ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಸಂಭಾಷಣೆ 
ಕ್ರಿಕೆಟ್

ಇಷ್ಟೊಂದು ಗರ್ವ..! ಕೊಹ್ಲಿ ಮಾತಿಗೂ ಬೆಲೆ ಕೊಡಲಿಲ್ವಾ ಶ್ರೇಯಸ್ ಅಯ್ಯರ್? Video ವೈರಲ್, ಅಭಿಮಾನಿಗಳ ಆಕ್ರೋಶ

ನ್ಯೂಜಿಲೆಂಡ್ ವಿರುದ್ಧದ 5ನೇ ಪಂದ್ಯದಲ್ಲಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಶ್ರೇಯಸ್ ಅಯ್ಯರ್ ನಡೆದುಕೊಂಡ ರೀತಿ ಅಭಿಮಾನಿಗಳಲ್ಲಿನ ಅಸಮಾಧಾನಕ್ಕೆ ಕಾರಣವಾಗಿದೆ.

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಹಾಗೂ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ ಎನ್ನಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ 5ನೇ ಪಂದ್ಯದಲ್ಲಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಶ್ರೇಯಸ್ ಅಯ್ಯರ್ ನಡೆದುಕೊಂಡ ರೀತಿ ಅಭಿಮಾನಿಗಳಲ್ಲಿನ ಅಸಮಾಧಾನಕ್ಕೆ ಕಾರಣವಾಗಿದೆ.

ಶ್ರೇಯಸ್ ಅಯ್ಯರ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಿನ ಸಣ್ಣ ಸಂಭಾಷಣೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೊಹ್ಲಿ ಏನೋ ಹೇಳಲು ಬಂದಾಗ ಅಯ್ಯರ್ ಹೆಚ್ಚು ಗಮನ ನೀಡದೆ ಅಲ್ಲಿಂದ ತೆರಳಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದ್ದು, ಅಭಿಮಾನಿಗಳು ಅಯ್ಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮಾತನ್ನೇ ನಿರ್ಲಕ್ಷಿಸಿದ್ರಾ ಅಯ್ಯರ್?

ಭಾರತ ನೀಡಿದ್ದ 209 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿತ್ತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಬದಲಾವಣೆ ಕುರಿತು ಅಯ್ಯರ್ ಗೆ ಸಲಹೆ ನೀಡಲು ಮುಂದಾದರು. ಆಗಲೇ ಅಯ್ಯರ್ ಕೊಹ್ಲಿ ಮಾತನ್ನು ನಿರ್ಲಕ್ಷಿಸಿದರು ಎನ್ನಲಾಗಿದೆ.

ಆಗಿದ್ದೇನು?

ಪಂದ್ಯದ ಓವರ್‌ಗಳ ನಡುವಿನ ವಿರಾಮದಲ್ಲಿ ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ವಿರಾಟ್ ಕೊಹ್ಲಿ, ಅಯ್ಯರ್ ಜೊತೆ ಮಾತನಾಡಲು ಮುಂದಾಗಿದ್ದಾರೆ.

ಆದರೆ, ಕೊಹ್ಲಿ ಜೊತೆಗಿನ ಸಂಭಾಷಣೆ ಹೆಚ್ಚು ಹೊತ್ತು ಮುಂದುವರಿಯಲಿಲ್ಲ. ಅಯ್ಯರ್ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ತೆರಳಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕೊಹ್ಲಿ ಹೇಳುತ್ತಿದ್ದ ಮಾತಿಗೆ ಅಯ್ಯರ್ ಸರಿಯಾಗಿ ಗಮನ ನೀಡಲಿಲ್ಲ ಎಂದು ಕೆಲವರು ಟೀಕಿಸಿದ್ದಾರೆ.

ಅನುಭವದಲ್ಲಿ ಹಿರಿಯರಾಗಿರುವ ಕೊಹ್ಲಿ ಮಾತನಾಡುವಾಗ ಸ್ವಲ್ಪ ಸಮಯ ನಿಂತು ಅವರ ಮಾತು ಕೇಳಬಹುದಿತ್ತು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಭಿಮಾನಿಗಳ ಆಕ್ರೋಶ

'ಶ್ರೇಯಸ್ ಅಯ್ಯರ್‌ಗೆ ಯಾವ ವಿಚಾರದ ಗರ್ವ?' ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಕೊಹ್ಲಿ ತಂಡದ ಹಿರಿಯ ಮತ್ತು ಸ್ಟಾರ್ ಆಟಗಾರ. ಈಗಾಗಲೇ ಟೆಸ್ಟ್ ಮತ್ತು ಟಿ20 ಮಾದರಿಯಿಂದ ಅವರು ದೂರಉಳಿದಿದ್ದು, ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಅವರ ಅನುಭವವನ್ನು ಆದಷ್ಟು ತಂಡ ಬಳಸಿಕೊಳ್ಳಬೇಕು. ಆದರೆ ನಾಯಕ ಅಯ್ಯರ್ ಅವರ ಇಂತಹ ವರ್ತನೆ ಸರಿಯಲ್ಲ ಎಂದು ಮತ್ತೆ ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ.

ಆದರೆ, ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರ ನಡುವಿನ ಸಂಭಾಷಣೆಯ ಕೆಲವೇ ಕ್ಷಣಗಳು ಸೆರೆಯಾಗಿವೆ. ಕೊಹ್ಲಿ ಏನು ಮಾತನಾಡುತ್ತಿದ್ದರು ಅಥವಾ ಅದಕ್ಕೂ ಮೊದಲು ಮತ್ತು ನಂತರ ಅವರ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ, ಅಯ್ಯರ್ ಉದ್ದೇಶಪೂರ್ವಕವಾಗಿ ಕೊಹ್ಲಿ ಮಾತನ್ನು ನಿರ್ಲಕ್ಷಿಸಿದ್ದಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 22 ರನ್‌ಗಳ ಜಯ

ಇನ್ನು ಇದೇ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 22 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 209 ರನ್‌ಗಳಿಗೆ ಆಲೌಟ್ ಆಯಿತು.

ಹೀಗಾಗಿ ಅಲ್ಪ ಮೊತ್ತವನ್ನು ರಕ್ಷಿಸಿಕೊಳ್ಳುವ ಸವಾಲು ಭಾರತೀಯ ಬೌಲರ್‌ಗಳ ಮುಂದಿತ್ತು. ಆದರೆ, ಒತ್ತಡದ ನಡುವೆಯೂ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದ ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ತಂಡವನ್ನು 187 ರನ್‌ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಭಾರತ 22 ರನ್‌ಗಳ ಜಯ ದಾಖಲಿಸಿ ಸರಣಿಯನ್ನು ಗೆದ್ದುಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫಿಲಿಪ್ಪೀನ್ಸ್ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ; ಭಾರತದ ಆಕ್ಟ್ ಈಸ್ಟ್ ನೀತಿಯಲ್ಲಿ ASEAN ಪಾತ್ರಕ್ಕೆ ಒತ್ತು

2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕುರಿತು ಖರ್ಗೆ ನೇತೃತ್ವದಲ್ಲಿ ಇಂದು ಮಹತ್ವದ ಸಭೆ; ರಾಹುಲ್,ಪ್ರಿಯಾಂಕಾ ಭಾಗಿ!

ಬೆಂಗಳೂರು ನಿವಾಸಿಗಳ ಸಮಗ್ರ ದತ್ತಾಂಶ ನಿರ್ವಹಿಸಿ: ಪೊಲೀಸರಿಗೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಕರ್ನಾಟಕದಲ್ಲಿ ರಸ್ತೆ ಅಪಘಾತಗಳಿಂದ ಪ್ರತಿ ವರ್ಷ 11 ಸಾವಿರ ಮಂದಿ ದುರ್ಮರಣ!

ಮೇಕೆದಾಟು ಯೋಜನೆ: ಸಿಎಂ ಡಿಕೆ ಶಿವಕುಮಾರ್ ನಿಲುವಿಗೆ ತಮಿಳುನಾಡು ರೈತ ಸಂಘಟನೆಗಳ ಖಂಡನೆ! ಅನುಮತಿ ನೀಡದಂತೆ ಪ್ರಧಾನಿಗೆ ಒತ್ತಾಯ