ಹಾರ್ದಿಕ್ ಪಾಂಡ್ಯ  
ಕ್ರಿಕೆಟ್

ಹಾರ್ದಿಕ್ ಪಾಂಡ್ಯ ಮುಂದಿನ ನಡೆ ಏನು? 2027 IPL ನಲ್ಲಿ ಯಾವ ತಂಡ ಸೇರಬಹುದು?

ಐಪಿಎಲ್ 2027 ಹರಾಜಿನಲ್ಲಿ ನಾಯಕತ್ವ ಅಥವಾ ಕೌಶಲ್ಯದ ಕೊರತೆ ಎದುರಿಸುತ್ತಿರುವ ಇತರ ಹಲವು ಉನ್ನತ ಫ್ರಾಂಚೈಸಿಗಳು ಹಾರ್ದಿಕ್ ಪಾಂಡ್ಯ ಖರೀದಿಗೆ ಬಿಡ್ ಮಾಡುವ ಸಾಧ್ಯತೆಯಿದೆ.

ಮುಂಬೈ: ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ (MI) ನಿರಾಶಾದಾಯಕ 9 ನೇ ಸ್ಥಾನವನ್ನು ಗಳಿಸಿದ ನಂತರ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿ ತೊರೆಯುವುದು ಬಹುತೇಕ ದೃಢಪಟ್ಟಿದೆ. ಐಪಿಎಲ್ 2027 ಹರಾಜಿನಲ್ಲಿ ನಾಯಕತ್ವ ಅಥವಾ ಕೌಶಲ್ಯದ ಕೊರತೆ ಎದುರಿಸುತ್ತಿರುವ ಇತರ ಹಲವು ಉನ್ನತ ಫ್ರಾಂಚೈಸಿಗಳು ಹಾರ್ದಿಕ್ ಪಾಂಡ್ಯ ಖರೀದಿಗೆ ಬಿಡ್ ಮಾಡುವ ಸಾಧ್ಯತೆಯಿದೆ.

  1. ಕೆಕೆಆರ್: ಮ್ಯಾಚ್ ವಿನ್ನಿಂಗ್ ಮಾಡುವಂತಹ ಆಲ್ ರೌಂಡರ್ ಇದ್ದರೂ ಕೋಲ್ಕತ್ತಾ ನೈಟ್ ರೈಡರ್ ತಂಡ ಈ ಬಾರಿ ಪ್ರದರ್ಶನ ಕಳಪೆಯಾಗಿದೆ. ಐಕಾನ್ ಆಂಡ್ರೆ ರಸೆಲ್ ತನ್ನ ವೃತ್ತಿಜೀವನದ ಕೊನೆ ದಿನಗಳಲ್ಲಿ ಫಿಟ್ ನೆಸ್ ಗಾಗಿ ಹೋರಾಟ ನಡೆಸುತ್ತಿದ್ದಾರೆ. ಅನುಭವಿ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ನ ಇತ್ತೀಚಿನ ತಂತ್ರಗಳು ಭಾರಿ ಟೀಕೆಗಳಿಗೂ ಒಳಗಾಗಿದೆ.

    ಆಕ್ರಮಣಕಾರಿ ಪ್ರದರ್ಶನಕ್ಕೆ ಹೊಂದಿಕೊಳ್ಳುವ ಹೊಸ, ದೀರ್ಘಕಾಲೀನ ನಾಯಕನಿಗಾಗಿ ಫ್ರಾಂಚೈಸಿ ಹುಡುಕಾಟ ನಡೆಸುತ್ತಿದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿ ಸೇರಿದರೆ ಅವರ ಮಧ್ಯಮ ಕ್ರಮಾಂಕದ ಪ್ರಬಲ ಬ್ಯಾಟಿಂಗ್ ಹಾಗೂ ಡೆತ್-ಬೌಲಿಂಗ್ ಪ್ರಯೋಜನವಾಗಬಹುದು ಎಂಬ ಲೆಕ್ಕಾಚಾರವಿದೆ.

  2. ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಕೆಳ- ಮಧ್ಯಮ ಕ್ರಮಾಂಕದಲ್ಲಿ ಸೂಕ್ತ ಆಟಗಾರರು ಇಲ್ಲದೆ ತಂಡದ ಸಮತೋಲನ ಇಲ್ಲದೆ ಗಮನಾರ್ಹವಾಗಿ ಹೆಣಗಾಡಿದೆ. ಉತ್ತಮ ಆರಂಭಿಕ ಆಟಗಾರರನ್ನು ಹೊಂದಿದ್ದರೂ ಅವರು ಔಟ್ ಆದ ನಂತರ ಉಳಿದ ಆಟಗಾರರು ಬೇಗ ಫೆವಿಲಿಯನ್ ಸೇರುತ್ತದ್ದಾರೆ. ಅಕ್ಷರ್ ಪಟೇಲ್ ಅವರಂತಹ ಪ್ರಮುಖ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಜೊತೆಗೆ ಹಾರ್ದಿಕ್ ಪಾಂಡ್ಯ ಸೇರಿದರೆ ಡೆಲ್ಲಿ ತಂಡ ಅತ್ಯಂತ ಬಲಿಷ್ಠ, ಸಮತೋಲಿತ ಮತ್ತು ಅನುಭವಿ ತಂಡವಾಗಲಿದೆ. ಅಲ್ಲದೇ, ಪರ್ಯಾಯ ನಾಯಕನ ಆಯ್ಕೆಯನ್ನು ಸಹ ಒದಗಿಸುತ್ತದೆ.

  3. ಲಕ್ನೋ ಸೂಪರ್ ಜೈಂಟ್ಸ್: ಕಳೆದ ಎರಡು ಆವೃತ್ತಿಯಿಂದಲೂ ತೀವ್ರ ಹಿನ್ನಡೆಯನ್ನು ತಂಡ ಎದುರಿಸಿದೆ. ಇದರಿಂದಾಗಿ ಅವರ ಬ್ರ್ಯಾಂಡ್ ಮತ್ತು ತಂತ್ರಗಳನ್ನು ಮುನ್ನಡೆಸಲು ಅವರಿಗೆ ಉನ್ನತ ಪ್ರೊಫೈಲ್, ಶ್ರೇಷ್ಠ ಭಾರತೀಯ ಆಟಗಾರನ ಅಗತ್ಯವಿದೆ. ಸ್ಥಿರವಾದ ಪ್ಲೇಆಫ್ ಘಟಕಕ್ಕೆ ಕೊಂಡೊಯ್ಯಬಲ್ಲ ನಾಯಕನನ್ನು ಫ್ರಾಂಚೈಸಿ ಹುಡುಕುತ್ತಿದೆ. ಪಾಂಡ್ಯ ಲಕ್ನೋಗೆ ಪರಿಪೂರ್ಣ ಮಾರ್ಕೆಟಿಂಗ್ ನೀಡಬಲ್ಲ ಆಟಗಾರ ಆಗಿದ್ದಾರೆ.

  4. ಚೆನ್ನೈ ಸೂಪರ್ ಕಿಂಗ್ಸ್: ಇನ್ನೂ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೂ ಪ್ರತಿಭಾವಂತ ಆಟಗಾರರ ಕೊರತೆಯಿದೆ. ಎಂಎಸ್ ಧೋನಿ ಮೇಲಿರುವ ಗೌರವವನ್ನು ಪಾಂಡ್ಯ ಆಗಾಗ್ಗೆ ಹೇಳುತ್ತಿರುತ್ತಾರೆ. ತನ್ನನ್ನು ಥಾಲಾನ ಶಿಷ್ಯ ಎಂದು ಸಹ ಹೇಳುತ್ತಾರೆ. ಪಾಂಡ್ಯ ಸಿಎಸ್ ಕೆ ಸೇರ್ಪಡೆಯಿಂದ ಆಲ್ ರೌಂಡರ್ ಹಾಗೂ ಬೌಲಿಂಗ್ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಅಲ್ಲದೇ ರುತುರಾಜ್ ಗಾಯಕ್ವಾಡ್ ದೀರ್ಘಾವಧಿಯ ನಾಯಕನಾಗಿ ಇರುವುದರಿಂದ ಪಾಂಡ್ಯ ನಾಯಕತ್ವಕ್ಕೆ ಕಟ್ಟುಬೀಳದೆ ಆರಾಮವಾಗಿ, ಒತ್ತಡ ಇಲ್ಲದೇ ಇರಬಹುದು ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!