ಹೊಸ ಕಾರಿನೊಂದಿಗೆ ಹಾರ್ದಿಕ್ ಪಾಂಡ್ಯ- ಮಹಿಕಾ ಶರ್ಮಾ 
ಕ್ರಿಕೆಟ್

'ಲಕ್ಕಿ ಚಾರ್ಮ್' ಪ್ರೇಯಸಿ ಮಹಿಕಾ ಶರ್ಮಾಗೆ ₹1.7 ಕೋಟಿ ಬೆಲೆಯ ಐಷಾರಾಮಿ ಕಾರು ನೀಡಿದ ಹಾರ್ದಿಕ್ ಪಾಂಡ್ಯ!

ಕಾರಿನೊಂದಿಗೆ ಜೋಡಿ ಪೋಸ್ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಭಾರತದ ಸ್ಟಾರ್ ಆಲ್‌ರೌಂಡರ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ತಮ್ಮ ಗೆಳತಿ ಮಹಿಕಾ ಶರ್ಮಾ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಹಾರ್ದಿಕ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಪಂದ್ಯದ ವೇಳೆಯೂ ಮಹಿಕಾ ಮೈದಾನದಲ್ಲಿ ಇರುವುದು ಕಂಡುಬರುತ್ತದೆ. ಸದ್ಯದ ಐಪಿಎಲ್ ಆವೃತ್ತಿಯ ಮಧ್ಯೆಯೂ, ಹಾರ್ದಿಕ್ ಮಹಿಕಾ ಅವರಿಗೆ ಭಾರತದ ಮೊದಲ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಸುಮಾರು ₹1.7 ಕೋಟಿ ಬೆಲೆಯ ಐಷಾರಾಮಿ ವಾಹನವಾಗಿದೆ.

ಕೆಲವೇ ವಾರಗಳ ಹಿಂದೆ, ಹಾರ್ದಿಕ್ ಸುಮಾರು ₹12 ಕೋಟಿ ಮೌಲ್ಯದ ಅಲ್ಟ್ರಾ-ಐಷಾರಾಮಿ ಫೆರಾರಿ ಕಾರನ್ನು ಖರೀದಿಸಿದ್ದರು. ಇದೀಗ, ಅವರು ಹೊಸದಾಗಿ ಬಿಡುಗಡೆ ಮಾಡಿದ ಪ್ರೀಮಿಯಂ ಕಾರನ್ನು ಮಹಿಕಾ ಅವರಿಗೆ ಉಡುಗೊರೆ ನೀಡಿದ್ದಾರೆ. ಇದು ಭಾರತದಲ್ಲಿ ಲಭ್ಯವಿರುವ ಅತ್ಯಂತ ಸೊಗಸಾದ ಮತ್ತು ವಿಶಾಲವಾದ ವಾಹನಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಕಾರಿನೊಂದಿಗೆ ಜೋಡಿ ಪೋಸ್ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಇತ್ತೀಚೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026ರ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಆರು ವಿಕೆಟ್‌ಗಳ ಭರ್ಜರಿ ಜಯಕ್ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಮುನ್ನಡೆಸಿದರು.

ಮುಂಬೈ ಇಂಡಿಯನ್ಸ್ ತಂಡವು ಮಾಜಿ ನಾಯಕ ರೋಹಿತ್ ಶರ್ಮಾ (78) ಮತ್ತು ರಿಯಾನ್ ರಿಕಲ್ಟನ್ (81) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಇದರಿಂದಾಗಿ ಕಳೆದ 13 ಐಪಿಎಲ್ ಆವೃತ್ತಿಗಳಲ್ಲಿ ತಮ್ಮ ಆರಂಭಿಕ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿತು.

2012ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ ನಂತರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಂದನ್ನೂ ಗೆದ್ದಿರಲೇ ಇಲ್ಲ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ 221 ರನ್‌ಗಳ ಗುರಿಯನ್ನು ಬೆನ್ನಟ್ಟಿ 19.1 ಓವರ್‌ಗಳಲ್ಲಿಯೇ ಗೆಲುವಿನ ದಡ ಸೇರಿತು.

'ಖಂಡಿತ, ಇದು ಬಹಳ ಸಮಯ ಕಾಯುವಿಕೆಯಾಗಿದೆ. 13 ವರ್ಷಗಳು ಬಹಳ ದೀರ್ಘ ಸಮಯ. ನಿಮಗೆ ಗೊತ್ತಾ, ನಾವು ಪ್ರತಿ ಬಾರಿ ಬಂದಾಗಲೂ, ನಾವು ಗೆಲ್ಲಲು ಮತ್ತು ಆವೃತ್ತಿಯನ್ನು ಗೆಲುವಿನಿಂದ ಪ್ರಾರಂಭಿಸಲು ಬಯಸಿದ್ದೇವೆ. ತುಂಬಾ ಸಂತೋಷವಾಗಿದೆ, ನಾವು ಅಂತಿಮವಾಗಿ ಅದನ್ನು ಮಾಡಲು ಸಾಧ್ಯವಾಯಿತು' ಎಂದು ಪಂದ್ಯದ ನಂತರದ ಪ್ರಸ್ತುತಿಯ ಸಮಯದಲ್ಲಿ ಹಾರ್ದಿಕ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war ಎಫೆಕ್ಟ್: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕ ಕುಸಿತ; ಹೂಡಿಕೆದಾರರಿಗೆ ಭಾರೀ ನಷ್ಟ

ಯುದ್ಧ ತೀವ್ರವಾಗುತ್ತಿದ್ದಂತೆ ಅಮೆರಿಕಾ ಹೊಸ ತಂತ್ರ: ಖಾರ್ಗ್ ದ್ವೀಪದ ಮೇಲೆ ಕಣ್ಣು; 'ಸುಲಭವಾಗಿ ವಶಕ್ಕೆ ಪಡೆಯಬಹುದು' ಎಂದ ಟ್ರಂಪ್

West Asia war: ಶಾಂತಿ ಪ್ರಸ್ತಾವ ನಡುವೆಯೇ ಯುದ್ಧಕ್ಕೆ ಸಜ್ಜು; ಭೂ ದಾಳಿಗೆ ಬಂದರೆ ಬೆಂಕಿ ಮೂಲಕ ಉತ್ತರ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ

ವಿಶಾಖಪಟ್ಟಣಂ: ಲವರ್ ಕೊಂದು, ಮೃತದೇಹವನ್ನು ತುಂಡರಿಸಿ 'ಫ್ರೀಡ್ಜ್ 'ನಲ್ಲಿಟ್ಟಿದ್ದ ನೌಕಪಡೆಯ ಉದ್ಯೋಗಿ ಬಂಧನ!

ಯುದ್ಧಕ್ಕೆ ಇರಾನ್ ಜನರ ಬೆಂಬಲ: ಮೊಜ್ತಾಬಾ ಖಮೇನಿ ಹೊಸ ಸಂದೇಶ, ಹೇಳಿದ್ದೇನು?

SCROLL FOR NEXT