ವೈಭವ್​ ಸೂರ್ಯವಂಶಿ - ಆಕಾಶ್ ಚೋಪ್ರಾ 
ಕ್ರಿಕೆಟ್

ಮೊದಲು ವೈಭವ್​ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ; ಇದು ಆಘಾತಕಾರಿ, ಆದ್ರೆ..: ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ!

ವೈಭವ್​ ಸೂರ್ಯವಂಶಿ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿರುವ ಆಕಾಶ್ ಚೋಪ್ರಾ ಅವರು, ಮೊದಲು ಆ ಹುಡುಗನನ್ನು ತಂಡದಿಂದಲೇ ಕಿತ್ತುಬಿಸಾಡಿ. ಆದರೆ ಇದು ಆಘಾತಕಾರಿ. ಆದರೆ ಬೇರೆ ದಾರಿ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿರುವ ವಂಡರ್‌ಕಿಡ್, ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿಯನ್ನು ಮೊದಲು ಟೀಂ ಇಂಡಿಯಾದಿಂದ ಕೈಬಿಡಿ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ವೈಭವ್​ ಸೂರ್ಯವಂಶಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್​ ವಿರುದ್ಧದ ಟಿ20 ಸರಣಿಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ​ ವೈಭವ್ ಸೂರ್ಯವಂಶಿಗೆ ಸಿಗದಿರುವುದು ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾರನ್ನು ಕೆರಳಿಸಿದೆ.

ವೈಭವ್​ ಸೂರ್ಯವಂಶಿ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿರುವ ಆಕಾಶ್ ಚೋಪ್ರಾ ಅವರು, ಮೊದಲು ಆ ಹುಡುಗನನ್ನು ತಂಡದಿಂದಲೇ ಕಿತ್ತುಬಿಸಾಡಿ. ಆದರೆ ಇದು ಆಘಾತಕಾರಿ. ಆದರೆ ಬೇರೆ ದಾರಿ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಒಂದೇ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. ವೈಭವ್​ಗೆ ಪ್ಲೇಯಿಂಗ್​ ಎಲೆವನ್​ನಲ್ಲಿ ಸ್ಥಾನ ಸಿಗಬೇಕಾದರೆ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರು ಹೊರಗುಳಿಯಬೇಕು. ಆದರೆ, ಈ ಮೂವರು ಆಟಗಾರರೂ ಕಳೆದ ಪಂದ್ಯಗಳಲ್ಲಿ ಉತ್ತಮ ಫಾರ್ಮ್​ನಲ್ಲಿ ಇರುವುದರಿಂದ ಸೂರ್ಯವಂಶಿಗೆ ಸ್ಥಾನ ಬಹುತೇಕ ಅನುಮಾನ ಎಂದು ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಚೋಪ್ರಾ ಹೇಳಿದ್ದಾರೆ.

ಆರಂಭಿಕರಾದ ಸಂಜು, ಅಭಿಷೇಕ್​ ಮತ್ತು ಇಶಾನ್ ಕಿಶನ್​ರನ್ನು​ ತಂಡದಿಂದ ಹೊರಗಿಡುವುದು ಅಷ್ಟು ಸುಲಭವಿಲ್ಲ. ಹೀಗಾಗಿ 'ರೊಟೇಷನ್ ಸಿಸ್ಟಮ್' ಮೂಲಕ ಈ ವೈಭವ್ ಸೂರ್ಯವಂಶಿಗೆ ಅವಕಾಶ ಕಲ್ಪಿಸಬಹುದು. ಆದರೆ, ಅದು ಮ್ಯಾನೇಜ್​ಮೆಂಟ್​ಗೆ ಬಿಟ್ಟದ್ದು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟೈಗರ್ ಶ್ರಾಫ್‌ ಮೇಲೆ ಶೂಟ್ ಔಟ್ ಕೇಸ್: ಮೂವರು ಆರೋಪಿಗಳಲ್ಲಿ ಯಾರೊಬ್ಬರೂ ಅಪ್ರಾಪ್ತರಲ್ಲ- ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷ್ಟನೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಉಗ್ರರಿಂದ ಮೂವರ ಹತ್ಯೆ; ಭುಗಿಲೆದ್ದ ಆಕ್ರೋಶ, ಸಿಎಂ ನಿವಾಸದ ಹೊರಗೆ ಪ್ರತಿಭಟನೆ!

'ರಾಹುಲ್ ಗಾಂಧಿ ನನ್ನ ಪರ್ಸ್, ಮೊಬೈಲ್ ಕದ್ದಿದ್ದಾರೆ': ಅಮೆರಿಕನ್ ಕಾರ್ಯಕರ್ತೆ ರೆನೀ ಲಿನ್ ವ್ಯಂಗ್ಯಾತ್ಮಕ ಹೇಳಿಕೆ; Video

ಹಾಡುವುದಷ್ಟೇ ಅಲ್ಲ, ನಾನೂ ಅತ್ಯುತ್ತಮವಾಗಿ ನಟಿಸಬಲ್ಲೆ: ಮಹಾ CM ಪತ್ನಿ ಅಮೃತಾ ಫಡ್ನವೀಸ್

Scrap ಮಾರಾಟ: ಭಾರತ ಸರ್ಕಾರಕ್ಕೆ 500 ಕೋಟಿ ರೂ ಗಳಿಕೆ!