U19 ಏಷ್ಯಾ ಕಪ್ 2026 ಪ್ರಶಸ್ತಿ ವಿಜೇತ ಭಾರತ ತಂಡ 
ಕ್ರಿಕೆಟ್

ಕೊನೆಯ ಎಸೆತದವರೆಗೂ ಹೋರಾಡಿ ಗೆದ್ದ ಯುವಪಡೆ: ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಬಿಸಿಸಿಐ ಮೆಚ್ಚುಗೆ, VVS ಲಕ್ಷ್ಮಣ್ ತರಬೇತಿಗೂ ಶ್ಲಾಘನೆ!

ಯುವ ಆಟಗಾರರ ಹೋರಾಟ, ಆತ್ಮವಿಶ್ವಾಸ ಮತ್ತು ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಭಾರತ ತಂಡದ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಬಾಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ 2026ರ ಎಸಿಸಿ ಅಂಡರ್-19 ಏಷ್ಯಾಕಪ್ ಪ್ರಶಸ್ತಿ ಗೆದ್ದಿರುವ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಭಿನಂದನೆ ಸಲ್ಲಿಸಿದ್ದಾರೆ.

ಯುವ ಆಟಗಾರರ ಹೋರಾಟ, ಆತ್ಮವಿಶ್ವಾಸ ಮತ್ತು ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಭಾರತ ತಂಡದ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತದ ಗೆಲುವಿನ ಬಳಿಕ ಮಾತನಾಡಿದ ದೇವಜಿತ್ ಸೈಕಿಯಾ, "ಈ ಗೆಲುವಿನ ಸಂಪೂರ್ಣ ಶ್ರೇಯಸ್ಸು ಭಾರತದ ಕಿರಿಯರ ತಂಡದ ಯುವ ಚಾಂಪಿಯನ್‌ಗಳಿಗೆ ಸಲ್ಲಬೇಕು. ಇಡೀ ದೇಶ ಮತ್ತು ಬಿಸಿಸಿಐ ಈ ಸಾಧನೆಯಿಂದ ಅತ್ಯಂತ ಸಂತೋಷಗೊಂಡಿವೆ. ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ಹಾಗೂ ತಂಡದ ಬೆನ್ನಿಗೆ ದೃಢವಾಗಿ ನಿಂತಿದ್ದ ಸಂಪೂರ್ಣ ಸಹಾಯಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.

ಕೊನೆಯ ಎಸೆತದವರೆಗೂ ಹೋರಾಡಿದ ಯುವಪಡೆ

"ಈ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನಾವು ಪಾಕಿಸ್ತಾನ ವಿರುದ್ಧ ಸೋತಿದ್ದೆವು. ಆದರೆ, ಟೂರ್ನಿಯ ಅತ್ಯಂತ ನಿರ್ಣಾಯಕವಾದ ಫೈನಲ್ ಪಂದ್ಯದಲ್ಲಿ ಗೆಲುವು ಅಸಾಧ್ಯವೆನಿಸುವ ಹಂತದಿಂದ ತಂಡ ಅದ್ಭುತವಾಗಿ ಪುಟಿದೆದ್ದಿತು.

ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ಹೋರಾಡಿ ಗೆಲುವು ಸಾಧಿಸಿತು. ಇದು ತಂಡದ ನೈಜ ಸಾಮರ್ಥ್ಯವನ್ನು ತೋರಿಸುತ್ತದೆ. ಆಟಗಾರರ ದೃಢನಿಶ್ಚಯ, ಸಮರ್ಪಣೆ ಮತ್ತು ಆತ್ಮವಿಶ್ವಾಸಕ್ಕೆ ಈ ಗೆಲುವು ಸಾಕ್ಷಿಯಾಗಿದೆ" ಎಂದು ಸೈಕಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭವಿಷ್ಯದ ಆಟಗಾರರ ತಯಾರಿಗೆ ಮೆಚ್ಚುಗೆ

ಭಾರತದ ಈ ಗೆಲುವು ಯುವ ಆಟಗಾರರನ್ನು ಸಿದ್ಧಪಡಿಸುವ ಬಿಸಿಸಿಐನ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಸಾಬೀತುಪಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ನಮ್ಮ ಆಟಗಾರರನ್ನು ಸಿದ್ಧಪಡಿಸುವ ವ್ಯವಸ್ಥೆ (ಫೀಡರ್ ಲೈನ್) ಸರಿಯಾದ ಹಾದಿಯಲ್ಲಿದೆ ಎಂಬುದನ್ನು ಈ ಗೆಲುವು ತೋರಿಸಿಕೊಟ್ಟಿದೆ. ಬಿಸಿಸಿಐನ ಕ್ರಿಕೆಟ್ ವಿಭಾಗದ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಾಗೂ ಸಂಪೂರ್ಣ ಸಹಾಯಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಯೋಜನೆ ಮತ್ತು ಪರಿಶ್ರಮದಿಂದ ಹಿರಿಯರ ತಂಡಕ್ಕೆ ನಿರಂತರವಾಗಿ ಪ್ರತಿಭಾವಂತ ಆಟಗಾರರು ಲಭ್ಯವಾಗುತ್ತಿದ್ದಾರೆ" ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.

ಯುವ ಆಟಗಾರರ ಈ ಸಾಧನೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5th ODI: 5ನೇ ಏಕದಿನ ಪಂದ್ಯ: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ, ಭಾರತ ತಂಡದಲ್ಲಿ 2 ಬದಲಾವಣೆ, ಯಶ್ ಠಾಕೂರ್ ಪದಾರ್ಪಣೆ!

'ವಿದೇಶಿಗ ಭಾರತದ ಪ್ರಜಾಪ್ರಭುತ್ವವನ್ನು ಹೀಯಾಳಿಸುವಾಗ ರಾಹುಲ್ ಗಾಂಧಿ ನಗ್ತಾರೆ'; ವಿದೇಶಿ ಶಕ್ತಿಗಳ ತಾಳಕ್ಕೆ ಅವರು ಕುಣಿಯೋದು: ಬಿಜೆಪಿ

ಉತ್ತರ ಪ್ರದೇಶ ಚುನಾವಣೆ: 181 ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ: ಎಸ್ ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದೇನು?

U19 ಏಷ್ಯಾಕಪ್ ಫೈನಲ್: ಕೊನೇ ಎಸೆತದಲ್ಲಿ ಬೌಂಡರಿ; ಪಾಕ್ ವಿರುದ್ಧ ಭಾರತಕ್ಕೆ 1 ವಿಕೆಟ್‌ ರೋಚಕ ಜಯ!

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ; ಹೋರಿ ತಿವಿದು ಇಬ್ಬರು ಸಾವು