ಆರ್‌ಸಿಬಿ 
ಕ್ರಿಕೆಟ್

IPL ಫ್ರಾಂಚೈಸಿಗಳಿಗೆ ₹1000 ಕೋಟಿ ಆದಾಯ; ಮುಂಬೈ ಇಂಡಿಯನ್ಸ್, ಸಿಎಸ್‌ಕೆ, ಆರ್‌ಸಿಬಿಗೆ ಸಿಂಹಪಾಲು!

ಎಂಐ, ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ವಾಣಿಜ್ಯಿಕವಾಗಿ ಲೀಗ್‌ನಲ್ಲಿ ಅಗ್ರಸ್ಥಾನಗಳಲ್ಲಿವೆ. ತಂಡದ ಪ್ರಾಯೋಜಕತ್ವಗಳ ಮೂಲಕ ವಾರ್ಷಿಕವಾಗಿ ₹150 ಕೋಟಿಯಷ್ಟು ಗಳಿಸುತ್ತಿವೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಹಳ ಹಿಂದಿನಿಂದಲೂ ಕ್ರಿಕೆಟ್‌ನ ಅತಿದೊಡ್ಡ ಕಮರ್ಷಿಯಲ್ ಪಂದ್ಯಾವಳಿಯಾಗಿದೆ. ಕ್ರೀಡಾ ಇತಿಹಾಸದಲ್ಲಿ ಮೊದಲ ಬಾರಿಗೆ, 2025ರಲ್ಲಿ ಐಪಿಎಲ್ ಫ್ರಾಂಚೈಸಿಗಳು ಕೇವಲ ತಂಡದ ಪ್ರಾಯೋಜಕತ್ವದಿಂದಲೇ ಸಾವಿರ ಕೋಟಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿವೆ.

ರಿಯಲ್ ಮನಿ ಗೇಮಿಂಗ್ (RMG) ಮೇಲಿನ ನಿರ್ಬಂಧಗಳಿಂದಾಗಿ 2025ರಲ್ಲಿ ಹೂಡಿಕೆಗಳಲ್ಲಿ ಭಾರಿ ಕುಸಿತ ಕಂಡುಬಂದಿತು. ಆದಾಗ್ಯೂ, RMG ನಿಷೇಧ ಜಾರಿಗೆ ಬರುವ ಮೊದಲೇ ಐಪಿಎಲ್ 2025 ಮುಕ್ತಾಯಗೊಂಡಿತ್ತು ಮತ್ತು ಆ ಪ್ರಾಯೋಜಕತ್ವಗಳಿಂದ ಹೆಚ್ಚಿನ ಆದಾಯ ಗಳಿಸಿದವು. 2025ರ ಆಗಸ್ಟ್‌ನಲ್ಲಿ ರಿಯಲ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್ ಅನ್ನು ನಿಷೇಧಿಸಲಾಯಿತು. ಆ ವೇಳೆಗಾಗಲೇ ಇಡೀ ಐಪಿಎಲ್ ಸೀಸನ್ ಮುಗಿದಿತ್ತು.

WPP ಮೀಡಿಯಾದ ಸ್ಪೋರ್ಟಿಂಗ್ ನೇಷನ್ 2025 ವರದಿ ಪ್ರಕಾರ, 2025 ರಲ್ಲಿ ಮೊದಲ ಬಾರಿಗೆ ಐಪಿಎಲ್ ಫ್ರಾಂಚೈಸಿಗಳು ಒಟ್ಟಾಗಿ ತಂಡದ ಪ್ರಾಯೋಜಕತ್ವದ ಆದಾಯ ಗಳಿಕೆಯಲ್ಲಿ ₹1000 ಕೋಟಿ ಗಡಿಯನ್ನು ದಾಟಿವೆ. ₹1,033 ಕೋಟಿಯ ಆ ಅಂಕಿ ಅಂಶವು ಜಾಗತಿಕ ಕ್ರೀಡಾ ಆರ್ಥಿಕತೆಯಲ್ಲಿ ಲೀಗ್ ಯಾವ ಸ್ಥಾನದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಈಗ, ಯಾವುದೇ RGM ಹೂಡಿಕೆಗಳಿಲ್ಲದೆ, ಲೀಗ್ ಮತ್ತಷ್ಟು ಬೆಳೆಯುತ್ತದೆಯೇ ಅಥವಾ ಷೇರುಗಳು ಕುಸಿಯುತ್ತವೆಯೇ ಎಂದು ನೋಡಬೇಕಾಗಿದೆ.

ಎಂಐ, ಸಿಎಸ್‌ಕೆ ಮತ್ತು ಆರ್‌ಸಿಬಿಗೆ ಸಿಂಹಪಾಲು

ಮುಂಬೈ ಇಂಡಿಯನ್ಸ್ (MI), ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ವಾಣಿಜ್ಯಿಕವಾಗಿ ಲೀಗ್‌ನಲ್ಲಿ ಅಗ್ರಸ್ಥಾನಗಳಲ್ಲಿ ಕುಳಿತಿವೆ. ಪ್ರತಿಯೊಂದೂ ತಂಡದ ಪ್ರಾಯೋಜಕತ್ವಗಳ ಮೂಲಕ ವಾರ್ಷಿಕವಾಗಿ ₹150 ಕೋಟಿಯಷ್ಟು ಗಳಿಸುತ್ತಿವೆ ಎಂದು ವರದಿಯಾಗಿದೆ. ಅವರ ಬ್ರ್ಯಾಂಡ್ ಮೌಲ್ಯ, ಅಭಿಮಾನಿಗಳ ನೆಲೆ ಮತ್ತು ಸ್ಥಿರವಾದ ಗೋಚರತೆಯು ಜಾಹೀರಾತುದಾರರಿಗೆ ಪ್ರೀಮಿಯಂ ಆಸ್ತಿಯಾಗಿದೆ. 2025ರ IPL ಪ್ರಶಸ್ತಿ ಗೆದ್ದ ನಂತರ RCB ಯ ಮೌಲ್ಯವು ಹೆಚ್ಚಾಗಿದೆ. CSK ಮತ್ತು MI ಜಂಟಿಯಾಗಿ ಅತಿ ಹೆಚ್ಚು (5) ಪ್ರಶಸ್ತಿಗಳನ್ನು ಗಳಿಸಿವೆ.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಮುಂದಿನ ಎರಡು ಸ್ಥಾನಗಳಲ್ಲಿವೆ. ನಿರ್ಬಂಧದಿಂದಾಗಿ RMG ಬ್ರ್ಯಾಂಡ್‌ಗಳು ಹಿಂದೆ ಸರಿದಿರುವುದರಿಂದ, ಸಾಂಪ್ರದಾಯಿಕ ವಲಯಗಳು ಆ ಅಂತರವನ್ನು ತುಂಬಿವೆ. ಆಟೋ, ಸಿಮೆಂಟ್, ರಿಯಲ್ ಎಸ್ಟೇಟ್ ಮತ್ತು ಟೆಕ್ ಕಂಪನಿಗಳು ಪ್ರಾಯೋಜಕತ್ವದ ಕಡೆ ಹೆಜ್ಜೆ ಹಾಕಿವೆ.

WPP ಮೀಡಿಯಾ ತನ್ನ ವರದಿಯಲ್ಲಿ ಹೇಳಿರುವಂತೆ, ಪ್ರಾಯೋಜಕತ್ವಕ್ಕೆ ಬೆರಳೆಣಿಕೆ ಸಂಖ್ಯೆಯ ಬ್ರ್ಯಾಂಡ್‌ಗಳು ಮುಂದೆ ಬರುತ್ತಿದ್ದರೂ, ಪ್ರತಿ ಒಪ್ಪಂದವು ದೊಡ್ಡದಾಗಿದೆ ಮತ್ತು ಹೆಚ್ಚು ದುಬಾರಿಯಾಗಿದೆ. ಆದ್ದರಿಂದ ಒಟ್ಟಾರೆ ಆದಾಯ ಇನ್ನೂ ಹೆಚ್ಚಾಗುತ್ತದೆ.

WPP ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿನಿತ್ ಕಾರ್ಣಿಕ್ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತಾ, 'ಐಪಿಎಲ್ ಕೇವಲ ದೊಡ್ಡ ಪಂದ್ಯಾವಳಿ ಮಾತ್ರವಲ್ಲ. ಅದು ಭಾರತೀಯ ಕ್ರೀಡಾ ಲೋಕದ ಕಮರ್ಷಿಯಲ್ ಬೆನ್ನೆಲುಬು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿದ್ದರೆ, ಸಾಂಪ್ರದಾಯಿಕ ಪ್ರಾಯೋಜಕರು ಅಥವಾ ಹೊಸ ಪ್ರಾಯೋಜಕರು ಮುಂದೆ ಬರಲು ಸಿದ್ಧರಿರುತ್ತಾರೆ ಎಂಬುದನ್ನು ಇದು ತೋರಿಸುತ್ತದೆ' ಎಂದರು.

ಭಾರತದಲ್ಲಿ ಒಟ್ಟಾರೆ ಕ್ರೀಡಾ ಪ್ರಾಯೋಜಕತ್ವವು 2025ರಲ್ಲಿ ₹7,949 ಕೋಟಿ ತಲುಪಿದೆ. ಅದರಲ್ಲಿ ಕ್ರಿಕೆಟ್ ಹೆಚ್ಚಿನ ಪಾಲನ್ನು ಹೊಂದಿದೆ. ಪ್ರಾಯೋಜಕತ್ವಗಳ ಮೂಲಕ ಕ್ರಿಕೆಟ್ ₹6750 ಕೋಟಿ ಆದಾಯ ಸಂಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

ವಿವಾದದ ನಡುವೆ ಮೈಸೂರಿನ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

'ಜೀವ ಬಾಯಿಗೆ ಬಂದಿತ್ತು': ಆಗಸದಲ್ಲೇ ಗಿರಕಿ ಹೊಡೆದ ಡಿಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ, ಕೆಲಕಾಲ ಆತಂಕ! ಆಗಿದ್ದೇನು?

SCROLL FOR NEXT