ಮಿಚ್ ಮಾರ್ಶ್ ಸ್ಫೋಟಕ ಶತಕ 
ಕ್ರಿಕೆಟ್

IPL 2026: Mitchell Marsh ಸ್ಫೋಟಕ ಶತಕ, RCB ವಿರುದ್ಧ ಬೃಹತ್ ಮೊತ್ತದತ್ತ LSG! ಪಂದ್ಯಕ್ಕೆ ಮಳೆ ಅಡ್ಡಿ

ಲಖನೌ ನ ಏಕಾನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಲಖನೌ: ಐಪಿಎಲ್ ಟೂರ್ನಿಯ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಲಖ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ ಮಿಚೆಲ್ ಮಾರ್ಶ್ ಸ್ಫೋಟಕ ಶತಕ ಸಿಡಿಸಿದ್ದಾರೆ.

ಲಖನೌ ನ ಏಕಾನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಆರಂಭಿಕ ಬ್ಯಾಟರ್‌ಗಳಾದ ಮಿಚ್ ಮಾರ್ಶ್ (107) ಮತ್ತು ಅರ್ಶಿನ್ ಕುಲಕರ್ಣಿ ಸ್ಫೋಟಕ ಆರಂಭ ನೀಡಿದರು.

ಮೊದಲ ವಿಕೆಟ್ ಗೆ ಈ ಜೋಡಿ 95 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಆದರೆ ಈ ಹಂತದಲ್ಲಿ 17 ರನ್ ಗಳಿಸಿದ್ದ ಅರ್ಶಿನ್ ಕುಲಕರ್ಣಿ ಕೃನಾಲ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.

ಪವರ್‌ಪ್ಲೇ ಅವಧಿಯಲ್ಲೇ ಆರ್‌ಸಿಬಿ ವೇಗಿಗಳಿಗೆ ತಿರುಗೇಟು ನೀಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಪವರ್ ಪ್ಲೇನಲ್ಲಿ ಈ ಜೋಡಿ 68 ರನ್ ಗಳನ್ನು ಭಾರಿಸಿ ಪಂದ್ಯದಲ್ಲಿ ಎಲ್ ಎಸ್ ಜಿ ಮೇಲುಗೈ ಸಾಧಿಸುವಂತೆ ಮಾಡಿತು.

ಪ್ರಮುಖವಾಗಿ Mitchell Marsh ಲಖನೌ ಪರ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 51 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 9 ಸಿಕ್ಸರ್ ಗಳ ನೆರವಿನಿಂದ ಮಿಚ್ ಮಾರ್ಶ್ ಅಜೇಯ 107 ರನ್ ಕಲೆಹಾಕಿದ್ದಾರೆ. ಅವರ ನಿರ್ಭೀತ ಬ್ಯಾಟಿಂಗ್ ಆರ್‌ಸಿಬಿ ಬೌಲರ್‌ಗಳ ಮೇಲೆ ಭಾರೀ ಒತ್ತಡ ತಂದಿದ್ದು, ಲಕ್ನೋ ತಂಡ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.

ಮಳೆ ಅಡ್ಡಿ

ಇನ್ನು ಲಕ್ನೋ ಇನ್ನಿಂಗ್ಸ್ 14ನೇ ಓವರ್ ಅಂತ್ಯದ ವೇಳೆ ಭಾರಿ ಮಳೆಯಾದ ಪರಿಣಾಮ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. 107 ರನ್ ಗಳಿಸಿರುವ ಮಿಚ್ ಮಾರ್ಶ್ ಮತ್ತು 14 ರನ್ ಅಳಿಸಿರುವ ನಿಕೋಲಸ್ ಪೂರನ್ ಕ್ರೀಸ್ ನಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!