ಪ್ರೇಕ್ಷಕರೇ ಇಲ್ಲದ ಖಾಲಿ ಮೈದಾನದಲ್ಲಿ ಪಿಎಸ್ಎಲ್ ಪಂದ್ಯ 
ಕ್ರಿಕೆಟ್

PSL 2026: ಪ್ರೇಕ್ಷಕರೇ ಇಲ್ಲ ಅಂದ್ರೆ ಕೂಗಾಡೋ ಶಬ್ದ ಎಲ್ಲಿಂದ ಬರುತ್ತೆ..; PCB ವಿರುದ್ಧ ಪಾಕ್ ಅಭಿಮಾನಿಗಳ ಕಿಡಿ, Video

ಶುಕ್ರವಾರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರಂಭವಾಗಿದ್ದು, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಲಾಹೋರ್ ಖಲಂದರ್ಸ್‌ ತಂಡ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವನ್ನು 69 ರನ್‌ಗಳಿಂದ ಸೋಲಿಸಿತು.

ಲಾಹೋರ್: ನಿರೀಕ್ಷೆಯಂತೆಯೇ ಭಾರತದ ಐಪಿಎಲ್ ಗೂ ಮೊದಲೇ ಪಾಕಿಸ್ತಾನ ಪಿಎಸ್ಎಲ್ ಟೂರ್ನಿ ಶುಕ್ರವಾರದಿಂದ ಆರಂಭವಾಗಿದ್ದು, ಟೂರ್ನಿ ಆರಂಭವಾದ ಮೊದಲ ಪಂದ್ಯದಲ್ಲೇ ಪಿಸಿಬಿ ತಾನೇ ಮಾಡಿಕೊಂಡ ಎಡವಟ್ಟಿನಿಂದ ಪ್ರೇಕ್ಷಕರಿಂದ ಅಸಮಾಧಾನ ಎದುರಿಸಿದೆ.

ಶುಕ್ರವಾರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರಂಭವಾಗಿದ್ದು, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಲಾಹೋರ್ ಖಲಂದರ್ಸ್‌ ತಂಡ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವನ್ನು 69 ರನ್‌ಗಳಿಂದ ಸೋಲಿಸಿತು.

ಇರಾನ್ ಸಂಘರ್ಷ, ಇಂಧನ ಕೊರತೆ, ತಾಲಿಬಾನ್ ಎಚ್ಚರಿಕೆ ಸೇರಿದಂತೆ ನಾನಾ ಕಾರಣಗಳಿಂದ ಈ ಬಾರಿ ಪಿಎಸ್ ಎಲ್ ಅನ್ನು ಪ್ರೇಕ್ಷಕರು ಇಲ್ಲದೇ ನಡೆಸಲಾಗುತ್ತಿದೆ.

ಪಿಸಿಬಿ ಇರಾನ್ ಸಂಘರ್ಷ ಮುಂದುವರಿದಂತೆ ಪೂರೈಕೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳೊಂದಿಗೆ, ಇಂಧನವನ್ನು ಉಳಿಸಲು ಸರ್ಕಾರವು ವ್ಯಾಪಕ ಕಠಿಣ ಕ್ರಮಗಳನ್ನು ಪರಿಚಯಿಸಿದೆ. ಹೀಗಾಗಿ ಪ್ರೇಕ್ಷಕರು ಇಲ್ಲದೇ ಪಿಎಸ್ ಎಲ್ ನಡೆಸಲಾಗುತ್ತಿದೆ ಎಂದು ಹೇಳಿಕೊಂಡಿದೆ.

ಪರಿಣಾಮವಾಗಿ, ಗುರುವಾರ ರಾತ್ರಿಯ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲಾಯಿತು. ಪ್ರೇಕ್ಷಕರು ಇಲ್ಲದೇ ಮೊದಲ ಪಂದ್ಯವನ್ನೂ ನಡೆಸಲಾಯಿತು.

ಪ್ರೇಕ್ಷಕರೇ ಇಲ್ಲದೇ ಇದ್ರೂ.. ಬೌಂಡರಿ, ಸಿಕ್ಸರ್ ವೇಳೆ ಕೂಗಾಡುವ ಶಬ್ಧ

ಇನ್ನು ನಿನ್ನೆಯ ಮೊದಲ ಪಿಎಸ್ಎಲ್ ಪಂದ್ಯದಲ್ಲಿ ಪ್ರೇಕ್ಷಕರೇ ಇರಲಿಲ್ಲ. ಇಡೀ ಕ್ರೀಡಾಂಗಣದಲ್ಲಿ ಹುಡುಕಿದರೂ 10 ಜನ ಇರಲಿಲ್ಲ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ ಕೆಲ ಅಧಿಕಾರಿಗಳು ಮಾತ್ರ ಕ್ರೀಡಾಂಗಣದಲ್ಲಿ ಹಾಜರಿದ್ದರು. ಆದರೂ ಟಿವಿಯಲ್ಲಿ ಪ್ರಸಾರವಾದ ಪಿಎಸ್ ಎಲ್ ಪಂದ್ಯದ ವೇಳೆ ಬೌಂಡರಿ ಮತ್ತು ಸಿಕ್ಸರ್ ಮತ್ತು ವಿಕೆಟ್ ಗಳು ಬಿದ್ದಾಗ ಪ್ರೇಕ್ಷಕರು ಕೂಗುವ ಶಬ್ದ ಕೇಳಿಬಂತು.

ಇದು ಪಾಕಿಸ್ತಾನಿ ಅಭಿಮಾನಿಗಳಿಗೇ ಅಚ್ಚರಿಯನ್ನುಂಟು ಮಾಡಿದ್ದು, ಪ್ರೇಕ್ಷಕರೇ ಇಲ್ಲದ ಮೈದಾನದಲ್ಲಿ ಕೂಗಾಟದ ಶಬ್ದ ಎಲ್ಲಿಂದ ಬರುತ್ತೆ ಎಂದು ಪಿಸಿಬಿ ವಿರುದ್ಧ ಕಿಡಿಕಾರುತ್ತಿದ್ದಾರೆ.

ಮತ್ತೆ ಕೆಲ ಅಭಿಮಾನಿಗಳು ಈಗಾಗಲೇ ಪಿಎಸ್ಎಲ್ ನಾನಾ ಕಾರಣಗಳಿಂದ ವಿವಾದಕ್ಕೀಡಾಗಿದೆ. ಈಗ ಪಿಸಿಬಿ ಇಂತಹ ಇಲ್ಲ ಸಲ್ಲದ ಸ್ಪೆಷಲ್ ಎಫೆಕ್ಟ್ ಗಳನ್ನು ಕೊಟ್ಟರೆ ಇನ್ನೂ ಟ್ರೋಲ್ ಆಗುತ್ತದೆ ಎಂದು ಕಿಡಿಕಾರಿದ್ದಾರೆ.

ಟ್ರೋಲಿಂಗ್ ಯಾಕೆ?

ಪಿಎಸ್ಎಲ್ ಪಂದ್ಯಗಳ ಪ್ರಸಾರ ಅನುಭವವನ್ನು ಸುಧಾರಿಸಲು, ಸಂಘಟಕರು ಅನುಕರಿಸಿದ ಜನಸಂದಣಿಯ ಶಬ್ದವನ್ನು ಸೇರಿಸಿದ್ದಾರೆ.

ಈ ಕ್ರಮವನ್ನು ಹಲವಾರು ಕಾರಣಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ವ್ಯಾಪಕವಾಗಿ ಅಪಹಾಸ್ಯ ಮಾಡುತ್ತಿದ್ದಾರೆ.

ಈ ಶಬ್ದವು ಹೆಚ್ಚಾಗಿ ಮೈದಾನದಲ್ಲಿನ ಕ್ರಿಯೆಗೆ ಹೊಂದಿಕೆಯಾಗುವುದಿಲ್ಲ. "ವಿಲಕ್ಷಣ" ಮತ್ತು "ಅಸ್ವಾಭಾವಿಕ" ಎಂದು ಧ್ವನಿಸುತ್ತದೆ ಎಂದು ವೀಕ್ಷಕರು ಕಿಡಿಕಾರಿದ್ದಾರೆ.

ಅಂತೆಯೇ ಇನ್ನೂ ಕೆಲ ಅಭಿಮಾನಿಗಳು ಪಿಸಿಬಿ ಖಾಲಿ ಸ್ಟ್ಯಾಂಡ್‌ಗಳ ವಾಸ್ತವವನ್ನು "ಮರೆಮಾಚಲು" ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿಐಪಿ ನೀತಿ

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಷರೀಫ್ ಸೇರಿದಂತೆ ಉನ್ನತ ವ್ಯಕ್ತಿಗಳು ಕ್ರೀಡಾಂಗಣಗಳಲ್ಲಿ ಕಾಣಿಸಿಕೊಂಡಾಗ, ಸಾಮಾನ್ಯ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧಿಸಿದಾಗ ಆಕ್ರೋಶ ಹೆಚ್ಚಾಗಿದೆ.

ಕ್ರೀಡಾಂಗಣಗಳು ಖಾಲಿಯಾಗಿರುವುದೇಕೆ?

ಪಿಸಿಬಿ ಪಿಎಸ್ಎಲ್ ಪಂದ್ಯಗಳನ್ನು ಎರಡು ಸ್ಥಳಗಳಿಗೆ (ಲಾಹೋರ್ ಮತ್ತು ಕರಾಚಿ) ಸೀಮಿತಗೊಳಿಸಿದೆ ಮತ್ತು ಪಶ್ಚಿಮ ಏಷ್ಯಾದಲ್ಲಿ ತೀವ್ರ ರಾಷ್ಟ್ರೀಯ ಇಂಧನ ಬಿಕ್ಕಟ್ಟು ಮತ್ತು ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ಈ ಪಂದ್ಯಗಳಿಗೆ ಪ್ರೇಕ್ಷಕರನ್ನು ನಿಷೇಧಿಸಲಾಗಿದೆ.

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ನಡೆಯುತ್ತಿರುವ ಸಂಘರ್ಷದ ಸಮಯದಲ್ಲಿ ಇಂಧನವನ್ನು ಸಂರಕ್ಷಿಸಲು ಪ್ರಧಾನಿ ಶೆಹಬಾಜ್ ಷರೀಫ್ ಸಾರ್ವಜನಿಕರ ಚಲನೆಯನ್ನು ಸೀಮಿತಗೊಳಿಸುವಂತೆ ವಿನಂತಿಸಿದ್ದರು.

ಹೀಗಾಗಿ ಪಂದ್ಯಾವಳಿಯನ್ನು ಕೇವಲ ಎರಡು ನಗರಗಳಿಗೆ ಕ್ರೋಢೀಕರಿಸುವುದು ತಂಡಗಳು ಮತ್ತು ಭದ್ರತಾ ಸಿಬ್ಬಂದಿಗೆ ಪ್ರಯಾಣದ ಅವಶ್ಯಕತೆಗಳನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್‌ಗೆ ಮತ್ತೊಂದು ಜಲಾಘಾತ: ಇರಾನ್ ಪರ ಯುದ್ಧಕ್ಕೆ ಯೆಮೆನ್ ಎಂಟ್ರಿ; ಇಸ್ರೇಲ್ ಮೇಲೆ ಮೊದಲ ಕ್ಷಿಪಣಿ ಹಾರಿಸಿದ ಹೌತಿಗಳು!

ದಾವಣಗೆರೆ: ಧಮ್ ತೋರಿಸಲು ಹೋಗಿದ್ದ ಪ್ರದೀಪ್ ಈಶ್ವರ್​ಗೆ ಚಪ್ಪಲಿ-ಪೊರಕೆ ತೋರಿಸಿ, ಹುಚ್ಚ...ಹುಚ್ಚ... ಅಂತ ಕೂಗಿದ BJP ಕಾರ್ಯಕರ್ತರು!

TMC ಸರ್ಕಾರದ ವಿರುದ್ಧ ಅಮಿತ್ ಶಾ 'ಚಾರ್ಜ್ ಶೀಟ್' ಬಿಡುಗಡೆ: ಬಂಗಾಳ ಚುನಾವಣೆ ದೇಶದ ಭದ್ರತೆಗಾಗಿ ಒಂದು ಯುದ್ಧ!

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

ಬೆಂಗಳೂರು ಉತ್ತರ ನಗರ ಪಾಲಿಕೆಯ ಚೊಚ್ಚಲ ಬಜೆಟ್ ಮಂಡನೆ; ಘನತ್ಯಾಜ್ಯ ನಿರ್ವಹಣೆಗೆ ಒತ್ತು

SCROLL FOR NEXT