ವೇಗಿ ಶಪೂರ್ ಜದ್ರಾನ್ 
ಕ್ರಿಕೆಟ್

ಮಾರಣಾಂತಿಕ ಕಾಯಿಲೆ: 38ನೇ ವಯಸ್ಸಿಗೆ ಖ್ಯಾತ ಕ್ರಿಕೆಟಿಗ ಸಾವು!

ಕೆಲವು ಸ್ಮರಣೀಯ ಗೆಲುವುಗಳಲ್ಲಿ ಭಾಗವಾಗಿದ್ದ ಬೌಲರ್ ಜದ್ರಾನ್ "ಅಫ್ಘಾನಿಸ್ತಾನ ಕ್ರಿಕೆಟ್‌ನ ಅಡಿಪಾಯ ಹಾಕಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ನವದೆಹಲಿ: ಅಪರೂಪದ ಮತ್ತು ಮಾರಣಾಂತಿಕ ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ (HLH) ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಅಫ್ಘಾನಿಸ್ತಾನದ ವೇಗಿ ಶಪೂರ್ ಜದ್ರಾನ್ ನಿಧನರಾಗಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು.

HLH ಒಂದು ಹೈಪರ್‌ಇನ್‌ಫ್ಲಮೇಟರಿ ಸಿಂಡ್ರೋಮ್ ಆಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಎಡಗೈ ವೇಗಿ ಜದ್ರಾನ್ 2009 ಮತ್ತು 2020 ರ ನಡುವೆ ಅಫ್ಘಾನಿಸ್ತಾನ ಪರ 44 ಏಕದಿನ ಮತ್ತು 36 ಟಿ20ಐಗಳನ್ನು ಆಡಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್ ಜದ್ರಾನ್ ಅವರ ನಿಧನಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಂತಾಪ ವ್ಯಕ್ತಪಡಿಸುತ್ತದೆ ಎಂದು ACB ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದೆ. ಕೆಲವು ಸ್ಮರಣೀಯ ಗೆಲುವುಗಳಲ್ಲಿ ಭಾಗವಾಗಿದ್ದ ಬೌಲರ್ ಜದ್ರಾನ್ "ಅಫ್ಘಾನಿಸ್ತಾನ ಕ್ರಿಕೆಟ್‌ನ ಅಡಿಪಾಯ ಹಾಕಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಸಮರ್ಪಣೆ, ಉತ್ಸಾಹ ಮತ್ತು ಅಚಲ ಬದ್ಧತೆಯು ದೇಶದ ಕ್ರಿಕೆಟ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅದು ಹೇಳಿದೆ.

ತಮ್ಮ ವೃತ್ತಿಜೀವನದುದ್ದಕ್ಕೂ ಶಪೂರ್ ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಗೌರವ, ಧೈರ್ಯ ಮತ್ತು ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಗಳು ಮತ್ತು ಸಾಧನೆಗಳು ಯಾವಾಗಲೂ ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದ ಪ್ರಮುಖ ಭಾಗವಾಗಿ ಉಳಿಯುತ್ತವೆ ಮತ್ತು ರಾಷ್ಟ್ರೀಯ ತಂಡದ ಸೇವೆಯಲ್ಲಿ ಅವರ ಪ್ರಯತ್ನಗಳನ್ನು ಎಂದಿಗೂ ಮರೆಯಲಾಗದು ಎಂದು ACB ಬರೆದುಕೊಂಡಿದೆ.

ಕಳೆದ ದಶಕದಲ್ಲಿ ಅಫ್ಘಾನಿಸ್ತಾನ ಬೌಲಿಂಗ್‌ನ ಆಧಾರ ಸ್ತಂಭಗಳಲ್ಲಿ ಜದ್ರಾನ್ ಒಬ್ಬರಾಗಿದ್ದರು. 2015 ರ ODI ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಫ್ಘಾನಿಸ್ತಾನದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಆಗಸ್ಟ್ 2009 ರಲ್ಲಿ ತಮ್ಮ ODI ಚೊಚ್ಚಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 4/24 ರನ್ ಗಳಿಸುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಫ್ಘಾನಿಸ್ತಾನ ಪರ 44 ಪಂದ್ಯಗಳಲ್ಲಿ ಒಟ್ಟಾರೆ 43 ವಿಕೆಟ್‌ಗಳನ್ನು ಕಬಳಿಸಿದರು.

2018 ರ ಜೂನ್‌ನಲ್ಲಿ ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 40 ರನ್ ಗಳಿಗೆ ಮೂರು ವಿಕೆಟ್ ಸೇರಿದಂತೆ 36 ಪಂದ್ಯಗಳಲ್ಲಿ 37 ವಿಕೆಟ್ ಪಡೆದುಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಜದ್ರಾನ್ ಅವರನ್ನು ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರಿಸಲಾಗಿತ್ತು. ನಾಯಕ ಹಶ್ಮತುಲ್ಲಾ ಶಾಹಿದಿ, ರಶೀದ್ ಸೇರಿದಂತೆ ಅಫ್ಘಾನಿಸ್ತಾನ ತಂಡದ ಹಲವು ಆಟಗಾರರು ಖಾನ್ ಮತ್ತು ಮೊಹಮ್ಮದ್ ನಬಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಯನಾಡು ಭೂಕುಸಿತ 'ಮಾನವ ನಿರ್ಮಿತ'; ಮಣ್ಣು ತೆರವುಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚಿಸಿದ್ರೂ ನಿರ್ಲಕ್ಷ್ಯ!

Varanasi Movie: ವಾರಣಾಸಿ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು! ವೈರಲ್ ಆಗಿರುವ ಫೋಟೋ ರಿಯಾಲಿಟಿ ಏನು?

ಪ್ರಜ್ವಲ್ ದೇವರಾಜ್ Vs ರಾಜ್ ಬಿ ಶೆಟ್ಟಿ: ಹೀಗೆ ಆದರೆ ಕನ್ನಡ ಇಂಡಸ್ಟ್ರಿ ಉದ್ಧಾರ ಆಗಲ್ಲ ಅಂದಿದ್ದೇಕೆ Raj B Shetty!

ರಾಮ ಮಂದಿರ ದೇಣಿಗೆ ಕಳ್ಳತನ ಆರೋಪ: ಮೌನ ಮುರಿದ VHP ನಾಯಕ ಚಂಪತ್ ರಾಯ್, ಹೇಳಿದ್ದೇನು?

ಕ್ರೌರ್ಯಕ್ಕಿಂತ ಲೈಂಗಿಕತೆ ಹೆಚ್ಚು ಸಮಸ್ಯೆಯಾಗಿದೆ: ‘ಟಾಕ್ಸಿಕ್’ ಟೀಸರ್ ಕುರಿತ ಟೀಕೆಗೆ ಹಾಲಿವುಡ್ ನಟ ಹೇಳಿದ್ದೇನು?