T20 ವಿಶ್ವಕಪ್ 2026 ಪಂದ್ಯಾವಳಿ ಮುಗಿದಿದ್ದು, ಟೀಂ ಇಂಡಿಯಾ ಮೂರನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆ ಬರೆದಿದೆ. ಪಂದ್ಯಾವಳಿಯಲ್ಲಿ ಅಜೇಯರಾಗಿ ಉಳಿದಿದ್ದ ದಕ್ಷಿಣ ಆಫ್ರಿಕಾವನ್ನು ಸೆಮಿಫೈನಲ್‌ನಲ್ಲಿ ಸೋಲಿಸುವ ಮೂಲಕ ನ್ಯೂಜಿಲೆಂಡ್ T20I ತಂಡವಾಗಿ ತಮ್ಮ ಪರಾಕ್ರಮವನ್ನು ಜಗತ್ತಿಗೆ ತೋರಿಸಿತು. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಸೂರ್ 8ಗೆ ಅರ್ಹತೆ ಪಡೆಯುವ ಮೂಲಕ ಜಿಂಬಾಬ್ವೆ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಸೋತ ಸೆಮಿ-ಫೈನಲಿಸ್ಟ್‌ಗಳಾದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸಹ ನಾಕ್‌ಔಟ್ ಆಗುವವರೆಗೂ ಅತ್ಯಂತ ಸ್ಥಿರವಾದ ತಂಡಗಳಾಗಿದ್ದವು.
ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಅವರು ದಕ್ಷಿಣ ಆಫ್ರಿಕಾ ತಂಡವನ್ನು T20 ವಿಶ್ವಕಪ್‌ನ 'ಮೂರ್ಖ ತಂಡ' ಎಂದು ಕರೆದಿದ್ದಾರೆ. ಏಕೆಂದರೆ, ದಕ್ಷಿಣ ಆಫ್ರಿಕಾ ತಂಡವು ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು. ಹೀಗಾಗಿ, ಒತ್ತಡದ ನಡುವೆಯೂ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಉತ್ತಮ ಅವಕಾಶ ಸಿಕ್ಕಿತು.
'ಟೂರ್ನಮೆಂಟ್‌ನ ಮೂರ್ಖ ತಂಡ ಯಾವುದೆಂದು ನಾನು ಭಾವಿಸುತ್ತೇನೆ ಎಂದರೆ, ಅದು ದಕ್ಷಿಣ ಆಫ್ರಿಕಾ. ಏಕೆಂದರೆ, ಸೂಪರ್ 8 ಪಂದ್ಯದಲ್ಲಿ ತಮ್ಮನ್ನು ಸೋಲಿಸಲು ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ತಂಡಕ್ಕೆ ಅವಕಾಶ ನೀಡಿದ್ದರೆ, ಭಾರತ ನಾಕೌಟ್ ಆಗುತ್ತಿತ್ತು. ಆದರೆ, ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಮೂಲಕ, ದಕ್ಷಿಣ ಆಫ್ರಿಕಾವು ಆಕಸ್ಮಿಕವಾಗಿ ಭಾರತಕ್ಕೆ ಮುನ್ನಡೆಯಲು ಸಹಾಯ ಮಾಡಿತು' ಎಂದು ವಾನ್ ಹೇಳಿದ್ದಾರೆ.
'ಆ ಪಂದ್ಯವನ್ನು ಗೆಲ್ಲುವ ಮೂಲಕ, ಅವರು ಭಾರತಕ್ಕೆ ಸೆಮಿಫೈನಲ್ ತಲುಪಲು ಅವಕಾಶ ಮಾಡಿಕೊಟ್ಟರು. ಭಾರತವು ನಂತರ ಜಿಂಬಾಬ್ವೆಯನ್ನು ಸೋಲಿಸಿತು, ನಂತರ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್‌ಗೆ ತಲುಪಿತು. ದಕ್ಷಿಣ ಆಫ್ರಿಕಾವು ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಬೇಕಿತ್ತು ಮತ್ತು ಆ ಪಂದ್ಯಕ್ಕಾಗಿ ಅವರು ಮೂರು ಆಟಗಾರರಿಗೆ ವಿಶ್ರಾಂತಿ ನೀಡಿದರು' ಎಂದರು.
ವಾನ್ ಈ ಹಿಂದೆ ಭಾರತವನ್ನು ವಿಶ್ವದ ಅತ್ಯುತ್ತಮ ವೈಟ್ ಬಾಲ್ ತಂಡ ಎಂದು ಕರೆದಿದ್ದರು. 'ಭಾರತವು ಅತ್ಯುತ್ತಮ ಟಿ20 ಕ್ರಿಕೆಟ್ ತಂಡವಾಗಿದೆ ಮತ್ತು 50-ಓವರ್ ಕ್ರಿಕೆಟ್ (ಏಕದಿನ) ನಲ್ಲಿಯೂ ಉತ್ತಮ ತಂಡವಾಗಿದೆ. ಒಟ್ಟಾರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸುವುದು ತುಂಬಾ ಕಷ್ಟ ಮತ್ತು ಅವರು ಆಟವನ್ನು ಬೇರೆ ಹಂತಕ್ಕೆ ಕೊಂಡೊಯ್ದಿದ್ದಾರೆ' ಎಂದು ಮೈಕೆಲ್ ವಾನ್ ಹೇಳಿದ್ದಾರೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಮೈಕೆಲ್ ವಾನ್ ಜಸ್ಪ್ರೀತ್ ಬುಮ್ರಾ ಅವರನ್ನು ಪ್ಲೇಯರ್ ಆಫ್ ದ ಟೂರ್ನಮೆಂಟ್ ಆಗಿ ಆಯ್ಕೆ ಮಾಡಿದರು. 'ಬುಮ್ರಾ ವೈಟ್-ಬಾಲ್ ಫಾರ್ಮ್ಯಾಟ್‌ಗಳಲ್ಲಿ ಅಸಾಧಾರಣವಾಗಿ ಅಪಾಯಕಾರಿ ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರನ್ನು ಹೆಚ್ಚು ಪರಿಣಾಮಕಾರಿಯಾಗಿರಬಹುದು ಅಥವಾ ವಿಕೆಟ್‌ಗಳನ್ನು ತೆಗೆಯಬಹುದು ಎಂದರು.
ವೆಸ್ಟ್ ಇಂಡೀಸ್ ವಿರುದ್ಧದ ವರ್ಚುವಲ್ ಕ್ವಾರ್ಟರ್‌ಫೈನಲ್, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಮೂರು ನಿರ್ಣಾಯಕ ಅರ್ಧಶತಕಗಳನ್ನು ಗಳಿಸಿದ ಸಂಜು ಸ್ಯಾಮ್ಸನ್, ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾದರು.