ಅರ್ಶ್ ದೀಪ್ ಸಿಂಗ್ ಗೆಳತಿ ಸಮ್ರೀನ್ ಕೌರ್ 
ಕ್ರಿಕೆಟ್

'ನನ್ನ ಜೀವನ, ನನ್ನಿಷ್ಟ.. ಇಷ್ಟವಿಲ್ಲದಿದ್ದರೆ ತೊಲಗಿ, ಬ್ಲಾಕ್ ಮಾಡಿ ಬಿಸಾಕ್ತೀನಿ': Arshdeep Singh ಗೆಳತಿ ಸಮ್ರೀನ್ ಕೌರ್ ಕೆಂಡ!

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರ ವೈಯಕ್ತಿಕ ಬದುಕಿನ ಬಗ್ಗೆ ಅನಗತ್ಯ ಟೀಕೆ, ಟ್ರೋಲಿಂಗ್ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತು ಅವರ ಗೆಳತಿ ಸಮ್ರೀನ್ ಕೌರ್..

ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಗೆಳತಿ ಸಮ್ರೀನ್ ಕೌರ್ ಟ್ರೋಲಿಗರ ವಿರುದ್ಧ ಕೆಂಡಾಮಂಡಲರಾಗಿದ್ದು, 'ನನ್ನ ಜೀವನ, ನನ್ನಿಷ್ಟ.. ಇಷ್ಟವಿಲ್ಲದಿದ್ದರೆ ತೊಲಗಿ, ಬ್ಲಾಕ್ ಮಾಡಿ ಬಿಸಾಕ್ತೀನಿ' ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರ ವೈಯಕ್ತಿಕ ಬದುಕಿನ ಬಗ್ಗೆ ಅನಗತ್ಯ ಟೀಕೆ, ಟ್ರೋಲಿಂಗ್ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತು ಅವರ ಗೆಳತಿ ಸಮ್ರೀನ್ ಕೌರ್ ಕೂಡ ಆನ್‌ಲೈನ್ ಟ್ರೋಲಿಗರ ಕಿರುಕುಳಕ್ಕೆ ಗುರಿಯಾಗಿದ್ದಾರೆ.

ನಿರಂತರ ಟೀಕೆಗಳಿಂದ ಬೇಸತ್ತಿರುವ ಸಮ್ರೀನ್, ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿದ್ದು, ತಮ್ಮ ಗೆಳತಿಯ ಬೆಂಬಲಕ್ಕೆ ಅರ್ಷದೀಪ್ ಕೂಡ ನಿಂತಿದ್ದಾರೆ.

ಅರ್ಷದೀಪ್ ಸಿಂಗ್ ಅವರೊಂದಿಗಿನ ಪ್ರೀತಿಯ ಸಂಬಂಧವನ್ನು ಬಹಿರಂಗಪಡಿಸಿದ ಬಳಿಕ ಸಮ್ರೀನ್ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಭಾರತ ತಂಡದ ಅಂತಾರಾಷ್ಟ್ರೀಯ ಪ್ರವಾಸಗಳ ಸಂದರ್ಭದಲ್ಲೂ ಅವರು ಅರ್ಷದೀಪ್ ಜೊತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಕೆಲವು ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಅನಗತ್ಯ ಟೀಕೆಗಳಿಗೆ ಕೊನೆ ಹಾಡಲು ಸಮ್ರೀನ್ ಇದೀಗ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

'ಪ್ರೀತಿಯನ್ನು ತೋರಿಸಿದರೂ ತಪ್ಪು, ಮುಚ್ಚಿಟ್ಟರೂ ತಪ್ಪು!'

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಸಮ್ರೀನ್, ಸಾಮಾಜಿಕ ಜಾಲತಾಣಗಳಲ್ಲಿನ ಜನರ ದ್ವಂದ್ವ ಮನಸ್ಥಿತಿಯನ್ನು ಟೀಕಿಸಿದ್ದಾರೆ.

"ನಾನು ಜಗತ್ತನ್ನು ಹೆಚ್ಚು ನೋಡಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಜನರ ಕಪಟತನದ ಅರಿವಾಗುತ್ತಿದೆ. ನಿಮ್ಮ ಪ್ರೀತಿಯನ್ನು ಜಗತ್ತಿನಿಂದ ಮುಚ್ಚಿಟ್ಟರೆ, ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ಹೆಮ್ಮೆ ಇಲ್ಲ ಎನ್ನುತ್ತಾರೆ. ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದೀರಿ ಎನ್ನುತ್ತಾರೆ. ನಿಮಗೆ ಕೆಲವು ನಿರೀಕ್ಷೆಗಳು ಮತ್ತು ಮಾನದಂಡಗಳಿದ್ದರೆ ಸ್ವಾರ್ಥಿ ಎನ್ನುತ್ತಾರೆ. ಒಬ್ಬ ವ್ಯಕ್ತಿ ಹೇಗೆ ನೋಡಿಕೊಳ್ಳುತ್ತಾನೆ, ಆತನ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಮೆಚ್ಚಿ ನಿಜವಾಗಿ ಪ್ರೀತಿಸಿದರೂ, ಕೊನೆಗೆ ಆತನನ್ನು ಬಿಟ್ಟು ಹೋಗುತ್ತೀರಿ ಎಂದು ಟೀಕಿಸುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ನಾನು 17ನೇ ವಯಸ್ಸಿನಿಂದಲೇ ಕೆಲಸ ಮಾಡುತ್ತಿದ್ದೇನೆ. ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ನನ್ನನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. 20ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದೇನೆ. ಸಂಬಂಧವಿದ್ದರೂ ಇಲ್ಲದಿದ್ದರೂ ಸಂತೋಷದ ಬದುಕು ಕಟ್ಟಿಕೊಂಡಿದ್ದೇನೆ. ಬಾಲ್ಯದಿಂದಲೇ ನನ್ನ ಪ್ರಯಾಣ ಮತ್ತು ಜೀವನಶೈಲಿಯ ವೆಚ್ಚವನ್ನು ಭರಿಸುವಷ್ಟು ಆರ್ಥಿಕ ಸ್ವಾತಂತ್ರ್ಯವನ್ನು ದೇವರು ಕರುಣಿಸಿದ್ದಾನೆ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ" ಎಂದು ಹೇಳಿದ್ದಾರೆ.

'ನನ್ನ ಬದುಕು, ನನ್ನಿಷ್ಟ; ಇಷ್ಟವಿಲ್ಲದಿದ್ದರೆ ನನ್ನ ಪೇಜ್ ಬಿಟ್ಟು ಹೋಗಿ'

"ನನ್ನ ಜೀವನದಲ್ಲಿ ಇಂತಹ ಒಬ್ಬ ವ್ಯಕ್ತಿ ಸಿಕ್ಕಿರುವುದು ನನ್ನ ಅದೃಷ್ಟ. ಅವರನ್ನು ಇನ್ನೂ ಮೊದಲೇ ಭೇಟಿಯಾಗಬೇಕಿತ್ತು ಎನಿಸುತ್ತದೆ. ನನ್ನನ್ನು ಸಂಪೂರ್ಣಗೊಳಿಸುವಂತಹ ವ್ಯಕ್ತಿ ಅವರು. ಇದಕ್ಕೆ ಯಾರಿಗೂ ನಾನು ವಿವರಣೆ ನೀಡುವ ಅಗತ್ಯವಿಲ್ಲ. ನನ್ನ ಬಗ್ಗೆ, ಆತನ ಬಗ್ಗೆ ಹಾಗೂ ನಮ್ಮಿಬ್ಬರ ಸಂಬಂಧದ ಬಗ್ಗೆ ನಾನು ಪೋಸ್ಟ್ ಮಾಡುತ್ತೇನೆ. ಅದು ನನ್ನ ಜೀವನ. ನಿಮಗೆ ಅದನ್ನು ನೋಡುವುದು ಇಷ್ಟವಿಲ್ಲದಿದ್ದರೆ ನನ್ನ ಪೇಜ್‌ನಿಂದ ಹೊರಹೋಗಬಹುದು. ಅದರಲ್ಲೂ ಮಹಿಳೆಯರೇ ಮತ್ತೊಬ್ಬ ಮಹಿಳೆಯನ್ನು ಕೆಳಮಟ್ಟಕ್ಕೆ ಎಳೆಯುವುದನ್ನು ನೋಡಲು ಬೇಸರವಾಗುತ್ತದೆ. ಅನಗತ್ಯ ಅಭಿಪ್ರಾಯಗಳು, ಊಹಾಪೋಹಗಳು ಮತ್ತು ನಕಾರಾತ್ಮಕ ಟೀಕೆಗಳಿಂದ ಸಾಕಷ್ಟು ಸುಸ್ತಾಗಿದ್ದೇನೆ" ಎಂದು ಸಮ್ರೀನ್ ಬರೆದುಕೊಂಡಿದ್ದಾರೆ.

ಬ್ಲಾಕ್ ಮಾಡಿ ಬಿಸಾಕ್ತೀನಿ

ಇಷ್ಟಕ್ಕೇ ನಿಲ್ಲದ ಅವರು, "ನಮ್ಮ ಬಗ್ಗೆ ವೈಯಕ್ತಿಕ ಅಸಮಾಧಾನವನ್ನು ಹೊರಹಾಕಲು ಬರುವ ಪ್ರತಿಯೊಬ್ಬರನ್ನೂ ನಾನು ಮತ್ತು ನನ್ನ ತಂಡ ಬ್ಲಾಕ್ ಮಾಡುತ್ತೇವೆ. ನನ್ನ ಸಾಮಾಜಿಕ ಜಾಲತಾಣದ ಖಾತೆ ನಿಮ್ಮ ವೈಯಕ್ತಿಕ ದ್ವೇಷ ಮತ್ತು ಅಸಮಾಧಾನವನ್ನು ಹೊರಹಾಕುವ ಸ್ಥಳವಲ್ಲ. ನಮ್ಮನ್ನು ನಿಜವಾಗಿಯೂ ಪ್ರೀತಿಸುವ ಮತ್ತು ಬೆಂಬಲಿಸುವ ಎಲ್ಲರಿಗೂ ಧನ್ಯವಾದಗಳು. ನಾನು ಸಂತೋಷವಾಗಿದ್ದೇನೆ, ಪ್ರೀತಿಯಲ್ಲಿದ್ದೇನೆ ಮತ್ತು ನನ್ನ ಜೀವನವನ್ನು ನನ್ನಿಷ್ಟದಂತೆ ಬದುಕುತ್ತಿದ್ದೇನೆ. ಅಷ್ಟೇ ಮುಖ್ಯ. ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ" ಎಂದು ಮನವಿ ಮಾಡಿದ್ದಾರೆ.

'ನಿನ್ನ ಬಗ್ಗೆ ಹೆಮ್ಮೆ ಇದೆ ಬೇಬಿ': ಗೆಳತಿ ಬೆನ್ನಿಗೆ ನಿಂತ ಅರ್ಷದೀಪ್ ಸಿಂಗ್

ಗೆಳತಿ ಸಮ್ರೀನ್ ಅವರ ಪೋಸ್ಟ್ ಅನ್ನು ಅರ್ಷದೀಪ್ ಸಿಂಗ್ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮರುಹಂಚಿಕೊಂಡಿದ್ದಾರೆ. ಅಲ್ಲದೆ, ಆಕೆಯ ಧೈರ್ಯವನ್ನು ಮೆಚ್ಚಿ ಟ್ರೋಲಿಗರಿಗೂ ತಿರುಗೇಟು ನೀಡಿದ್ದಾರೆ. "ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ ಬೇಬಿ. ನೀನು ತುಂಬಾ ಧೈರ್ಯವಂತೆ" ಎಂದು ಅರ್ಷದೀಪ್ ಬರೆದುಕೊಂಡಿದ್ದಾರೆ.

"ನಾವು ಏನು ಮಾಡಬೇಕು, ಏನು ಮಾಡಬಾರದು ಎಂದು ಅತಿಯಾಗಿ ತಲೆಕೆಡಿಸಿಕೊಳ್ಳುವವರು ಸ್ವಲ್ಪ ವಿರಾಮ ತೆಗೆದುಕೊಳ್ಳಿ. ಬದುಕಿ, ಇತರರನ್ನೂ ಬದುಕಲು ಬಿಡಿ. ಈ ಜಗತ್ತನ್ನು ಮತ್ತು ಅಂತರ್ಜಾಲವನ್ನು ಉತ್ತಮ ಸ್ಥಳವನ್ನಾಗಿ ಮಾಡೋಣ. ಪ್ರೀತಿಯನ್ನು ಹಂಚಿಕೊಳ್ಳಿ, ಪ್ರೀತಿಯನ್ನು ನಿಮ್ಮ ಬದುಕಿನಲ್ಲೂ ಸ್ವಾಗತಿಸಿ. ಎಲ್ಲರೊಂದಿಗೆ ಪ್ರೀತಿ ಮತ್ತು ದಯೆಯಿಂದ ವರ್ತಿಸಿ. ಅದೇ ಪ್ರೀತಿ ನಿಮಗೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಮರಳಿ ಸಿಗುತ್ತದೆ" ಎಂದು ಹೇಳಿದ್ದಾರೆ.

"ನನ್ನ ಜೀವನದಲ್ಲಿ ಇಷ್ಟು ಪರಿಶುದ್ಧ ಮನಸ್ಸಿನ, ಅರ್ಥಮಾಡಿಕೊಳ್ಳುವ ಮತ್ತು ಪ್ರೀತಿಯಿಂದ ತುಂಬಿರುವ ವ್ಯಕ್ತಿಯನ್ನು ಕರುಣಿಸಿದ ದೇವರಿಗೆ ನಾನು ಕೃತಜ್ಞ. ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದು ಮನುಷ್ಯ ಅನುಭವಿಸಬಹುದಾದ ಅತ್ಯುತ್ತಮ ಭಾವನೆ. ಈ ಅನುಭವ ಎಲ್ಲರಿಗೂ ಆದಷ್ಟು ಬೇಗ ಸಿಗಲಿ ಎಂದು ಆಶಿಸುತ್ತೇನೆ. ನಮ್ಮನ್ನು ಪ್ರೀತಿಸುವ ಮತ್ತು ಹಾರೈಸುವ ಎಲ್ಲರಿಗೂ ಧನ್ಯವಾದಗಳು" ಎಂದು ಅರ್ಷದೀಪ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2024 ರ ಚುನಾವಣೆ ಅಕ್ರಮ; ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುತ್ತಾರೆ, ನಾನು ಹೇಳಿದ್ದೆಲ್ಲಾ ಯಾವಾಗಲೂ ನಿಜವಾಗುತ್ತದೆ-ರಾಹುಲ್ ಗಾಂಧಿ

ಹಿಂದೂ ಮತದಾರರು ಕೂಡ ಪಾಕಿಸ್ತಾನಿಗಳೇ? ಉತ್ತರಪ್ರದೇಶದ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ವರದಿ ಬಗ್ಗೆ ಅಬ್ದುಲ್ಲಾ ಲೇವಡಿ!

ಬಿಡುಗಡೆ ಬೆನ್ನಲ್ಲೇ ಮತ್ತೆ Azam Khan ಜೈಲುಪಾಲು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಘಾತ!

ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್? ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೀಮಂತ್ ಕುಮಾರ್ ಸಿಂಗ್

Biggboss Malayalam: ಹಿಂದೂ ಯುವಕನಿಗೆ ಪ್ರಪೋಸ್? ಫಾತಿಮಾ ದಯವಿಟ್ಟು ಶೋ ಬಿಟ್ಟು ಬಾ; ವೇದಿಕೆಯಲ್ಲಿ ಪೋಷಕರ ಕಣ್ಣೀರು, Video