾವ ಬೀರುವಲ್ಲಿ ರಿಂಕು ಸಿಂಗ್ ಎಂದಿಗೂ ಹಿಂದುಳಿದೇ ಇಲ್ಲ. ಸೆಪ್ಟೆಂಬರ್‌ನಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಅವರು ಎದುರಿಸಿದ ಏಕೈಕ ಬಾಲ್‌ನಲ್ಲಿ ಏಷ್ಯಾಕಪ್-ವಿಜೇತ ಫೋರ್ ಹೊಡೆದ ನಂತರ, ರಿಂಕು ಆಸ್ಟ್ರೇಲಿಯಾದಲ್ಲಿ ನಡೆದ T20 ಸರಣಿಯಲ್ಲಿ ಬೆಂಚ್‌ನಲ್ಲಿ ಕುಳಿತಿದ್ದರು. ತಂಡದ ಭಾಗವಾಗಿದ್ದ ಒಂದು ಪಂದ್ಯದಲ್ಲಿ ಅವರು ಬ್ಯಾಟ್ ಮಾಡಲು ಆಗಲಿಲ್ಲ. ಇದೀಗ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ರಿಂಕು ಸಿಂಗ್, ಮೊದಲ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. .
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ 20 ಎಸೆತಗಳಲ್ಲಿ ಔಟಾಗದೆ 44 ರನ್ ಗಳಿಸುವುದರೊಂದಿಗೆ ತಂಡಕ್ಕೆ ನೆರವಾಗಿದ್ದಾರೆ. ಡೆರಿಲ್ ಮಿಚೆಲ್ ಅವರ 20ನೇ ಓವರ್‌ನಲ್ಲಿ ಒಂದೆರಡು ಸಿಕ್ಸರ್‌ಗಳು ಮತ್ತು ಬೌಂಡರಿಗಳು ಬಾರಿಸಿದ ರಿಂಕು ಸಿಂಗ್ ಭಾರತವು ಏಳು ವಿಕೆಟ್ ನಷ್ಟಕ್ಕೆ 238 ರನ್ ಕಲೆಹಾಕಲು ನೆರವಾದರು.
'ತಂಡದ ಒಳಗೆ ಮತ್ತು ಹೊರಗೆ ಇದ್ದಾಗ ನನ್ನ ಮೇಲೆ ಒತ್ತಡವಿತ್ತು. ಸಿಂಗಲ್ಸ್, ಡಬಲ್ಸ್ ಮತ್ತು ನಡುವೆ ಬೌಂಡರಿ ಹೊಡೆಯುವುದು ಯೋಜನೆಯಾಗಿತ್ತು. ಹಾಗೆಯೇ ಕೊನೆಯವರೆಗೂ ಉಳಿದು, ಇನಿಂಗ್ಸ್ ಮುಗಿಸುವುದಾಗಿತ್ತು. ಅದನ್ನೇ ನಾನು ಮಾಡಿದ್ದೇನೆ' ಎಂದು ರಿಂಕು ಸಿಂಗ್ ಹೇಳಿದ್ದಾರೆ.
ಶುಭಮನ್ ಅಗ್ರಸ್ಥಾನದಲ್ಲಿದ್ದ ಕಾರಣ, ರಿಂಕು ಸಿಂಗ್ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಿತ್ತು. ಈಗ ಗಿಲ್ ತಂಡದಿಂದ ಹೊರಗುಳಿದಿರುವುದರಿಂದ, ಆರಂಭಿಕ ಆಟಗಾರನಾಗಿ ವಿಕೆಟ್-ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆಗೆ ಕೆಳ ಕ್ರಮಾಂಕದಲ್ಲಿ ಫಿನಿಶರ್ ಆಗಲು ರಿಂಕುಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ವಿಶೇಷವಾಗಿ ವೇಗಿಗಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ರಿಂಕು ಸಾಮರ್ಥ್ಯವು ಗಮನಾರ್ಹವಾಗಿದೆ.
'ಹಾರ್ದಿಕ್ ಅವರ ಅಸಾಧಾರಣ ಫಿನಿಶಿಂಗ್ ಸಾಮರ್ಥ್ಯದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಶಿವಂ ದುಬೆ ಫಿನಿಶರ್ ಅಲ್ಲ. ಆದರೆ, ಸ್ಪಿನ್ ವಿರುದ್ಧ ಉತ್ತಮವಾಗಿ ಆಡುತ್ತಾರೆ. ಈಗ ಸಂಜು ಸ್ಯಾಮ್ಸನ್ ಅವರು ಆರಂಭಿಕರಾಗಿ ಲಾಕ್ ಆಗಿದ್ದಾರೆ ಮತ್ತು ಇಶಾನ್ ಕಿಶನ್ ವಿಕೆಟ್-ಕೀಪರ್ ಬ್ಯಾಟರ್ ಆಗಿ ಹಿಂತಿರುಗಿದ್ದಾರೆ. ಇನ್ನೇನು ಉಳಿದಿದೆ?. ನಿಮಗೆ ಡೆತ್ ಓವರ್‌ಗಳಲ್ಲಿ ಹಾರ್ದಿಕ್ ಜೊತೆ ಫಿನಿಶರ್ ಅಗತ್ಯವಿದೆ. ರಿಂಕುವಿಗಿಂತ ಉತ್ತಮವಾಗಿ ಯಾರು ಮಾಡಬಹುದು? ಜಿತೇಶ್ ಶರ್ಮಾ ಸ್ಪಿನ್ನರ್‌ಗಳ ವಿರುದ್ಧ ದೈತ್ಯಾಕಾರದ ಹಿಟ್ಟರ್ ಆಗಿದ್ದಾರೆ. ಆದರೆ, ವೇಗದ ಬೌಲಿಂಗ್ ವಿರುದ್ಧ ಮತ್ತು ಇನಿಂಗ್ಸ್ ಅಂತ್ಯದ ವೇಳೆಗೆ, ರಿಂಕು ಉತ್ತಮ ಸಂಖ್ಯೆಗಳು ಮತ್ತು ದಾಖಲೆ ಹೊಂದಿದ್ದಾರೆ ಮತ್ತು ಅದಕ್ಕಾಗಿಯೇ ಅವರು ರಿಂಕು ಸಿಂಗ್‌ಗೆ ಮರಳಿದ್ದಾರೆ' ಎಂದು ರಿಂಕು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ನಂತರ ಭಾರತದ ಸ್ಪಿನ್ ಶ್ರೇಷ್ಠ ಆರ್ ಅಶ್ವಿನ್ ತಮ್ಮ 'ಯೂಟ್ಯೂಬ್' ಚಾನೆಲ್‌ನಲ್ಲಿ ಹೇಳಿದ್ದಾರೆ.
19-20 ಓವರ್‌ಗಳಲ್ಲಿ ಅವರ ಸಂಖ್ಯೆಗಳು ದಿಗ್ಭ್ರಮೆಗೊಳಿಸುವಂತಿವೆ. ಅವರು ಭಾಗವಾಗಿರುವ 36 ಟಿ20ಗಳಲ್ಲಿ, ರಿಂಕು 19 ಮತ್ತು 20 ಓವರ್‌ಗಳಲ್ಲಿ 74 ಎಸೆತಗಳಲ್ಲಿ 213 ರನ್‌ಗಳನ್ನು 287.83ರ ಸ್ಟ್ರೈಕ್ ರೇಟ್‌ನೊಂದಿಗೆ ಹೊಡೆದಿದ್ದಾರೆ. ಪಂದ್ಯದ ಮಾಡು ಇಲ್ಲವೇ ಮಡಿ ಹಂತದಲ್ಲಿ ಅವರು 22 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಫಿನಿಶರ್ ಆಗಿ ನೋಡಿದರೆ, ಅವರ ವೃತ್ತಿಜೀವನದ ಶೇ 35ಕ್ಕಿಂತ ಹೆಚ್ಚು ರನ್‌ಗಳು ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಬಂದಿರುವುದು ಆಶ್ಚರ್ಯವಲ್ಲ.