ಭಾರತ ತಂಡ 
ಕ್ರಿಕೆಟ್

India vs New Zealand: ಟೀಂ ಇಂಡಿಯಾಗೆ 4 ವಿಕೆಟ್​ಗಳ ರೋಚಕ ಗೆಲುವು; ಕಿವೀಸ್​ಗೆ ಸತತ 2ನೇ ಸೋಲು

ಇಂದು ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಲ್ಲಿರುವ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಕ್ರೈಸ್ಟ್‌ಚರ್ಚ್‌ (ನ್ಯೂಜಿಲೆಂಡ್‌): ನ್ಯೂಜಿಲೆಂಡ್‌ ವಿರುದ್ಧ ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಿಲಕ್ ವರ್ಮಾ(ಅಜೇಯ-51) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಾಲ್ಕು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದುಕೊಂಡಿದೆ.

ಇಂದು ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಲ್ಲಿರುವ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್‌ಗಳ ಉತ್ತಮ ಮೊತ್ತವನ್ನು ಸೇರಿಸಿತು.

ಗೆಲುವಿಗೆ 181 ರನ್ ಗಳ ಈ ಗುರಿ ಬೆನ್ನಟ್ಟಿದ ಭಾರತ ಕೊನೆಯ ಓವರ್​(19.5)ನಲ್ಲಿ ಆರು ವಿಕೆಟ್ ನಷ್ಟಕ್ಕೆ 181 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಭಾರತದ ಪರ ತಿಲಕ್‌ ವರ್ಮಾ 26 ಎಸೆತಗಳಲ್ಲಿ 51 ರನ್‌, ಅಭಿಷೇಕ್‌ ಶರ್ಮಾ 21 ಎಸೆತಗಳಲ್ಲಿ 27, ನಿತೀಶ್‌ ಕುಮಾರ್‌ ರೆಡ್ಡಿ 13 ಎಸೆತಗಳಲ್ಲಿ 26 ರನ್‌ಗಳ ಕೊಡುಗೆ ನೀಡಿದರು. ನಮನ್‌ ಧೀರ್‌ 17 ಎಸೆತಗಳಲ್ಲಿ 3 ಸಿಕ್ಸರ್‌, 1 ಬೌಂಡರಿ ಸಿಡಿಸಿ 31 ರನ್‌ ಕಲೆ ಹಾಕಿದರು.

ಇನ್ನು ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಮೊದಲ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಆದರೆ ಎರಡನೇ ಟಿ20 ಪಂದ್ಯದಲ್ಲಿ ವಿಕೆಟ್​ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದ ಭುವನೇಶ್ವರ್ ಕುಮಾರ್ ರನ್​ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಈ ವಿಕೆಟ್‌ನೊಂದಿಗೆ ಭುವನೇಶ್ವರ್ ಕುಮಾರ್ ಅವರ ಸುದೀರ್ಘ ಕಾಯುವಿಕೆ ಅಂತ್ಯಗೊಂಡಿತು. ಅವರು ಕೊನೆಯ ಬಾರಿಗೆ ಅಂತರರಾಷ್ಟ್ರೀಯ ವಿಕೆಟ್ ಪಡೆದಿದ್ದು, 2022ರ ನವೆಂಬರ್ 20ರಂದು ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಆಗಿತ್ತು. ಇದೀಗ ಭುವಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಾಡಿಗೆ ಡೀಸೆಲ್ ತುಂಬಿಸುವಾಗ ಜಿಲೆಟಿನ್ ಸ್ಫೋಟ: ದುರಂತದಲ್ಲಿ ಶಾಲಾ ಶಿಕ್ಷಕಿ ಸೇರಿ ಐವರ ದಾರುಣ ಸಾವು!

ಸ್ಟಿಂಗ್ ಪ್ರಕರಣದಲ್ಲಿ ನಾಪತ್ತೆಯಾದವರು HDK ಎಡಗೈ-ಬಲಗೈ ಬಂಟರೇ; ಇಂದಲ್ಲ, ನಾಳೆ ಸತ್ಯ ಆಚೆ ಬರುತ್ತೆ: ಪ್ರಿಯಾಂಕ್ ಖರ್ಗೆ

ದರ್ಶನ್ ಜೈಲಿಂದ ಹೊರಬರೋದು ಪತ್ನಿ ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಧನ್ವೀರ್ ಆಡಿಯೋ ಬೆನ್ನಲ್ಲೇ ಸ್ನೇಹಿತನ ಆಡಿಯೋ ವೈರಲ್!

ಸಿಜೆಪಿ ಪ್ರತಿಭಟನೆ: ಪೆಲೆಟ್ ಗನ್ ಬಳಕೆ ಕುರಿತು ಸಾಕ್ಷ್ಯಗಳ ಮಾಹಿತಿ ಕಲೆಹಾಕಲಿರುವ ಸುಪ್ರೀಂ ಕೋರ್ಟ್ ಉನ್ನತ ಸಮಿತಿ!

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣ: ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನ!