ಸಂಸದೆ ಪ್ರಿಯಾ ಜತೆ ರಿಂಕು ಸಿಂಗ್ ಮದುವೆ: ಪ್ರಧಾನಿ ಮೋದಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ ಕ್ರಿಕೆಟರ್! 
ಕ್ರಿಕೆಟ್

ಸಂಸದೆ ಪ್ರಿಯಾ ಜತೆ ರಿಂಕು ಸಿಂಗ್ ಮದುವೆ: ಪ್ರಧಾನಿ ಮೋದಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ ಕ್ರಿಕೆಟರ್!

ಭಾನುವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ರಿಂಕು ಸಿಂಗ್ ಅವರು, ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ನವದೆಹಲಿ: ಟೀಂ ಇಂಡಿಯಾದ ಪ್ರಮುಖ ಆಟಗಾರ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ಡಿಸೆಂಬರ್ 4 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಮದುವೆಗೆ ಆಹ್ವಾನಿಸಿದ್ದಾರೆ.

ಭಾನುವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ರಿಂಕು ಸಿಂಗ್ ಅವರು, ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಭೇಟಿ ಮಾಡಿದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ರಿಂಕು ಸಿಂಗ್, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನನ್ನ ಕುಟುಂಬದೊಂದಿಗೆ ಭೇಟಿಯಾಗಿ ನನ್ನ ಮದುವೆಗೆ ಆಹ್ವಾನಿಸಿ, ಆಶೀರ್ವಾದ ಪಡೆದಿದ್ದು ಹೆಮ್ಮೆ ಅನಿಸುತ್ತಿದೆ. ನಮಗೆ ನಿಜಕ್ಕೂ ಇದು ವಿಶೇಷ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ 4ರಂದು ಪ್ರಿಯಾ-ರಿಂಕು ಮದುವೆ

ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್-ರಿಂಕು ಸಿಂಗ್ ಅವರ ಮದುವೆ ಮುಂದಿನ ತಿಂಗಳು 4ರಂದು ಲಖನೌದ ರಾಮದಾ ಹೋಟೆಲ್‌ನಲ್ಲಿ ನಡೆಯಲಿದೆ. ಎರಡೂ ಕುಟುಂಬಗಳು ಅದ್ಧೂರಿ ಮದುವೆಗೆ ಭರ್ಜರಿ ಸಿದ್ಧತೆ ನಡೆಸುತ್ತಿವೆ. ಕ್ರಿಕೆಟ್ ಮತ್ತು ರಾಜಕೀಯ ಜಗತ್ತಿನ ಹಲವಾರು ಪ್ರಮುಖ ವ್ಯಕ್ತಿಗಳು ವಿವಾಹಕ್ಕೆ ಹಾಜರಾಗುವ ನಿರೀಕ್ಷೆಯಿದೆ.

2025 ಜೂನ್ 8ರಂದು ಲಖನೌದ ದಿ ಸೆಂಟ್ರಮ್ ಹೋಟೆಲ್‌ನಲ್ಲಿ ರಿಂಕು ಮತ್ತು ಪ್ರಿಯಾ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಸುಮಾರು ಒಂದೂವರೆ ವರ್ಷಗಳ ಬಳಿಕ ಈ ವಿವಾಹ ನಡೆಯುತ್ತಿದೆ. ರಿಂಕು ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪ್ರಮುಖ ಸದಸ್ಯರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರೆ, ಪ್ರಿಯಾ ಸಮಾಜವಾದಿ ಪಕ್ಷದ ಸಂಸದೆಯಾಗಿ ಲೋಕಸಭೆಯಲ್ಲಿ ಮಚ್ಲಿಶಹರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'Belonging - A Journey of Love' ಬಿಡುಗಡೆ: ಆತ್ಮಚರಿತ್ರೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ; Video

'SIRಗೆ ಆದೇಶ ನೀಡಿದ್ದು ಯಾರು?': ಚುನಾವಣಾ ಆಯೋಗದ ವಿರುದ್ಧ 48 ಪ್ರಶ್ನೆಗಳ ಅಸ್ತ್ರ; ಸುಪ್ರೀಂ ಅನುಮತಿ ಕೋರಿದ INDIA!

ನಿಮ್ಮ ವಿಚ್ಛೇದನ ಯಾವಾಗ?: ಶ್ರುತಿ ಹಾಸನ್ ನೇರ ಪ್ರಶ್ನೆಗೆ ಆವಕ್ಕಾದ ಹಿರಿಯ ನಟಿ ಸುಹಾಸಿನಿ, Video!

ವಿಜಯಲಕ್ಷ್ಮಿ ಜತೆ ಜಟಾಪಟಿ: ನಟ ಧನ್ವೀರ್​​ಗೆ ಬಿಗ್ ರಿಲೀಫ್; ಮೂರು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ತಡೆ!

ಹೊಸ ಟ್ರಾಫಿಕ್ ರೂಲ್ಸ್: ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬ್ಯಾನ್; ಫುಟ್‌ಪಾತ್‌ ಮೇಲೆ ಬೈಕ್ ಓಡಿಸಿದರೆ ₹5,000 ದಂಡ, Ola, Uberಗೂ ಕಡಿವಾಣ!