ಬಾಬಾ ಬೈದ್ಯನಾಥ ದೇವಾಲಯದಲ್ಲಿ ಹಣ ಹಂಚಿದ ಇಶಾನ್ ಕಿಶನ್; ಮುಗಿಬಿದ್ದ ಭಕ್ತರು! Video ವೈರಲ್
ಇಶಾನ್ ಕಿಶನ್ ಜಾರ್ಖಂಡ್ನ ದೇವಘರ್ನಲ್ಲಿರುವ ಪ್ರಸಿದ್ಧ ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ತಮ್ಮ ಕುಟುಂಬದೊಂದಿಗೆ ಪೂಜೆ ಸಲ್ಲಿಸಲು ಬಂದಾಗ ಈ ಘಟನೆ ನಡೆದಿದೆ.
ಜಾರ್ಖಂಡ್: ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಇತ್ತೀಚಿಗೆ ಬಾಬಾ ಬೈದ್ಯನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಅನಿರೀಕ್ಷಿತ ಸನ್ನಿವೇಶವೊಂದು ಉಂಟಾಗಿದೆ. ಅವರು ಅರ್ಚಕರಿಗೆ ಹಣ ನೀಡಲು ಮುಂದಾಗುತ್ತಿದ್ದಂತೆಯೇ ಅವರ ಸುತ್ತಲೂ ನೆರೆದಿದ್ದ ಭಕ್ತರು ಕೂಡಾ ಹಣ ಪಡೆಯಲು ಮುಗಿಬಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು. ಇಶಾನ್ ಕಿಶನ್ ಜಾರ್ಖಂಡ್ನ ದೇವಘರ್ನಲ್ಲಿರುವ ಪ್ರಸಿದ್ಧ ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ತಮ್ಮ ಕುಟುಂಬದೊಂದಿಗೆ ಪೂಜೆ ಸಲ್ಲಿಸಲು ಬಂದಾಗ ಈ ಘಟನೆ ನಡೆದಿದೆ. ಪೂಜೆ ಸಲ್ಲಿಸಿದ ಇಶಾನ್ ಕಿಶನ್ ದೇವಾಲಯದ ಕಾಣಿಕೆ ಪೆಟ್ಟಿಗೆಗೆ ಹಣ ಹಾಕಿದ್ದಾರೆ.
ಬಳಿಕ ಅರ್ಚಕರಿಗೆ ಹಣ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರ ಹಣ ಹಂಚುವುದನ್ನು ಮುಂದುವರಿಸಿದಂತೆ ಅಲ್ಲಿದ್ದ ಕೆಲ ಭಕ್ತರು ಹಣ ಪಡೆಯಲು ಮುಗಿಬಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಾಬಾ ಬೈದ್ಯನಾಥ ದೇವಸ್ಥಾನದೊಂದಿಗೆ ಇಶಾನ್ ಕಿಶನ್ ಅವರಿಗೆ ಆಳವಾದ ಆಧ್ಯಾತ್ಮಿಕ ನಂಟಿದ್ದು, ಈ ಹಿಂದೆಯೂ ಹಲವು ಬಾರಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಸದ್ಯ ದೇವಸ್ಥಾನದಲ್ಲಿ ಕಿಶನ್ ಹಣ ಹಂಚುತ್ತಿರುವ ಮತ್ತು ಅವರ ಸುತ್ತ ಜನಸಾಗರ ಸೇರಿರುವ ವಿಡಿಯೋ ಆನ್ಲೈನ್ನಲ್ಲಿ ಗಮನ ಸೆಳೆದಿದ್ದು, ಅಭಿಮಾನಿಗಳು ಕ್ರಿಕೆಟಿಗನ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.