ಅಸಾದುದ್ದೀನ್ ಓವೈಸಿ 
ಕ್ರಿಕೆಟ್

'ನಮ್ಮ ಮಕ್ಕಳನ್ನೇ ಸೋಲಿಸೋಕೆ ಆಗಿಲ್ಲ, ಇನ್ನು?': U19 ಏಷ್ಯಾಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕಾಲೆಳೆದ ಓವೈಸಿ, Video

ಭಾರತಕ್ಕೆ ಗೆಲ್ಲಲು 338 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಬೃಹತ್ ಗುರಿಯನ್ನು ಪಂದ್ಯದ ಕೊನೆಯ ಎಸೆತದಲ್ಲಿ ಮೋಹಿತ್ ಉಲ್ವಾ ಅಹ್ಮದ್ ಹುಸೇನ್ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆಯುವ ಮೂಲಕ ಜಯ ಸಾಧಿಸಿದರು.

ಭಾರತವು ಪಾಕಿಸ್ತಾನವನ್ನು ಒಂದು ವಿಕೆಟ್‌ನಿಂದ ಸೋಲಿಸಿ ACC ಪುರುಷರ 19 ವರ್ಷದೊಳಗಿನವರ ಏಷ್ಯಾಕಪ್ 2026 ಅನ್ನು ಗೆದ್ದುಕೊಂಡಿತು. ನವೆಂಬರ್ 14 ಅಲ್ ಅಮೇರತ್‌ನ ಅಲ್ ಅಮೇರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲಲು 338 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಬೃಹತ್ ಗುರಿಯನ್ನು ಭಾರತ ಪಂದ್ಯದ ಕೊನೆಯ ಎಸೆತದಲ್ಲಿ ಸಾಧಿಸಿತ್ತು. ಮೋಹಿತ್ ಉಲ್ವಾ ಅಹ್ಮದ್ ಹುಸೇನ್ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆಯುವ ಮೂಲಕ ಜಯ ಸಾಧಿಸಿದರು.

ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದ ನಂತರ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಗೆಲುವಿಗೆ ಪ್ರತಿಕ್ರಿಯಿಸಿದರು. ಮೀರತ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನವನ್ನು ಟೀಕಿಸಿದ್ದು ಯುವ ಭಾರತೀಯ ಆಟಗಾರರನ್ನು ಅಭಿನಂದಿಸಿದರು. ಭಾರತ ಪಾಕಿಸ್ತಾನವನ್ನು ಸೋಲಿಸಿದೆ. ನಮ್ಮ ಮಕ್ಕಳು ಅಂಡರ್-19 ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರು. ಅವರಿಗೆ ಅಭಿನಂದನೆಗಳು. ನೀವು ನಮ್ಮ ಮಕ್ಕಳನ್ನು ಸೋಲಿಸೋಕೆ ಆಗಿಲ್ಲ, ಇನ್ನು ವಯಸ್ಕರ ಬಗ್ಗೆ? ಇಲ್ಲ, ಇಲ್ಲ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಓವೈಸಿ ಹೇಳಿಕೆಗೆ ರ್ಯಾಲಿಯಲ್ಲಿ ಹಾಜರಿದ್ದವರು ಚಪ್ಪಾಳೆ ತಟ್ಟಿದರು. ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗುತ್ತಿದೆ. ರ್ಯಾಲಿಯ ಸಮಯದಲ್ಲಿ, ಓವೈಸಿ ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದರು.

ಫೈನಲ್‌ನಲ್ಲಿ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 252 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಲ್ಲಿಂದ ಮನಾಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ಒಂಬತ್ತನೇ ವಿಕೆಟ್‌ಗೆ 57 ರನ್ ಸೇರಿಸಿ ಭಾರತವನ್ನು ಮತ್ತೆ ಪಂದ್ಯಕ್ಕೆ ಕರೆತಂದರು. ಮನಾಲ್ 47 ರನ್ ಗಳಿಸಿದರೆ, ಮೋಹಿತ್ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಎಸೆತದಲ್ಲಿ ಗೆಲ್ಲಲು ಮೂರು ರನ್‌ಗಳ ಅಗತ್ಯವಿದ್ದಾಗ, ಮೋಹಿತ್ ಉಲ್ವಾ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಒಂಬತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಚಾಂಪಿಯನ್‌ಗಳನ್ನಾಗಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕುಲ್ಗಾಮ್ ಎನ್‌ಕೌಂಟರ್: ಒಬ್ಬ ಉಗ್ರ ಹತ, ಮತ್ತೊಬ್ಬ ಟ್ರ್ಯಾಪ್; CRPF ಯೋಧರ ಮೇಲಿನ ದಾಳಿಗೆ ಭಾರತೀಯ ಸೇನೆ ಪ್ರತೀಕಾರ

ಚಹಾಲ್ ಮಾಜಿ ಪತ್ನಿ ಹೊಸ ಇನ್ನಿಂಗ್ಸ್ ಆರಂಭ; ಸಿನಿಮಾ ಕ್ಷೇತ್ರಕ್ಕೆ ಧನಶ್ರೀ ವರ್ಮಾ ಪಾದಾರ್ಪಣೆ!

'ಯಶ್ ಅಲ್ಲ.. ರಣಬೀರ್ ಅಂತೂ ಅಲ್ವೇ ಅಲ್ಲ': Ramayana ಚಿತ್ರದ ಈ ಪಾತ್ರಕ್ಕೆ ಥಾಯ್ಲೆಂಡ್‌ ಮಂದಿ ಫಿದಾ, ಕುನಾಲ್ ಕಪೂರ್‌ಗೆ ಭಾರೀ ಬೇಡಿಕೆ!

ಹಾಸನ: ಎರಡು ದಿನಗಳಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಬಲಿ; ಅರಣ್ಯ ಇಲಾಖೆ ವಿರುದ್ಧ ಆಕ್ರೋಶ!

'ವಿಪಕ್ಷ ನಾಯಕರಿಗೂ ಮುನ್ನ ಕೇಂದ್ರ ಸರ್ಕಾರ Pegasus ಬಳಸಿ BJP ನಾಯಕರ ಫೋನ್ ಗಳನ್ನೇ ಕದ್ದಾಲಿಸಿತ್ತು': ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ