ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು 
ಕ್ರಿಕೆಟ್

4th ODI: ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್, 89 ರನ್ ಗಳಿಗೇ ಭಾರತ ಆಲೌಟ್, 244 ರನ್ ಅಂತರದ ಹೀನಾಯ ಸೋಲು!

ಮೌಂಟ್ ಮೌಂಗನುಯಿಯ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 334 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ 26.4 ಓವರ್ ನಲ್ಲೇ 89 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು..

ಮೌಂಟ್ ಮೌಂಗನುಯಿ: 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವೇಗಿ ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್ ಗೆ ಪತರುಗುಟ್ಟಿದ ಭಾರತ ತಂಡ ಕೇವಲ 89 ರನ್ ಗಳಿಗೇ ಆಲೌಟ್ ಆಗಿ, 244 ರನ್ ಅಂತರದ ಹೀನಾಯ ಸೋಲು ಕಂಡಿದೆ.

ಮೌಂಟ್ ಮೌಂಗನುಯಿಯ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 334 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ 26.4 ಓವರ್ ನಲ್ಲೇ 89 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಭಾರತದ ಬ್ಯಾಟಿಂಗ್ ಆಧಾರ ಸ್ಥಂಭಗಳೆಂದೇ ಖ್ಯಾತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗಿದ್ದು ಟೀಂ ಇಂಡಿಯಾಗೆ ಮರ್ಮಾಘಾತ ನೀಡಿದಂತಾಯಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು.

ಹೆನ್ರಿ ಎಸೆತವನ್ನು ಎದುರಿಸಲು ಹೋದ ರೋಹಿತ್ ಬ್ಯಾಟ್‌ಗೆ ಚೆಂಡು ತಾಗಿ ಸ್ಲಿಪ್‌ನಲ್ಲಿದ್ದ ಫಿನ್ ಅಲೆನ್ ಕೈ ಸೇರಿತು. ಹೀಗಾಗಿ ರೋಹಿತ್ ಗೋಲ್ಡನ್ ಡಕ್‌ಗೆ ಬಲಿಯಾದರು.

ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೆನ್ರಿ ಎಸೆದ ಒಳನುಗ್ಗುವ ಎಸೆತಕ್ಕೆ ಕೊಹ್ಲಿ ಬೌಲ್ಡ್ ಆದರು. ಕೇವಲ ನಾಲ್ಕು ಎಸೆತ ಎದುರಿಸಿದ ಕೊಹ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದರು.

ಇದರ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್ ಕೂಡ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ಮೂಲಕ ಭಾರತದ ಮೂವರು ಪ್ರಮುಖ ಬ್ಯಾಟರ್‌ಗಳು ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಪೆವಿಲಿಯನ್ ಸೇರಿದರು.

ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬಲ

ಇನ್ನು ಆರಂಭಿಕ ಆಟಗಾರರು ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದರಿಂದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಯಿತು. ಆದಾಗ್ಯ ಇಶಾನ್ ಕಿಶನ್ (27), ಅಕ್ಸರ್ ಪಟೇಲ್ (21) ಮತ್ತು ನಮನ್ ಧೀರ್ (21) ಕಿವೀಸ್ ಬೌಲರ್ ಗಳನ್ನು ಕೊಂಚ ಕಾಡಿದರು. ಆದಾಗ್ಯೂ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಭಾರತ ತಂಡ 26.4 ಓವರ್ ನಲ್ಲೇ 89 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್

ಇನ್ನು ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಗೆಲುವಿನ ರೂವಾರಿಯಾಗಿದ್ದು ವೇಗಿ ಮ್ಯಾಟ್ ಹೆನ್ರಿ. ಒಟ್ಟು 9.4 ಓವರ್ ಎಸೆದ ಮ್ಯಾಟ್ ಹೆನ್ರಿ, 2 ಮೇಡನ್ ಸಹಿತ ಕೇವಲ 27 ರನ್ ನೀಡಿ ಬರೊಬ್ಬರಿ 6 ವಿಕೆಟ್ ಕಬಳಿಸಿದರು.

ಮಾತ್ರವಲ್ಲದೇ ತಮ್ಮ ಅಮೋಘ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ನಮ್ಮ ಮೆಟ್ರೊ ಪಿಂಕ್ ಲೈನ್ ಪ್ರಧಾನಿ ಮೋದಿ ಉದ್ಘಾಟನೆ; ನ.14ರಿಂದ ಕಾರ್ಯಾಚರಣೆ

4th ODI: 16 ವರ್ಷಗಳ ಬಳಿಕ ಮತ್ತದೇ ಆಘಾತ, ಒಂದೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ!

ಸಾಂಪ್ರದಾಯಿಕ ಮದುವೆಗೆ ಬ್ರೇಕ್; ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್-ಕಾವ್ಯಾ ಮಾರನ್: ಏನಿದು ಹೊಸ ಪದ್ಧತಿ?

4th ODI: ಒಂದೇ ಓವರ್ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಡಕೌಟ್, Matt Henry ಮಾರಕ ಬೌಲಿಂಗ್, ವಿಶ್ವದಾಖಲೆ!

4th ODI: ಒಂದೂ ರನ್ ಗಳಿಸದೇ 3 ವಿಕೆಟ್ ಪತನ, ಕ್ರಿಕೆಟ್ ಇತಿಹಾಸದ ಹೀನಾಯ ದಾಖಲೆ ಬರೆದ ಭಾರತ!