ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ BCCI ಆಸ್ತಿ ಎಷ್ಟು ಕೋಟಿ? ಆಸ್ಟ್ರೇಲಿಯಾ, ಪಾಕ್ ಬೋರ್ಡ್ ಗಳ ಸಂಪತ್ತಿಗಿಂತ 11 ಪಟ್ಟು ಹೆಚ್ಚಳ!

'ಬಿಸಿನೆಸ್ ಸ್ಟ್ಯಾಂಡರ್ಡ್' ವರದಿ ಮಾಡಿರುವ ಅಂಕಿಅಂಶಗಳ ಪ್ರಕಾರ, ಬಿಸಿಸಿಐನ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು 2.2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ (BCCI) ಸಾಕಷ್ಟು ಸಂಪತ್ತು ಹೊಂದಿದ್ದು, ಅದನ್ನು ಹಿಂದಿಕ್ಕುವುದು ವಿಶ್ವದ ಇತರ ಕ್ರಿಕೆಟ್ ಮಂಡಳಿಗಳಿಗೆ ಬಹುತೇಕ ಅಸಾಧ್ಯವಾಗಿದೆ.

'ಬಿಸಿನೆಸ್ ಸ್ಟ್ಯಾಂಡರ್ಡ್' ವರದಿ ಮಾಡಿರುವ ಅಂಕಿಅಂಶಗಳ ಪ್ರಕಾರ, ಬಿಸಿಸಿಐನ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು 2.2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ನಂಬರ್ ಒನ್ ಪಟ್ಟಿಯಲ್ಲಿದ್ದು, ತದನಂತರದ ಸ್ಥಾನದಲ್ಲಿರುವ ಮೂರು ಕ್ರಿಕೆಟ್ ಮಂಡಳಿಗಳ ಸಂಪತ್ತಿನ ಒಟ್ಟು ಮೌಲ್ಯಕ್ಕಿಂತ 11 ಪಟ್ಟು ಹೆಚ್ಚು ಸಂಪತ್ತು ಹೊಂದಿದೆ.

'ಕ್ರಿಕೆಟ್ ಆಸ್ಟ್ರೇಲಿಯಾ'ದ ನಿವ್ವಳ ಆಸ್ತಿ ಮೌಲ್ಯವು ಸುಮಾರು 79 ಮಿಲಿಯನ್ ಅಮೆರಿಕನ್ ಡಾಲರ್ ಇದ್ದರೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 59 ಮಿಲಿಯನ್ ಡಾಲರ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) 55 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿವೆ. ಈ ಮೂರು ಮಂಡಳಿಗಳ ಒಟ್ಟು ಮೌಲ್ಯ 193 ಮಿಲಿಯನ್ ಡಾಲರ್ ಆಗಿದ್ದು, BCCI ಮತ್ತು ಇವುಗಳ ನಡುವೆ 2 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಅಂತರವಿದೆ.

ಈ ಅಂಕಿಅಂಶಗಳು ಭಾರತೀಯ ಕ್ರಿಕೆಟ್‌ನ ಅಸಾಧಾರಣ ಸಂಪತ್ತಿನ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ. ಇತರ ಕ್ರಿಕೆಟ್ ಮಂಡಳಿಗಳು ಅಂತಾರಾಷ್ಟ್ರೀಯ ಪಂದ್ಯಗಳು, ಪ್ರಸಾರ ಒಪ್ಪಂದಗಳು, ಪ್ರಾಯೋಜಕತ್ವಗಳು ಮತ್ತು ದೇಶೀಯ ಟೂರ್ನಿಗಳ ಮೇಲೆ ಅವಲಂಬಿತವಾಗಿವೆ. ಆದರೆ, BCCI ಕಾರ್ಯನಿರ್ವಹಿಸುವ ಮಾರುಕಟ್ಟೆಯಲ್ಲಿನ ಬೃಹತ್ ಪ್ರೇಕ್ಷಕವರ್ಗವು, ಅದರ ವಾಣಿಜ್ಯ ಆಸ್ತಿಗಳಿಗೆ (commercial properties) ದೊಡ್ಡ ಅನುಕೂಲವನ್ನು ಒದಗಿಸುತ್ತದೆ.

ವಿಶ್ವದ ಅತ್ಯಂತ ಶ್ರೀಮಂತ 10 ಕ್ರಿಕೆಟ್ ಮಂಡಳಿಗಳು: 'ಬಿಸಿನೆಸ್ ಸ್ಟ್ಯಾಂಡರ್ಡ್' ವರದಿ ಮಾಡಿದ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 5, 2026 ರ ಹೊತ್ತಿಗೆ ವಿಶ್ವದ ಅತ್ಯಂತ ಶ್ರೀಮಂತ 10 ಕ್ರಿಕೆಟ್ ಮಂಡಳಿಗಳ ನಿವ್ವಳ ಮೌಲ್ಯವನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

ಕ್ರಿಕೆಟ್ ಮಂಡಳಿಗಳು: ನಿವ್ವಳ ಆಸ್ತಿ ಮೌಲ್ಯ

BCCI (ಭಾರತ) : 2.2 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 18,760 ಕೋಟಿ ರೂ): ಇದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದು, ಇದರ ಆದಾಯದ ಪ್ರಮುಖ ಮೂಲ 'ಇಂಡಿಯನ್ ಪ್ರೀಮಿಯರ್ ಲೀಗ್' (IPL) ಆಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ: 79 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 674 ಕೋಟಿ ರೂ) ಇದು ಅಂತರರಾಷ್ಟ್ರೀಯ ಕ್ರಿಕೆಟ್, ಪ್ರಸಾರ ಪಾಲುದಾರಿಕೆಗಳು ಮತ್ತು 'ಬಿಗ್ ಬ್ಯಾಷ್ ಲೀಗ್' (Big Bash League) ಮೂಲಕ ಆದಾಯವನ್ನು ಪಡೆಯುತ್ತದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB): 59 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 503 ಕೋಟಿ ರೂ): ಇದು ಇಂಗ್ಲೆಂಡ್‌ನ ಅಂತರರಾಷ್ಟ್ರೀಯ ತಂಡಗಳು, ದೇಶೀಯ ಟೂರ್ನಿಗಳು ಮತ್ತು 'ದಿ ಹಂಡ್ರೆಡ್' (The Hundred) ಪಂದ್ಯಾವಳಿಯ ಮೂಲಕ ವಾಣಿಜ್ಯ ಮೌಲ್ಯವನ್ನು ಗಳಿಸುತ್ತದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ: 55 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 469 ಕೋಟಿ ರೂ) ಪಾಕಿಸ್ತಾನ ಸೂಪರ್ ಲೀಗ್ (PSL) ಇದರ ಪ್ರಮುಖ ಆದಾಯದ ಮೂಲವಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ: 51 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 435 ಕೋಟಿ ರೂ) ಪ್ರಸಾರ ಒಪ್ಪಂದಗಳು, ಪ್ರಾಯೋಜಕತ್ವಗಳು ಮತ್ತು ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಿಂದ ಆದಾಯವನ್ನು ಪಡೆಯುತ್ತದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) - 47 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 401 ಕೋಟಿ ರೂ) ಅಂತರರಾಷ್ಟ್ರೀಯ ಕ್ರಿಕೆಟ್, ವಾಣಿಜ್ಯ ಪಾಲುದಾರಿಕೆಗಳು ಮತ್ತು ದೇಶೀಯ ಪಂದ್ಯಾವಳಿಗಳ ಮೂಲಕ ಆದಾಯ ಗಳಿಸುತ್ತದೆ.

ಜಿಂಬಾಬ್ವೆ ಕ್ರಿಕೆಟ್ - 38 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 324 ಕೋಟಿ ರೂಪಾಯಿ): ವರದಿಯಾದ ಪಟ್ಟಿಯಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ಗಿಂತ ಮುಂದಿದ್ದು, ಏಳನೇ ಸ್ಥಾನದಲ್ಲಿದೆ.

ಶ್ರೀಲಂಕಾ ಕ್ರಿಕೆಟ್ (SLC) - 20 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 171 ಕೋಟಿ ರೂಪಾಯಿ): ಇದರ ವಾಣಿಜ್ಯ ಚಟುವಟಿಕೆಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಲಂಕಾ ಪ್ರೀಮಿಯರ್ ಲೀಗ್ ಸೇರಿವೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ - 15 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 128 ಕೋಟಿ ರೂಪಾಯಿ): ಕೆರಿಬಿಯನ್ ಪ್ರೀ“ಮಿಯರ್ ಲೀಗ್, ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಫ್ರಾಂಚೈಸಿ ಆಧಾರಿತ ವಾಣಿಜ್ಯ ಆದಾಯದ ಮೂಲವನ್ನು ಒದಗಿಸುತ್ತದೆ.

ನ್ಯೂಜಿಲೆಂಡ್ ಕ್ರಿಕೆಟ್ (NZC) - 9 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 77 ಕೋಟಿ ರೂ) ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರಸಾರ ಹಕ್ಕುಗಳನ್ನು ಆದಾಯದ ಮೂಲಗಳನ್ನಾಗಿ ಹೊಂದಿರುವ ನ್ಯೂಜಿಲೆಂಡ್ ಕ್ರಿಕೆಟ್, ಅಗ್ರ 10ರ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪುತ್ತೂರು ಟಿಕೆಟ್ ಪಡೆಯಲು ಬ್ಲ್ಯಾಕ್‌ಮೇಲ್‌ ಯತ್ನ; ಸಿದ್ದರಾಮಯ್ಯ ಸ್ಟಿಂಗ್ ನಲ್ಲಿ ಕಾಂಗ್ರೆಸ್ ನವರ ಕೈವಾಡ: ಯತೀಂದ್ರ ಹೊಸ ಬಾಂಬ್; Video

ಪಂಜಾಬ್‌ನಲ್ಲಿ ಮಾದಕವಸ್ತು ಸೇವಿಸುತ್ತಿರುವ ಬಾಲಕನ ವಿಡಿಯೋ ವೈರಲ್: ತೀವ್ರ ಆತಂಕ

ದೆಹಲಿ: SIR ವಿರುದ್ಧ ಇಸಿಐ ಪ್ರಧಾನ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ, ಹಲವಾರು ಪ್ರತಿಭಟನಾಕಾರರ ಬಂಧನ! Video

MLC ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪೈ ಕ್ಯಾಮರಾ ಬಳಕೆ- ಸುಪ್ರಿಯಾ ಸುಳೆ; ಹಾಗೆಂದರೇನು ನನಗೆ ಗೊತ್ತೇ ಇಲ್ಲ- ಫಡ್ನವಿಸ್

ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ದೂರು! ಕಾರಣವೇನು?