ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಅರುಣ್ ಧುಮಾಲ್ 
ಕ್ರಿಕೆಟ್

'ರೀಲ್ ಸಂಸ್ಕೃತಿ' ಬಗ್ಗೆ ಸಂದೇಶ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೋಡಿ ಕಲಿಯಿರಿ ಎಂದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್!

ಐಪಿಎಲ್ 2026ರ ಆವೃತ್ತಿಯಲ್ಲಿ ಆಟಗಾರರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಬಗ್ಗೆ ಹೆಚ್ಚುತ್ತಿರುವ ಪರಿಶೀಲನೆಯ ಮಧ್ಯೆ ಧುಮಾಲ್ ಅವರ ಹೇಳಿಕೆಗಳು ಬಂದಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್, ಕ್ರಿಕೆಟಿಗರು ಪಂದ್ಯಾವಳಿಗಳ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಚಟುವಟಿಕೆಗಿಂತ ಮೈದಾನದಲ್ಲಿನ ಪ್ರದರ್ಶನಕ್ಕೆ ಆದ್ಯತೆ ನೀಡಬೇಕು. ಆಟಗಾರರು ರೀಲ್‌ಗಳು ಮತ್ತು ತೆರೆಮರೆಯ ಕಂಟೆಂಟ್ ಮಾಡುವ ಬದಲು ಕ್ರಿಕೆಟ್‌ನತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮವು ಆಧುನಿಕ ಕ್ರೀಡೆಯ ಅವಿಭಾಜ್ಯ ಅಂಗವಾಗಿದೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತಹ ಹೆಚ್ಚಿನ ಒತ್ತಡದ ಪಂದ್ಯಾವಳಿಗಳಲ್ಲಿ ಅದು ಅಡ್ಡಿಯಾಗದಂತೆ ಆಟಗಾರರು ಖಚಿತಪಡಿಸಿಕೊಳ್ಳಬೇಕು ಎಂದು ಧುಮಾಲ್ ಒತ್ತಿ ಹೇಳಿದರು.

ಐಎಎನ್‌ಎಸ್ ಜೊತೆ ಮಾತನಾಡಿದ ಅವರು, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಉದಾಹರಣೆಯನ್ನು ನೀಡಿದರು. ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ಪ್ರಮುಖ ಪಂದ್ಯಾವಳಿಗಳಲ್ಲಿ ಕ್ರಿಕೆಟ್‌ನತ್ತ ಗಮನ ಹರಿಸುತ್ತಾರೆ ಎಂದರು.

'ಕ್ರಿಕೆಟರ್‌ಗಳು ರೀಲ್‌ಗಳಿಗಿಂತ ವಾಸ್ತವದತ್ತ ಗಮನ ಹರಿಸಬೇಕು. ಉದಾಹರಣೆಗೆ ವಿರಾಟ್ ಕೊಹ್ಲಿಯನ್ನೇ ತೆಗೆದುಕೊಳ್ಳಿ- ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಅಭಿಮಾನಿಗಳಿದ್ದರೂ, ಅವರು ಮೈದಾನದಲ್ಲಿರುವಾಗ ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಗಮನಹರಿಸುತ್ತಾರೆ. ಅವರು ರೀಲ್‌ಗಳ ಮೂಲಕವಲ್ಲ, ತಮ್ಮ ಪ್ರದರ್ಶನದ ಮೂಲಕ ಫಲಿತಾಂಶಗಳನ್ನು ನೀಡಿದ್ದಾರೆ. ಟೂರ್ನಮೆಂಟ್ ನಡೆಯುತ್ತಿರುವಾಗ ಆಟಗಾರರು ರೀಲ್‌ಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಅರುಣ್ ಧುಮಾಲ್ ತಿಳಿಸಿದರು.

ಐಪಿಎಲ್ 2026ರ ಆವೃತ್ತಿಯಲ್ಲಿ ಆಟಗಾರರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಬಗ್ಗೆ ಹೆಚ್ಚುತ್ತಿರುವ ಪರಿಶೀಲನೆಯ ಮಧ್ಯೆ ಧುಮಾಲ್ ಅವರ ಹೇಳಿಕೆಗಳು ಬಂದಿವೆ. ಸಹ ಆಟಗಾರರನ್ನು ಒಳಗೊಂಡ ವ್ಲಾಗಿಂಗ್ ವಿಷಯದ ಬಗ್ಗೆ ಬಿಸಿಸಿಐ ಅರ್ಶದೀಪ್ ಸಿಂಗ್ ಅವರಿಗೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

ತಂಡದ ಆಟಗಾರರೊಂದಿಗೆ ಪ್ರಯಾಣಿಸುತ್ತಿದ್ದಾಗ ಅರ್ಶದೀಪ್ ಸಿಂಗ್ ಅವರು ಮಾಡಿದ್ದ ವ್ಲಾಗಿಂಗ್ ವಿಡಿಯೋದಲ್ಲಿ ಪಂಜಾಬ್ ಕಿಂಗ್ಸ್ ಆಟಗಾರ ಯುಜ್ವೇಂದ್ರ ಚಾಹಲ್ ವಿಮಾನದಲ್ಲಿಯೇ ವೇಪಿಂಗ್ ಮಾಡುತ್ತಿರುವುದು ಕಂಡುಬಂದಿತ್ತು. ಈ ವಿಡಿಯೋದ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಇನ್ನೊಂದು ಘಟನೆಯಲ್ಲಿ, ತಿಲಕ್ ವರ್ಮಾ ಅವರ ಸ್ನ್ಯಾಪ್‌ಚಾಟ್ ವಿಡಿಯೋ ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಯಿತು. ಕ್ಲಿಪ್‌ನಲ್ಲಿ, ಅರ್ಶ್‌ದೀಪ್ ಅವರು ತಿಲಕ್ ಅವರನ್ನು 'ಅಂಧೇರೆ' ಎಂದು ತಮಾಷೆಯಾಗಿ ಉಲ್ಲೇಖಿಸಿ ಸನ್‌ಸ್ಕ್ರೀನ್ ಹಚ್ಚಿಕೊಳ್ಳಬೇಕೆಂದು ಸೂಚಿಸಿದರು. ಈ ಕಾಮೆಂಟ್‌ಗಳನ್ನು ಹಲವಾರು ಬಳಕೆದಾರರು ಟೀಕಿಸಿದ್ದಾರೆ.

ಈ ಘಟನೆಗಳು ಐಪಿಎಲ್ ಆವೃತ್ತಿಯಲ್ಲಿ ಆಟಗಾರರ ನಡವಳಿಕೆ ಮತ್ತು ಆನ್‌ಲೈನ್ ನಡವಳಿಕೆಯತ್ತ ಮತ್ತೊಮ್ಮೆ ಗಮನ ಸೆಳೆದಿವೆ.

ಈ ತಿಂಗಳ ಆರಂಭದಲ್ಲಿ, ಬಿಸಿಸಿಐ ಎಲ್ಲ 10 ಐಪಿಎಲ್ ಫ್ರಾಂಚೈಸಿಗಳಿಗೆ ಹೊಸ ಕಾರ್ಯಾಚರಣೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ವಿತರಿಸಿದೆ ಎಂದು ವರದಿಯಾಗಿದೆ. ಈ ಸಲಹೆಯಲ್ಲಿ ಸಾಮಾಜಿಕ ಮಾಧ್ಯಮ ನಡವಳಿಕೆ, ಭ್ರಷ್ಟಾಚಾರ-ವಿರೋಧಿ ಪ್ರೋಟೋಕಾಲ್‌ಗಳು, ಧೂಮಪಾನ ಮತ್ತು ವೇಪಿಂಗ್ ನಿರ್ಬಂಧಗಳು ಮತ್ತು ಪಂದ್ಯಾವಳಿಯ ಸಮಯದಲ್ಲಿ ಆಟಗಾರರ ನಡವಳಿಕೆಗೆ ಸಂಬಂಧಿಸಿದ ಸೂಚನೆಗಳು ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!