ರಾಜಸ್ಥಾನ್ ರಾಯಲ್ಸ್ - ನೇಹಲ್ ವಡೋಲಿಯಾ 
ಕ್ರಿಕೆಟ್

'ಆತ ವಿಚ್ಛೇದಿತ, ನಾನು ಆತನನ್ನು ಬ್ಲಾಕ್ ಮಾಡಿದ್ದೇನೆ': ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನ ಬಗ್ಗೆ ಬಾಲಿವುಡ್ ನಟಿ ಸ್ಫೋಟಕ ಹೇಳಿಕೆ

ಆಟಗಾರ ತಮ್ಮ ವಾಟ್ಸಾಪ್ ಸ್ಟೇಟಸ್‌ಗಳಿಗೆ 'ಹಾಟ್' ಮತ್ತು 'ಬ್ಯೂಟಿಫುಲ್' ಎಂದು ಕಮೆಂಟ್ ಮಾಡುತ್ತಿದ್ದರು. ಅವರೊಂದಿಗೆ ಮಾತನಾಡಲು ಆಸಕ್ತಿ ಇಲ್ಲ ಮತ್ತು ಅವರನ್ನು ಬ್ಲಾಕ್ ಮಾಡಿದ್ದೇನೆ ಎಂದು ನಟಿ ಹೇಳಿದ್ದಾರೆ.

'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ' ಚಿತ್ರದಲ್ಲಿನ ಚಿಕ್ಕ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ನೇಹಲ್ ವಡೋಲಿಯಾ ನೀಡಿರುವ ಹೇಳಿಕೆಯೊಂದು ಇದೀಗ ಅಚ್ಚರಿಗೆ ಕಾರಣವಾಗಿದೆ. ರಾಜಸ್ಥಾನ್ ರಾಯಲ್ಸ್ (RR) ತಂಡದ ಆಟರಾರೊಬ್ಬರು ತನಗೆ ಸಂದೇಶ ಕಳುಹಿಸುತ್ತಿದ್ದರು ಎಂದಿದ್ದಾರೆ. ಆಟಗಾರನ ಹೆಸರನ್ನು ಬಹಿರಂಗಪಡಿಸದಿದ್ದರೂ, ಅವರು ವಿಚ್ಛೇದಿತ ಎಂದು ಸುಳಿವು ನೀಡಿದ್ದಾರೆ.

ಆಟಗಾರ ತಮ್ಮ ವಾಟ್ಸಾಪ್ ಸ್ಟೇಟಸ್‌ಗಳಿಗೆ 'ಹಾಟ್' ಮತ್ತು 'ಬ್ಯೂಟಿಫುಲ್' ಎಂದು ಕಮೆಂಟ್ ಮಾಡುತ್ತಿದ್ದರು. ಅವರೊಂದಿಗೆ ಮಾತನಾಡಲು ತನಗೆ ಆಸಕ್ತಿ ಇಲ್ಲ ಮತ್ತು ಅವರನ್ನು ಬ್ಲಾಕ್ ಮಾಡಿದ್ದೇನೆ ಎಂದು ನಟಿ ಹೇಳಿದ್ದಾರೆ.

'ನಾನು ಆ ಹೆಸರನ್ನು ಹೇಳಬೇಕೆ? ಅವರದ್ದು ಪರಿಚಿತ ಹೆಸರೇನಲ್ಲ. ಅವರು ರಾಜಸ್ಥಾನ್ ರಾಯಲ್ಸ್‌ ತಂಡದವರು ಮತ್ತು ವಿಚ್ಛೇದನ ಪಡೆದಿದ್ದಾರೆ. ನಾನು ಅದನ್ನು ಈಗಲೇ ತೋರಿಸಬಲ್ಲೆ. ನಾನು ಈಗ ಅವರಿಗೆ ಸಂದೇಶ ಕಳುಹಿಸಿದರೆ, ಅವರು ಈಗಲೇ ನನಗೆ ಸಂದೇಶ ಕಳುಹಿಸಲು ಪ್ರಾರಂಭಿಸುತ್ತಾರೆ. ನಾನು ಅವರೊಂದಿಗೆ ಮಾತನಾಡಲು ಬಯಸುವುದಿಲ್ಲ. ಅವರು ನನ್ನ ಸ್ಟೇಟಸ್ ಬಗ್ಗೆ ಪ್ರತಿಕ್ರಿಯಿಸಿ ಹಾಟ್, ಬ್ಯೂಟಿಫುಲ್ ಮತ್ತು ಪ್ರೆಟಿ ಎಂದು ಕಮೆಂಟ್ ಮಾಡುತ್ತಾರೆ. ನಾನು ಅವರನ್ನು ಏಕೆ ನನಗೆ ಸಂದೇಶ ಕಳುಹಿಸುತ್ತಿದ್ದೀರಿ; ನಾನು ಮಾತನಾಡಲು ಬಯಸುವುದಿಲ್ಲ ಎಂದು ಕೇಳಿದೆ. ಹಾಗಾಗಿ, ಅದು ಕೆಲವು ದಿನಗಳವರೆಗೆ ನಿಲ್ಲುತ್ತದೆ ಮತ್ತು ನಂತರ, ಸ್ಟೇಟಸ್ ಅಪ್‌ಡೇಟ್ ನಂತರ ಅವರು ಸಂದೇಶ ಕಳುಹಿಸುತ್ತಾರೆ. ಅಭಿ ಮೈನೆ ಬ್ಲಾಕ್ ಹೈ ಕರ್ ದಿಯಾ ಹೈ (ನಾನು ಈಗ ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದೇನೆ)' ಎಂದು ನೇಹಲ್ ಸುನೋ ಇಂಡಿಯಾ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.

ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್

ಶುಭಮನ್ ಗಿಲ್ ಅವರ ಅದ್ಭುತ ಶತಕದ ನೆರವಿನಿಂದ, ಶುಕ್ರವಾರ ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2026ರ ಕ್ವಾಲಿಫೈಯರ್ 2ರಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವು ರಾಜಸ್ಥಾನ ರಾಯಲ್ಸ್ (RR) ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಈ ಸೋಲಿನೊಂದಿಗೆ, ಆರ್‌ಆರ್ ಈ ಆವೃತ್ತಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು, ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 96 ರನ್ ಗಳಿಸಿದರು. ಆರ್‌ಆರ್ ಅಂತಿಮವಾಗಿ 6 ವಿಕೆಟ್‌ ಕಳೆದುಕೊಂಡು 214 ರನ್ ಗಳಿಸಿತು. ಅತಿ ಕಡಿಮೆ ಎಸೆತದಲ್ಲಿಯೇ ಐಪಿಎಲ್‌ನಲ್ಲಿ 1,000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ವೈಭವ್ ಸೂರ್ಯವಂಶಿ ಪಾತ್ರರಾದರು. ಈ ಯುವ ಆಟಗಾರ 440 ಎಸೆತಗಳಲ್ಲಿಯೇ ಈ ದಾಖಲೆ ಬರೆದರು. ಆಂಡ್ರೆ ರಸೆಲ್ ಅವರ 545 ಎಸೆತಗಳ ದಾಖಲೆಯನ್ನು ಮುರಿದರು. ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಪವರ್‌ಪ್ಲೇನಲ್ಲಿ 500 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಹಮದಾಬಾದ್‌ನಲ್ಲಿ IPL ಫೈನಲ್; RCBಗೆ ಮಾತ್ರವಲ್ಲ, ಬೆಂಗಳೂರು, ರಾಜ್ಯದ ಯುವ ಜನತೆಗೆ ಮಾಡಿದ ಅನ್ಯಾಯ: ಡಿಕೆ ಶಿವಕುಮಾರ್- Video

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ದರ ಏಷ್ಟಿದೆ?

IPL 2026: ಬರೊಬ್ಬರಿ 5 ಪ್ರಶಸ್ತಿ, ಅದರಿಂದ Vaibhav Sooryavanshi ಗಳಿಸಿದ ಹಣ ಎಷ್ಟು ಕೋಟಿ ಗೊತ್ತಾ?

ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ; ನಿಲುವನ್ನು ಸ್ಪಷ್ಟಪಡಿಸಿದ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ!

IPL 2026: ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮಸ್ತ್ ಡ್ಯಾನ್ಸ್! Video ವೈರಲ್

SCROLL FOR NEXT