ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2026: ವಿರಾಟ್ ಕೊಹ್ಲಿ ಬೌಲ್ ಮಾಡುತ್ತಾರಾ? ಪೂರ್ವ ತಯಾರಿಯ Video ವೈರಲ್!

ಕಳೆದ ಆವೃತ್ತಿಯಲ್ಲಿ ಆರ್ ಸಿಬಿಯ 18 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿದ ಈ ಜೋಡಿಯ ನಡುವಿನ ಆಳವಾದ ಬಾಂಡ್ ನ್ನು ಈ ಅಭ್ಯಾಸ ಪಂದ್ಯದ ವಿಡಿಯೋ ತೋರಿಸುತ್ತದೆ.

ಬೆಂಗಳೂರು: ಇದೇ 28 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಐಪಿಎಲ್ (IPL) ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಯಾರಿ ನಡೆಸುತ್ತಿದೆ.

ಅಭ್ಯಾಸ ಪಂದ್ಯದ ವಿಡಿಯೋವೊಂದು ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಫ್ರಾಂಚೈಸ್ ಹಂಚಿಕೊಂಡ ಕ್ಲಿಪ್‌ನಲ್ಲಿ, ವಿರಾಟ್ ಕೊಹ್ಲಿ, ತಮ್ಮ ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್‌ಗೆ ನೆಟ್ ನಲ್ಲಿ ಬೌಲಿಂಗ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಕಳೆದ ಆವೃತ್ತಿಯಲ್ಲಿ ಆರ್ ಸಿಬಿಯ 18 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿದ ಈ ಜೋಡಿಯ ನಡುವಿನ ಆಳವಾದ ಬಾಂಡ್ ನ್ನು ಈ ಅಭ್ಯಾಸ ಪಂದ್ಯದ ವಿಡಿಯೋ ತೋರಿಸುತ್ತದೆ.

ಕೊಹ್ಲಿ-ಸಾಲ್ಟ್ ಜೋಡಿಯು 2025 ರ ಆವೃತ್ತಿಯಲ್ಲಿ 13 ಇನ್ನಿಂಗ್ಸ್‌ಗಳಲ್ಲಿ 565 ರನ್‌ ಗಳಿಸಿತ್ತು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಸಿಬಿ ನಿರ್ದೇಶಕ ಮೊ ಬೊಬಾಟ್, ಟಿ-20ಯಲ್ಲಿ ಐಸಿಸಿಯ ನಂ.4 ಬ್ಯಾಟರ್ ಆಗಿರುವ ಫಿಲ್ ಸಾಲ್ಟ್ ಬಗ್ಗೆ ಯಾವುದೇ ಆತಂಕ ಇಲ್ಲ ಎಂದರು.

ಇದೇ ವೇಳೆ ವಿರಾಟ್ ಕೊಹ್ಲಿ ಜೊತೆಗಿನ ಬ್ಯಾಟಿಂಗ್ ನ್ನು ಎಂಜಾಯ್ ಮಾಡುವುದಾಗಿ ಫಿಲ್ ಸಾಲ್ಟ್ ಹೇಳಿದ್ದಾರೆ. ಶಾರ್ಟ್ ಬಾಲ್ ವಿರುದ್ಧ ಸಾಲ್ಟ್ ಅವರ ಸಿದ್ಧತೆಗೆ ಕೊಹ್ಲಿ ಸಹಾಯ ಮಾಡುವುದನ್ನು ವೀಡಿಯೊ ತೋರಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಒಂದು ಅಥವಾ ಎರಡು ಓವರ್ ಕೊಹ್ಲಿ ಬೌಲಿಂಗ್ ಮಾಡುವ ಸಾಧ್ಯತೆಯೂ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು