ಸೌರವ್ ಗಂಗೂಲಿ 
ಕ್ರಿಕೆಟ್

'ಒರಟಾಗಿ ವರ್ತಿಸುವ ಅಗತ್ಯವಿಲ್ಲ': ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಸೌರವ್ ಗಂಗೂಲಿ ಸಲಹೆ!

'ಅವರು ತಮ್ಮ ತಂಡದ ಬಗ್ಗೆ ಸರಿಯಾದ ಮಾತುಗಳನ್ನಾಡುತ್ತಾರೆ, ವೈಯಕ್ತಿಕವಾಗಿ ಅಲ್ಲ. ತಂಡದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ' ಎಂದು ಹೇಳಿದರು.

ಕ್ರಿಕೆಟ್ ವಿಷಯಕ್ಕೆ ಬಂದಾಗ ಗೌತಮ್ ಗಂಭೀರ್ ಅವರ ಆಕ್ರಮಣಕಾರಿ ಸ್ವಭಾವ ಎಲ್ಲರಿಗೂ ತಿಳಿದಿದೆ. ಆಟಗಾರನಾಗಿ ಮತ್ತು ತರಬೇತುದಾರನಾಗಿ ಗಂಭೀರ್ ಅವರ ಆಕ್ರಮಣಕಾರಿ ಸ್ವಭಾವವು ಅವರ ಪರವಾಗಿ ಕೆಲಸ ಮಾಡಿರುವುದರ ಜೊತೆಗೆ ಅವರು ಮೈದಾನದಲ್ಲಿ ಘರ್ಷಣೆಗಳಲ್ಲಿ ಭಾಗಿಯಾಗುವಂತೆಯೂ ಮಾಡಿದೆ. ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಅವರು ಮೈದಾನದಲ್ಲಿಯೇ ಸಂಘರ್ಷಕ್ಕೆ ಇಳಿದಿದ್ದರು. ಆದಾಗ್ಯೂ, ಭಾರತದ ದಂತಕಥೆ ಸೌರವ್ ಗಂಗೂಲಿ, ಗಂಭೀರ್ ತಮ್ಮ ನಡವಳಿಕೆಯಲ್ಲಿ ರೂಡ್ ಅಥವಾ ಒರಟಾಗಿ ವರ್ತಿಸುವ ಅಗತ್ಯವಿಲ್ಲ ಎಂದು ಸೂಚಿಸಿದರು. ಅಲ್ಲದೆ, ಗಂಭೀರ್ ಟೀಂ ಇಂಡಿಯಾ ಡ್ರೆಸ್ಸಿಂಗ್ ಕೋಣೆಯಲ್ಲಿ ತುಂಬಿರುವ ಆದರ್ಶಗಳನ್ನು ಶ್ಲಾಘಿಸಿದರು.

'ಅವರು ಆಕ್ರಮಣಕಾರಿ ಆಗಿರಬಹುದು, ಒರಟಾಗಿರಬಹುದು. ಆದರೆ ಆ ನಡವಳಿಕೆಯು ಸ್ಪರ್ಧಿಸಿ ಗೆಲ್ಲುವ ಅವರ ಬಲವಾದ ಬಯಕೆಯಿಂದ ಬರುತ್ತದೆ. ಅವರು ವಾಸ್ತವವಾಗಿ ಒಳ್ಳೆಯ ವ್ಯಕ್ತಿಯಾಗಿರುವುದರಿಂದ ಆ ರೀತಿ ವರ್ತಿಸುವ ಅಗತ್ಯವಿಲ್ಲ. ನಾನು ಅವರೊಂದಿಗೆ ಭಾರತಕ್ಕಾಗಿ ಆಡಿದ್ದೇನೆ. ಆದರೆ, ಅವರ ತೀವ್ರ ಸ್ಪರ್ಧಾತ್ಮಕ ಸ್ವಭಾವವು ಮೈದಾನದಲ್ಲಿ ಅವರನ್ನು ಹಾಗೆ ವರ್ತಿಸುವಂತೆ ಮಾಡುತ್ತದೆ' ಎಂದು ಗಂಗೂಲಿ ರೆವ್‌ಸ್ಪೋರ್ಟ್ಜ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

'ಅವರು ತಮ್ಮ ತಂಡದ ಬಗ್ಗೆ ಸರಿಯಾದ ಮಾತುಗಳನ್ನಾಡುತ್ತಾರೆ, ವೈಯಕ್ತಿಕವಾಗಿ ಅಲ್ಲ. ತಂಡದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ' ಎಂದು ಹೇಳಿದರು.

ಗಂಭೀರ್ ಇತ್ತೀಚೆಗೆ ಎರಡು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಮೊದಲ ಮುಖ್ಯ ಕೋಚ್ ಆದರು. 2025ರ ಚಾಂಪಿಯನ್ಸ್ ಟ್ರೋಫಿ ಮತ್ತು 2026ರ ಟಿ20 ವಿಶ್ವಕಪ್ ವಿಜಯಗಳ ಚುಕ್ಕಾಣಿ ಹಿಡಿದಿದ್ದರು.

ಆದಾಗ್ಯೂ, ಗಂಭೀರ್ ಅವರ ನಿಜವಾದ ಪರೀಕ್ಷೆ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿದೆ ಎಂದು ಗಂಗೂಲಿ ಹೇಳಿದರು.

'ವೈಟ್ ಬಾಲ್‌ನಲ್ಲಿ ಅವರ ನಿಜವಾದ ಪರೀಕ್ಷೆ 2027 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಅಲ್ಲಿನ ಪರಿಸ್ಥಿತಿಗಳು ಅವರನ್ನು ಪರೀಕ್ಷಿಸುತ್ತವೆ. ಆದರೆ, ಅವರು ಹೊಂದಿರುವ ತಂಡದೊಂದಿಗೆ ಅವರು ಅದನ್ನು ಸರಿಯಾಗಿ ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ' ಎಂದು ಗಂಗೂಲಿ ಹೇಳಿದರು.

'ರೆಡ್ ಬಾಲ್‌ನಲ್ಲಿ, ಅವರು ಉತ್ತಮಗೊಳ್ಳಬೇಕು. ಮತ್ತು ಅದನ್ನು ಮಾಡುವ ಮಾರ್ಗವೆಂದರೆ ವಿಕೆಟ್ ಪಡೆಯುವ ಬಗ್ಗೆ ಕಡಿಮೆ ಯೋಚಿಸಬೇಕು. ಆ ಒತ್ತಡವನ್ನು ಮನಸ್ಥಿತಿಯಿಂದ ತೆಗೆದುಹಾಕಬೇಕು. 2024ರ ಭಾರತದ ಇಂಗ್ಲೆಂಡ್ ಟೆಸ್ಟ್ ಪ್ರವಾಸದ ಸಮಯದಲ್ಲಿ, ಅವರು ವಿಕೆಟ್‌ಗಳನ್ನು ಬಲವಂತಪಡಿಸುವತ್ತ ಹೆಚ್ಚು ಗಮನಹರಿಸಿದ್ದರಿಂದ ಅವರು ತೊಂದರೆ ಅನುಭವಿಸಿದರು. ಅವರು ಯಶಸ್ವಿಯಾಗಲು ಅತ್ಯಂತ ಸ್ಪಿನ್ ಸ್ನೇಹಿ ಪಿಚ್‌ಗಳು ಅಗತ್ಯವಿಲ್ಲ. ಉತ್ತಮ ವಿಕೆಟ್‌ಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ' ಎಂದರು.

ಭಾರತದ ಮುಖ್ಯ ಕೋಚ್ ಆಗಿ ಗಂಭೀರ್ ಅವರ ಮುಂದಿನ ಕಾರ್ಯಯೋಜನೆಗಳು ಐಪಿಎಲ್ 2026ರ ನಂತರ ಪ್ರಾರಂಭವಾಗಲಿದ್ದು, ಇಂಗ್ಲೆಂಡ್‌ನಲ್ಲಿ ದೀರ್ಘ ವೈಟ್-ಬಾಲ್ ಸರಣಿಯ ಮೊದಲು ಭಾರತವು ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ವಿರುದ್ಧ ಸೆಣಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಶಾಂತಿ ಸ್ಥಾಪನೆಗೆ ಪಾಕ್ ಮಧ್ಯಸ್ಥಿಕೆ; ಶತ್ರು ರಾಷ್ಟ್ರಕ್ಕೆ ಹೆಚ್ಚಿದ ಜಾಗತಿಕ ಪ್ರಾಮುಖ್ಯತೆ, ಭಾರತಕ್ಕೆ ತೀವ್ರ ಹಿನ್ನಡೆ..?

ಕೊಲಂಬಿಯಾ ಸೇನಾ ವಿಮಾನ ಪತನ: ಕನಿಷ್ಠ 66 ಮಂದಿ ಸಾವು, ನೂರಾರು ಮಂದಿಗೆ ಗಾಯ-Video

ವಾಯುದಾಳಿ: ಇರಾನ್ ಇಂಧನ ಮೂಲಸೌಕರ್ಯಕ್ಕೆ ಭಾರೀ ಹಾನಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

ಅಮೆರಿಕಾದ ವ್ಯಾಲೆರೋ ರಿಫೈನರಿಯಲ್ಲಿ ಭೀಕರ ಸ್ಫೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿಯ ಕೆನ್ನಾಲಿಗೆ, ಹೆಚ್ಚಿದ ಆತಂಕ

2028ಕ್ಕೆ ರಾಜ್ಯದಲ್ಲಿ ಹಿಂದೂ ಸರ್ಕಾರ: ಪೊಲೀಸರ ಕೈಗೆ AK-47 ಕೊಟ್ಟು, ಪಾಕಿಸ್ತಾನ್ ಜಿಂದಾಬಾದ್ ಅಂದವರ ಬಾಯಿಗೆ ಗುಂಡಿಟ್ಟು ಹೊಡೆಸ್ತೀವಿ; ಯತ್ನಾಳ್

SCROLL FOR NEXT