ಸೂರ್ಯಕುಮಾರ್ ಯಾದವ್‌ 
ಕ್ರಿಕೆಟ್

IPL 2026: 'ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ಗೆ ಬಿಟ್ಟುಕೊಡಬೇಕು'

ಹಾರ್ದಿಕ್ ಪಾಂಡ್ಯ ಅಡಿಯಲ್ಲಿ, ಮುಂಬೈ ಇಂಡಿಯನ್ಸ್ ತಂಡ 2024ರಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನ ಮತ್ತು ಐಪಿಎಲ್ 2025ರಲ್ಲಿ 4ನೇ ಸ್ಥಾನ ಪಡೆದಿತ್ತು.

ಐಪಿಎಲ್‌ 2026ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರು ಸೂರ್ಯಕುಮಾರ್ ಯಾದವ್ ಅವರಿಗೆ ಬಿಟ್ಟುಕೊಡಬೇಕೆಂದು ಭಾರತದ ಮಾಜಿ ಮುಖ್ಯ ಆಯ್ಕೆದಾರ ಕೆ ಶ್ರೀಕಾಂತ್ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಭಾರತವನ್ನು ಐತಿಹಾಸಿಕ 3ನೇ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ನಂತರ ಈ ಹೇಳಿಕೆ ನೀಡಿದ್ದಾರೆ. 2024ರ ಐಪಿಎಲ್‌ನಲ್ಲಿ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್‌ನಿಂದ ಕರೆತಂದು ರೋಹಿತ್ ಶರ್ಮಾ ಅವರ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಲಾಯಿತು. ಆಗ, ಅಭಿಮಾನಿಗಳು ಅವರನ್ನು ನಾಯಕನನ್ನಾಗಿ ಸ್ವೀಕರಿಸಲಿಲ್ಲ.

ತಮ್ಮ ಯೂಟ್ಯೂಬ್ ಚಾನೆಲ್‌ ವಿಡಿಯೋವೊಂದರಲ್ಲಿ ಮಾತನಾಡಿರುವ ಶ್ರೀಕಾಂತ್, ಹಾರ್ದಿಕ್ ಅವರೇ ಸ್ವತಃ ಐಪಿಎಲ್ 2026ನೇ ಆವೃತ್ತಿಯಲ್ಲಿ ಮುಂಬೈ ತಂಡದ ನಾಯಕತ್ವವನ್ನು ನಿರಾಕರಿಸಬೇಕು ಮತ್ತು ಟಿ20 ವಿಶ್ವಕಪ್ ವಿಜೇತ ನಾಯಕರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಡಿಯಲ್ಲಿ ಆಡಲು ಆಯ್ಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಅಡಿಯಲ್ಲಿ, ಮುಂಬೈ ಇಂಡಿಯನ್ಸ್ ತಂಡ 2024ರಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನ ಮತ್ತು ಐಪಿಎಲ್ 2025ರಲ್ಲಿ 4ನೇ ಸ್ಥಾನ ಪಡೆದಿತ್ತು. ಪಾಂಡ್ಯ ಕಳೆದ ಎರಡು ವರ್ಷಗಳಲ್ಲಿ ಮುಂಬೈ ತಂಡದ ನಾಯಕನಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಇಬ್ಬರು ಟಿ20 ವಿಶ್ವಕಪ್ ಗೆದ್ದ ನಾಯಕರು ಅವರ ಅಡಿಯಲ್ಲಿ ಆಡುತ್ತಿದ್ದಾರೆ.

'ರೋಹಿತ್ ಮತ್ತು ಸೂರ್ಯಕುಮಾರ್ ನೇತೃತ್ವದಲ್ಲಿ ಹಾರ್ದಿಕ್ ಪಾಂಡ್ಯ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಆಡಿದ್ದರು. ಹೀಗಾಗಿ, ಹಾರ್ದಿಕ್ ಸ್ವತಃ ನಾಯಕತ್ವವನ್ನು ನಿರಾಕರಿಸಬೇಕು ಮತ್ತು ಸೂರ್ಯ ಅವರನ್ನು ತಂಡವನ್ನು ಮುನ್ನಡೆಸಲು ಬಿಡಬೇಕು. ಹಾರ್ದಿಕ್ ಸ್ವತಃ ಇದನ್ನು ಮ್ಯಾನೇಜ್‌ಮೆಂಟ್‌ಗೆ ಹೇಳಿದರೆ, ವಿಷಯಗಳು ಇತ್ಯರ್ಥವಾಗುತ್ತವೆ. ಅವರು 'ಸೂರ್ಯ ತಂಡವನ್ನು ಮುನ್ನಡೆಸಲಿ, ನಾನು ಬೆಂಬಲಿಸುತ್ತೇನೆ' ಎಂದು ಹೇಳಬೇಕು' ಎಂದು ಶ್ರೀಕಾಂತ್ ಹೇಳಿದರು.

ಐಪಿಎಲ್ 2026ಕ್ಕೆ ಮುಂಬೈ ಇಂಡಿಯನ್ಸ್ ತಂಡ

ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಿಯಾನ್ ರಿಕಲ್ಟನ್, ರಾಬಿನ್ ಮಿಂಜ್, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫಂಜಾರ್, ಅಶ್ವನಿ ಕುಮಾರ್, ದೀಪಕ್ ಚಾಹರ್, ವಿಲ್ ಜ್ಯಾಕ್ಸ್, ರಘು ಶರ್ಮಾ, ರಾಜ್ ಅಂಗದ್ ಬಾವಾ, ಶೆರ್ಫೇನ್ ರುದರ್‌ಫೋರ್ಡ್, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಮೊಹಮ್ಮದ್ ಇಝಾರ್, ಡ್ಯಾನಿಶ್ ಮಾಲೆವಾರ್, ಅಥರ್ವ ಅಂಕೋಲೇಕರ್, ಮಯಾಂಕ್ ರಾವತ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಾದರೆ, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಇರಾನ್ ಕಠಿಣ ಎಚ್ಚರಿಕೆ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

ಉರಿದ ಹೊರ್ಮುಸ್; ಮುಂಚೂಣಿಗೆ ಬಂದ ಯುಎಸ್ ಮರೀನ್ಸ್ (ಜಾಗತಿಕ ಜಗಲಿ)

ಇಸ್ರೇಲ್ ಬುಡಕ್ಕೇ ಕೈ ಹಾಕಿದ ಇರಾನ್; Nuclear ಕೇಂದ್ರದ ಮೇಲೆ ಕ್ಷಿಪಣಿ ದಾಳಿ, ಧ್ವಂಸ?

ಆಫ್ರಿಕಾ, ದುಬೈವರೆಗೂ ಹಬ್ಬಿತ್ತು ನಟಿ 'ರನ್ಯಾ ರಾವ್' ಗೋಲ್ಡ್ ಸ್ಮಗ್ಲಿಂಗ್ ನೆಟ್ ವರ್ಕ್!

SCROLL FOR NEXT