2026ರ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟ ನಂತರ ಇದೀಗ ಪಾಕಿಸ್ತಾನ ಸಹ ಟಿ20ನಿಂದ ಹೊರ ಹೋಗುವ ಸಾಧ್ಯತೆಗಳಿವೆ? ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಐಸಿಸಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಾಂಗ್ಲಾದೇಶಕ್ಕೆ ಆಗಿರುವ 'ಅನ್ಯಾಯ'ವನ್ನು ನಾವು ಖಂಡಿಸುತ್ತೇವೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವುದು ಪಾಕ್ ಸರ್ಕಾರದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಮ್ಮ ಐಪಿಎಲ್ 2026 ತಂಡದಿಂದ ತೆಗೆದುಹಾಕಿದಾಗ ಇದೆಲ್ಲವೂ ಪ್ರಾರಂಭವಾಯಿತು. ಇದರ ನಂತರ, ಬಾಂಗ್ಲಾದೇಶವು ಭಾರತದಲ್ಲಿ ತಮ್ಮ ಆಟಗಾರರ ಸುರಕ್ಷತೆಗೆ ಅಪಾಯವಿದೆ ಎಂದು ಹೇಳಿತ್ತು. ಹೀಗಾಗಿ ನಿನ್ನೆ ಸಂಜೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಬಿ ಅಧ್ಯಕ್ಷರಿಗೆ ಇಮೇಲ್ ಕಳುಹಿಸಲಾಗಿದ್ದು, ಭಾರತಕ್ಕೆ ಬರುವುದನ್ನು ನಿರ್ಧರಿಸಲು ನೀಡಲಾದ 24 ಗಂಟೆಗಳ ಗಡುವಿನೊಳಗೆ ಬಿಸಿಬಿ ಐಸಿಸಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ, ಆದ್ದರಿಂದ ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಡುವ ನಿರ್ಧಾರ ತೆಗೆದುಕೊಂಡಿತ್ತು. ಅಲ್ಲದೆ ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲೆಂಡ್ ಗೆ ಅವಕಾಶ ನೀಡಲಾಗಿದೆ.
2026ರ ಟಿ20 ವಿಶ್ವಕಪ್ ಫೆಬ್ರವರಿ 7ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭವಾಗುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮೇಲೆ ಕಟುವಾದ ದಾಳಿ ನಡೆಸಿದ್ದಾರೆ. ವಿವಾದದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಖ್ವಿ, ಐಸಿಸಿ ಎರಡು ಮಾನದಂಡಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಬಾಂಗ್ಲಾದೇಶವನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. ಐಸಿಸಿ ಮಂಡಳಿಯ ಸಭೆಯಲ್ಲಿ ನಾನು ಅದನ್ನೇ ಹೇಳಿದ್ದೇನೆ. ಎರಡು ಮಾನದಂಡಗಳನ್ನು ಸಹಿಸಲು ಸಾಧ್ಯವಿಲ್ಲ. ಅಲ್ಲಿ ಒಂದು ದೇಶವು ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಇನ್ನೊಂದು ದೇಶವು ಒತ್ತಡಕ್ಕೊಳಗಾಗುತ್ತದೆ ಎಂದು ಹೇಳಿದರು.
ಬಾಂಗ್ಲಾದೇಶವು ಪ್ರಮುಖ ಸದಸ್ಯ ರಾಷ್ಟ್ರ. ಅವರಿಗೆ ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡಬೇಕು. ಈ ಅನ್ಯಾಯ ನಡೆಯಬಾರದು ಎಂದು ನಖ್ವಿ ಒತ್ತಿ ಹೇಳಿದರು. ಬಾಂಗ್ಲಾದೇಶದಂತೆ ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರಗಿಡಲಾಗುತ್ತದೆಯೇ ಎಂದು ನಖ್ವಿ ಅವರನ್ನು ಕೇಳಿದಾಗ, ನಿರ್ಧಾರವು ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟದ್ದು ಎಂದು ಅವರು ಹೇಳಿದರು. ಪಾಕಿಸ್ತಾನ ಸರ್ಕಾರ ನಮಗೆ ಏನು ಹೇಳುತ್ತದೋ ಅದರ ಮೇಲೆ ನಮ್ಮ ನಿಲುವು ಇರುತ್ತದೆ. ಪ್ರಧಾನಿ ಪ್ರಸ್ತುತ ದೇಶದಲ್ಲಿಲ್ಲ. ಅವರು ಹಿಂದಿರುಗಿದಾಗ ನಾನು ಅಂತಿಮ ನಿರ್ಧಾರವನ್ನು ಪ್ರಕಟಿಸಲು ಸಾಧ್ಯವಾಗುತ್ತದೆ. ಇದು ಸರ್ಕಾರದ ನಿರ್ಧಾರ. ನಾವು ಸರ್ಕಾರದ ಮಾತನ್ನು ಕೇಳುತ್ತೇವೆ ಹೊರತು ಐಸಿಸಿಯನಲ್ಲ ಎಂದು ಹೇಳಿದರು.