ಸ್ಟೇಡಿಯಂನಲ್ಲಿ ಜಪಿಸುತ್ತಿರುವ ಅನುಷ್ಕಾ ಶರ್ಮಾ 
ಕ್ರಿಕೆಟ್

RCB ಗೆಲುವಿಗಾಗಿ ಕೈಮುಗಿದು ಪ್ರಾರ್ಥಿಸಿದ ಅನುಷ್ಕಾ: 'ರಾಧೇ ನಾಮ' ರಿಂಗ್ ಧರಿಸಿ ಸ್ಟೇಡಿಯಂನಲ್ಲಿ ಜಪ; ವಿಡಿಯೊ ವೈರಲ್..!

ಪತಿ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡದ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಅವರ ಚಿತ್ರಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಬೆಂಬಲ ಸೂಚಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಬಾಲಿವುಡ್ ನಟಿ ಅನುಷ್ಕಾಶರ್ಮಾ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಪತಿ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡದ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಅವರ ಚಿತ್ರಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗುಜರಾತ್ ಟೈಟನ್ಸ್ ವಿರುದ್ಧದ ಮಹತ್ವದ ಪಂದ್ಯವನ್ನು ವೀಕ್ಷಿಸುತ್ತಿದ್ದ ಅನುಷ್ಕಾ, ಕೈಯಲ್ಲಿ ‘ರಾಧೇ ನಾಮ ಜಪ’ ಕೌಂಟರ್ ರಿಂಗ್ ಧರಿಸಿ ಜಪ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಂದ್ಯದಲ್ಲಿ ಮಹತ್ವದ ಕ್ಷಣಗಳು ಎದುರಾದಾಗ ಅವರು ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಗಳೂ ಅಭಿಮಾನಿಗಳ ಗಮನ ಸೆಳೆದಿವೆ.

ಈ ಚಿತ್ರಗಳು ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಗೆಲುವಿಗಾಗಿ ಅನುಷ್ಕಾ ಎಷ್ಟು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಿದ್ದಾರೆ ನೋಡಿ” ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು “ಅನುಷ್ಕಾ ಪೂರ್ಣ ಭಕ್ತಿಯಿಂದ ಜಪ ಮಾಡಿದರು, ಆದರೂ ವಿರಾಟ್ ಅರ್ಧಶತಕ ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪಂದ್ಯದ ವೇಳೆ ನಡೆದ ಮತ್ತೊಂದು ಘಟನೆ ಕೂಡ ಅಭಿಮಾನಿಗಳ ಮನ ಗೆದ್ದಿದೆ. ಸ್ಟೇಡಿಯಂನಲ್ಲಿ ತಮ್ಮ ಮುಂದೆ ಒಬ್ಬ ವ್ಯಕ್ತಿ ಹಾದುಹೋಗುತ್ತಿದ್ದಾಗ ಅನುಷ್ಕಾ ಸ್ವಲ್ಪ ಅಸಮಾಧಾನದಲ್ಲಿರುವುದು ಹಾಗೂ ಪ್ರೇಕ್ಷಕರೊಬ್ಬರು “ಹಾಯ್” ಎಂದು ಕೂಗಿದಾಗ, ಅವರು ನಗುತ್ತಾ ಕೈಬೀಸಿ ಪ್ರತಿಕ್ರಿಯಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಲಂಡನ್ ಮತ್ತು ಭಾರತ ನಡುವೆ ಸಂಚರಿಸುತ್ತಿದ್ದರೂ, ವಿರಾಟ್ ಕೊಹ್ಲಿ ಅವರ ಪ್ರಮುಖ ಪಂದ್ಯಗಳಲ್ಲಿ ಅನುಷ್ಕಾ ಶರ್ಮಾ ಹಾಜರಾಗಿ ತಂಡಕ್ಕೆ ಬೆಂಬಲ ನೀಡುತ್ತಿರುವುದು ವಿಶೇಷ.

ಇದೇ ವೇಳೆ ವಿರಾಟ್ ಕೊಹ್ಲಿ ಹೊಸ ಇನ್ಫಿನಿಟಿ ಟ್ಯಾಟೂ ಹಾಕಿಸಿಕೊಂಡಿರುವುದು ಕೂಡ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಟ್ಯಾಟೂ ಪತ್ನಿ ಅನುಷ್ಕಾ ಮತ್ತು ಕುಟುಂಬಕ್ಕೆ ಸಮರ್ಪಿತವಾಗಿರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು, Video!

ಸರ್ಕಾರ ಉರುಳಿಸಲು BJPಯಿಂದ ಕುದುರೆ ವ್ಯಾಪಾರ: ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ಆಫರ್: ಸಿಎಂ ಅಬ್ದುಲ್ಲಾ ಆರೋಪ

ಅಕ್ಟೋಬರ್, ನವೆಂಬರ್‌ನಲ್ಲಿ ಪಂಚಾಯತ್ ಚುನಾವಣೆ ಸಾಧ್ಯತೆ; ಗ್ರಾಮಗಳಲ್ಲಿ ಗರಿಗೆದರಲಿದೆ ರಾಜಕೀಯ!

'ಹಿಂದಿನ ಸೀಟಿಗೆ ಬಾ': ಬಸ್ಸಿನಲ್ಲಿ ಕಾಲೇಜ್ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ; ಕಂಡಕ್ಟರ್ ಇರ್ಫಾನ್ ಬಂಧನ

ಪಾಕ್‌ನ ಭಾಗವಾಗಿ ಕಾಶ್ಮೀರ ನಕ್ಷೆ ಪ್ರದರ್ಶನ: ಢಾಕಾದಲ್ಲೇ ಬಾಂಗ್ಲಾ ಮಾಜಿ ರಾಜತಾಂತ್ರಿಕನ ಬೆವರಿಳಿಸಿದ ಭಾರತೀಯ ಅಧಿಕಾರಿ ಪೂಜಾ, Video!