ಅರ್ಷ್‌ದೀಪ್ ಸಿಂಗ್ - ಸಮ್ರೀನ್ 
ಕ್ರಿಕೆಟ್

ನಟಿ-ಮಾಡೆಲ್ ಸಮ್ರೀನ್ ಜತೆ ಸ್ಟಾರ್‌ ಕ್ರಿಕೆಟರ್‌ ಅರ್ಷ್‌ದೀಪ್ ಸಿಂಗ್ ಎಂಗೇಜ್‌ಮೆಂಟ್; ಫೋಟೋ ಹಂಚಿಕೊಂಡ ಗರ್ಲ್​ಫ್ರೆಂಡ್!

ಅರ್ಶ್‌ದೀಪ್ ಸಿಂಗ್ ಅವರು ಐಪಿಎಲ್ 2027ಕ್ಕೂ ಮುಂಚಿತವಾಗಿ ಪಂಜಾಬ್ ಕಿಂಗ್ಸ್‌ನಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಅಧಿಕೃತವಾಗಿ ಸೇರಿಕೊಂಡ ಕೆಲವೇ ಗಂಟೆಗಳ ನಂತರ ಅವರ ಗೆಳತಿ ಎಂಗೇಜ್‌ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಬುಧವಾರ ನ್ಯೂಜಿಲೆಂಡ್‌ನಲ್ಲಿ ನಟಿ-ಮಾಡೆಲ್ ಸಮ್ರೀನ್ ಕೌರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಅರ್ಶ್‌ದೀಪ್ ಸಿಂಗ್ ಅವರು ಐಪಿಎಲ್ 2027ಕ್ಕೂ ಮುಂಚಿತವಾಗಿ ಪಂಜಾಬ್ ಕಿಂಗ್ಸ್‌ನಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಅಧಿಕೃತವಾಗಿ ಸೇರಿಕೊಂಡ ಕೆಲವೇ ಗಂಟೆಗಳ ನಂತರ ಅವರ ಗೆಳತಿ ಎಂಗೇಜ್‌ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನವೆಂಬರ್ 11ರಂದು ನ್ಯೂಜಿಲೆಂಡ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿದೆ. ಸಮ್ರೀನ್ ಕೌರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಸಮ್ರೀನ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ನಿಶ್ಚಿತಾರ್ಥವನ್ನು ಘೋಷಿಸಿದ್ದು, ಅರ್ಷ್‌ದೀಪ್ ಅವರು ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಸುಂದರ ಕ್ಷಣದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ʻಜೀವನ ನಮಗೆ ನೀಡಬಹುದಾದ ಎಲ್ಲ ವಿಷಯಗಳ ಪೈಕಿ, ನಾವಿಬ್ಬರೂ ಪರಸ್ಪರ ಸಿಕ್ಕಿರುವುದೇ ನನಗೆ ಅತ್ಯಂತ ಸಂತೋಷದ ಸಂಗತಿ. ನಮ್ಮಿಬ್ಬರ ಒಟ್ಟಿಗಿನ ಸುದೀರ್ಘ ಜೀವನಕ್ಕಾಗಿ. 11.11.2026 (ಹಾಯ್‌ ಭಾವಿ ಪತಿ)ʼʼ ಎಂದು ಸಮ್ರೀನ್ ಬರೆದುಕೊಂಡಿದ್ದಾರೆ.

ಅರ್ಷ್‌ದೀಪ್ ಸಿಂಗ್ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು, ಅವರ ಈ ಪ್ರವಾಸದಲ್ಲಿ ಸಮ್ರೀನ್ ಕೂಡ ಜೊತೆಯಾಗಿದ್ದಾರೆ. ಸರಣಿಯ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅರ್ಷ್‌ದೀಪ್, ನವೆಂಬರ್ 13 ರಂದು ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು, Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

E-ಖಾತಾ ಅಕ್ರಮ: GBA ಸಹಾಯಕ ಆಯುಕ್ತ ಮಾಗಿ ಸೇರಿ 31 ಜನರ ವಿರುದ್ಧ FIR ದಾಖಲು

ಪ್ರೀತಿ, ನಷ್ಟ, ನೋವು, ತ್ಯಾಗದ ಅಪರೂಪದ ಕಥನ; ಪ್ರತಿಯೊಬ್ಬ ಭಾರತೀಯರ ಓದಲೇಬೇಕಾದ ಪುಸ್ತಕ': ಸೋನಿಯಾ ಗಾಂಧಿ ಆತ್ಮಕಥನಕ್ಕೆ ಕಾಂಗ್ರೆಸ್ ನಾಯಕರ ಮೆಚ್ಚುಗೆ..!

'ಕೈ' ಕಾರ್ಯಕರ್ತರಿಗೆ ಸರ್ಕಾರ ಭರ್ಜರಿ ಗಿಫ್ಟ್; 428 ಮಂದಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ..!

ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ವಿದೇಶಿ ಪ್ರಯಾಣಿಕರ ಪ್ರವೇಶ ಸುಲಭ, ವಿಭಾಗಗಳು 13ರಿಂದ 9ಕ್ಕೆ ಇಳಿಕೆ!