ಪಾಕ್ ಮಾಜಿ ವೇಗಿ ತನ್ವೀರ್ ಅಹ್ಮದ್ 
ಕ್ರಿಕೆಟ್

'ಮತ್ತೆ ಮರ್ಯಾದೆ ಹೊಯ್ತು, ನಾವು ಶೂನ್ಯ, ಭಾರತಕ್ಕೆ ಹೋಲಿಕೆಯೇ ಇಲ್ಲ': U19 ಏಷ್ಯಾಕಪ್ ಫೈನಲ್ ಸೋಲು ಬೆನ್ನಲ್ಲೇ PCB ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ

ಭಾರತದ ಈ ಐತಿಹಾಸಿಕ ಗೆಲುವು ಪಾಕಿಸ್ತಾನದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಸೋಲಿನ ಬೆನ್ನಲ್ಲೇ ಆ ದೇಶದ ಮಾಜಿ ವೇಗಿ ತನ್ವೀರ್ ಅಹ್ಮದ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲಾಹೋರ್: 2026ರ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಒಂದು ವಿಕೆಟ್‌ನ ರೋಚಕ ಗೆಲುವು ದಾಖಲಿಸಿ ದಾಖಲೆಯ ಒಂಬತ್ತನೇ ಬಾರಿ ಚಾಂಪಿಯನ್ ಆಗಿದೆ.

ಭಾರತದ ಈ ಐತಿಹಾಸಿಕ ಗೆಲುವು ಪಾಕಿಸ್ತಾನದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಸೋಲಿನ ಬೆನ್ನಲ್ಲೇ ಆ ದೇಶದ ಮಾಜಿ ವೇಗಿ ತನ್ವೀರ್ ಅಹ್ಮದ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 337 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 254 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಗೆಲುವಿಗೆ ಓವರ್‌ಗೆ ಸುಮಾರು 10 ರನ್‌ಗಳ ಅಗತ್ಯವಿದ್ದಾಗ ಕೇವಲ ಎರಡು ವಿಕೆಟ್‌ಗಳು ಮಾತ್ರ ಬಾಕಿ ಇದ್ದವು. ಆದರೆ, ಕೊನೆಯವರೆಗೂ ಹೋರಾಡಿದ ಭಾರತದ ಯುವ ಆಟಗಾರರು ಅಂತಿಮ ಎಸೆತದಲ್ಲಿ ಗೆಲುವಿನ ನಗೆ ಬೀರಿದರು.

ಈ ಸೋಲಿನಿಂದ ಆಕ್ರೋಶಗೊಂಡಿರುವ ಮಾಜಿ ವೇಗಿ ತನ್ವೀರ್ ಅಹ್ಮದ್, ಪಾಕಿಸ್ತಾನ ಕ್ರಿಕೆಟ್ ವ್ಯವಸ್ಥೆಯ ವೈಫಲ್ಯವೇ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ.

'ನಾವು ಶೂನ್ಯ, ಭಾರತದೊಂದಿಗೆ ಹೋಲಿಕೆ ಬೇಡ'

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ತನ್ವೀರ್, ಪಾಕಿಸ್ತಾನ ತಂಡದ ಪ್ರದರ್ಶನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಮಗೆ ಭಾರಿ ಅವಮಾನವಾಗಿದೆ. ಭಾರತ ವಿರುದ್ಧ ಇಂತಹ ಸೋಲಿನಿಂದ ಮುಖಭಂಗವಾಗಿದೆ. ನಾವು ಭಾರತಕ್ಕಿಂತ ಉತ್ತಮ ಎಂದು ಹೇಳುವುದನ್ನು ಮೊದಲು ನಿಲ್ಲಿಸಬೇಕು. ಇಂದು ನಾನು ಹೇಳುತ್ತಿದ್ದೇನೆ, ನಾವು ಶೂನ್ಯ, ಸಂಪೂರ್ಣ ಶೂನ್ಯ. ಭಾರತದ ಕ್ರಿಕೆಟ್ ವ್ಯವಸ್ಥೆಗೆ ನಮ್ಮ ವ್ಯವಸ್ಥೆಯನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ" ಎಂದು ಕಿಡಿಕಾರಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯವೈಖರಿಯನ್ನೂ ಅವರು ಪ್ರಶ್ನಿಸಿದ್ದಾರೆ. ಪ್ರತಿ ಬಾರಿ ಹೊಸ ಅಧ್ಯಕ್ಷರು ಅಧಿಕಾರಕ್ಕೆ ಬಂದಾಗ ತಮ್ಮ ಆಪ್ತರಿಗೆ ಮತ್ತು ತಮಗೆ ಬೇಕಾದವರಿಗೆ ಪ್ರಮುಖ ಹುದ್ದೆಗಳನ್ನು ನೀಡಲು ಮುಂದಾಗುತ್ತಾರೆ. ಇದರಿಂದ ಇಡೀ ಕ್ರಿಕೆಟ್ ವ್ಯವಸ್ಥೆಯೇ ಹಾಳಾಗುತ್ತಿದೆ ಎಂದು ಆರೋಪಿಸಿದ್ದಾರೆ.

"ನಮ್ಮ ಕ್ರಿಕೆಟ್ ಮಂಡಳಿ ಎಲ್ಲವನ್ನೂ ಹಾಳು ಮಾಡಿದೆ. ಪಿಸಿಬಿ ಇಡೀ ವ್ಯವಸ್ಥೆಯನ್ನು ನಾಶಪಡಿಸಿದೆ. ಯಾರು ಅಧ್ಯಕ್ಷರಾದರೂ ತಮ್ಮ ಆಪ್ತರನ್ನು ವ್ಯವಸ್ಥೆಯೊಳಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ" ಎಂದು ತನ್ವೀರ್ ಅಸಮಾಧಾನ ಹೊರಹಾಕಿದ್ದಾರೆ.

ಭಾರತದ ಅದ್ಭುತ ಹೋರಾಟಕ್ಕೆ ಮೆಚ್ಚುಗೆ

ಇದೇ ವೇಳೆ, ಸೋಲಿನ ಅಂಚಿನಲ್ಲಿದ್ದ ಪಂದ್ಯವನ್ನು ಭಾರತ ಗೆದ್ದ ರೀತಿಗೆ ತನ್ವೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮೊಹಿತ್ ಮತ್ತು ಮನಾಲ್ ಚೌಹಾಣ್ ಅವರ ಹೋರಾಟವನ್ನು ಶ್ಲಾಘಿಸಿದ್ದಾರೆ.

"ಭಾರತ ಈಗಾಗಲೇ ಸೋತ ಪಂದ್ಯವನ್ನು ಗೆದ್ದುಕೊಂಡಿದೆ. ಪಾಕಿಸ್ತಾನ 337 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು. ಭಾರತ ಕೊನೆಯ ಎರಡು ವಿಕೆಟ್‌ಗಳನ್ನು ಮಾತ್ರ ಹೊಂದಿದ್ದಾಗಲೂ ಪಂದ್ಯ ಸಂಪೂರ್ಣವಾಗಿ ಪಾಕಿಸ್ತಾನದ ಹಿಡಿತದಲ್ಲಿತ್ತು. ಆದರೆ ಮೊಹಿತ್ ಮತ್ತು ಮನಾಲ್ ಚೌಹಾಣ್ ಅದ್ಭುತವಾಗಿ ಆಡಿದರು. ಅವರು ಪಂದ್ಯವನ್ನು ಪಾಕಿಸ್ತಾನದಿಂದ ಕಸಿದುಕೊಂಡ ರೀತಿ ನಿಜಕ್ಕೂ ಶ್ರೇಷ್ಠ" ಎಂದು ಹೇಳಿದ್ದಾರೆ.

ಭಾರತದ ಯುವ ಆಟಗಾರರ ಹೋರಾಟವನ್ನು ಪವಾಡಕ್ಕೆ ಹೋಲಿಸಿರುವ ತನ್ವೀರ್, ಪಾಕಿಸ್ತಾನದ ಕ್ರಿಕೆಟ್ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್: ಕಿದ್ವಾಯಿಯಲ್ಲಿ 200 ಹಾಸಿಗೆಗಳ ಹೊಸ ಘಟಕ, 5 ಜಿಲ್ಲೆಗಳಲ್ಲಿ ಆಸ್ಪತ್ರೆ: ಸಿಎಂ ಡಿಕೆಶಿ ಘೋಷಣೆ

5th ODI: 5ನೇ ಏಕದಿನ ಪಂದ್ಯ: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ, ಭಾರತ ತಂಡದಲ್ಲಿ 2 ಬದಲಾವಣೆ, ಯಶ್ ಠಾಕೂರ್ ಪದಾರ್ಪಣೆ!

ಕೊನೆಯ ಎಸೆತದವರೆಗೂ ಹೋರಾಡಿ ಗೆದ್ದ ಯುವಪಡೆ: ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಬಿಸಿಸಿಐ ಮೆಚ್ಚುಗೆ, VVS ಲಕ್ಷ್ಮಣ್ ತರಬೇತಿಗೂ ಶ್ಲಾಘನೆ!

'ಕಾಂಗ್ರೆಸ್ ನಾಯಕರನ್ನು ಬೆದರಿಸಲು ಫೋನ್ ಕದ್ದಾಲಿಕೆ': ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

'ವಿದೇಶಿಗ ಭಾರತದ ಪ್ರಜಾಪ್ರಭುತ್ವವನ್ನು ಹೀಯಾಳಿಸುವಾಗ ರಾಹುಲ್ ಗಾಂಧಿ ನಗ್ತಾರೆ'; ವಿದೇಶಿ ಶಕ್ತಿಗಳ ತಾಳಕ್ಕೆ ಅವರು ಕುಣಿಯೋದು: ಬಿಜೆಪಿ