ಲಲಿತ್ ಮೋದಿ Online Desk
ಕ್ರಿಕೆಟ್

FEMA ಪ್ರಕರಣದಲ್ಲಿ ಲಲಿತ್ ಮೋದಿಗೆ ಬಿಗ್ ರಿಲೀಫ್; ED ವಿಧಿಸಿದ್ದ 10 ಕೋಟಿ ದಂಡ ರದ್ದು ಮಾಡಿದ ನ್ಯಾಯಮಂಡಳಿ

2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ 2ನೇ ಸೀಸನ್ ಗೆ ಸಂಬಂಧಿಸಿದಂತೆ ಸಂಬಂಧಿಸಿದ ಪ್ರಮುಖ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಐಪಿಎಲ್ ಟೂರ್ನಿಯ ರೂವಾರಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದೆ.

ನವದೆಹಲಿ: 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ 2ನೇ ಸೀಸನ್ ಗೆ ಸಂಬಂಧಿಸಿದಂತೆ ಸಂಬಂಧಿಸಿದ ಪ್ರಮುಖ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಪ್ರಕರಣದಲ್ಲಿ ಐಪಿಎಲ್ ಟೂರ್ನಿಯ ರೂವಾರಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದ್ದು, 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಮಂಡಳಿಯು ಅವರ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿ, ಜಾರಿ ನಿರ್ದೇಶನಾಲಯ ವಿಧಿಸಿದ್ದ ₹10.65 ಕೋಟಿ ದಂಡವನ್ನು ರದ್ದುಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಪ್ರಕರಣ?

2009 ರ ವೇಳೆ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತಿತ್ತು. ಆ ಸಮಯದಲ್ಲಿ ಐಪಿಎಲ್ ಪಂದ್ಯಾವಳಿಗಳಿಗೆ ಸಂಪೂರ್ಣ ಪೊಲೀಸ್ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತು. ಆ ಕಾರಣದಿಂದ ಬಿಸಿಸಿಐ, ಐಪಿಎಲ್ 2ನೇ ಸೀಸನ್ ಅನ್ನು ಭಾರತದ ಬದಲು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿತ್ತು.

ಈ ವೇಳೆ RBI ಪೂರ್ವಾನುಮತಿ ಇಲ್ಲದೆ ಸುಮಾರು ₹243.45 ಕೋಟಿ ಅಂದರೆ $49.8 ಮಿಲಿಯನ್ ವಿದೇಶಿ ವಿನಿಮಯವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ರವಾನಿಸಿದೆ ಎಂದು ED ಆರೋಪಿಸಿ, ಈ ಉಲ್ಲಂಘನೆಗೆ ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರ ಬೇಜವಾಬ್ದಾರಿ ಆರ್ಥಿಕ ನಿರ್ಧಾರಗಳೆ ಮುಖ್ಯ ಕಾರಣ ಎಂದು ಮೋದಿಗೆ 10.65 ಕೋಟಿ ದಂಡ ವಿಧಿಸಿತ್ತು.

ಮುಂದುವರೆದು ಸುದೀರ್ಘ 16 ವರ್ಷಗಳ ಕಾಲ ವಿಚಾರಣೆ ನಡೆಸಿದ ಸಫೆಮಾ ಅಪೀಲು ನ್ಯಾಯಾಧಿಕರಣವು, ಇಡಿ ವಾದವನ್ನು ತಿರಸ್ಕರಿಸಿ, ಐಪಿಎಲ್ 2009 ರ ಸಂದರ್ಭ ಬಿಸಿಸಿಐನ ಚಾಲ್ತಿ ಖಾತೆ ವಹಿವಾಟುಗಳು ಹಾಗೂ ಫೆಮಾ ನಿಯಮಗಳ ಉಲ್ಲಂಘನೆಗೆ ಲಲಿತ್ ಮೋದಿ ಜವಾಬ್ದಾರರಲ್ಲ ಎಂದಿದೆ. ಇದರೊಂದಿಗೆ, ಇಡಿ ಆರೋಪಿಸಿದಂತೆ ಅವರಿಗೆ ಯಾವುದೇ ಪ್ರತ್ಯೇಕ ಹಣಕಾಸಿನ ಅಧಿಕಾರ ಇರಲಿಲ್ಲ. ಅದರಲ್ಲೂ, ಬಿಸಿಸಿಐನಲ್ಲಿ ಮೋದಿಯವರ ಅಧಿಕಾರಾವಧಿ ಹಾಗೂ ಅಮಾನತ್ತು ನಿರ್ಲಕ್ಷಿಸಿ ದಂಡ ಹಾಕಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಮಂಡಳಿ, ಪ್ರಕರಣದಲ್ಲಿ ಮೋದಿ ಮೇಲಿದ್ದ ಪ್ರಕರಣಗಳನ್ನು ವಜಾ ಮಾಡಿ ದಂಡವನ್ನು ರದ್ದು ಮಾಡಿದೆ.

ಇನ್ನು ತೀರ್ಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಲಲಿತ್ ಮೋದಿ, "ನಾನು ಯಾವಾಗಲೂ ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇದು ಕೇವಲ ನನ್ನ ವೈಯಕ್ತಿಕ ಗೆಲುವಲ್ಲ, ಬದಲಿಗೆ ಕಾನೂನು ಪ್ರಕ್ರಿಯೆಗೆ ಸಂದ ಜಯ" ಎಂದು ತಿಳಿಸಿದ್ದಾರೆ.

ಇದರೊಂದಿಗೆ 2009ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದರಿಂದ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಬೇಕಾಗಿ ಬಂದಿತ್ತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜುಲೈ 20ರ ಪ್ರತಿಭಟನೆ ಕೇವಲ Trailer ಅಷ್ಟೇ, ಸರ್ಕಾರ ಮಣಿಯದಿದ್ದರೆ ಲಕ್ಷಾಂತರ ಮಂದಿ ದೆಹಲಿಗೆ: CJP ಹೊಸ ಎಚ್ಚರಿಕೆ

CJP protest: RAF ಯೋಧನ ಮೇಲೆ ಹಲ್ಲೆಯ ವಿಡಿಯೋ ವೈರಲ್; ಎಫ್‌ಐಆರ್ ದಾಖಲು

ಸಂಧಾನ ಬಯಸುತ್ತಿದ್ದಾರೆ ಆದರೆ, ನಮಗೆ ಆಸಕ್ತಿಯೇ ಇಲ್ಲ: ಇರಾನ್ ಇನ್ನೂ ಬೆಲೆ ತೆರಬೇಕಿದೆ; ಡೊನಾಲ್ಡ್ ಟ್ರಂಪ್

US-Iran ಸಮರ ತೀವ್ರ: 11ನೇ ದಿನವೂ ಅಮೆರಿಕದಿಂದ ಭೀಕರ ವಾಯುದಾಳಿ; ವಿಫಲವಾದ ಕದನ ವಿರಾಮ ಒಪ್ಪಂದ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನೆಡೆ

ವಿದ್ಯಾರ್ಥಿಗಳಿಗೆ ಗೊಂದಲವಲ್ಲ, ಭರವಸೆ ಬೇಕು; ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು 'ರಾಜಕೀಯ ದಾಳ'ವಾಗಿ ಬಳಸುತ್ತಿದ್ದಾರೆ: ಧರ್ಮೇಂದ್ರ ಪ್ರಧಾನ್ ವಾಗ್ದಾಳಿ