ಸ್ಮೃತಿ ಮಂಧಾನಾ Photo | X
ಕ್ರಿಕೆಟ್

'ನಿಮ್ಮ ದಾರಿಗೆ ನಾನು ಅಡ್ಡ ಬರಲ್ಲ, ನನ್ನ ದಾರಿಗೆ ನೀವು ಅಡ್ಡ ಬರಬೇಡಿ': ತಮ್ಮ ಜೀವನದ 'ಅತ್ಯಂತ ಕಠಿಣ ರಾತ್ರಿ' ಬಗ್ಗೆ ಸ್ಮೃತಿ ಮಂಧಾನಾ!

'ನಿಮ್ಮ ಜೀವನದ ಅತ್ಯಂತ ಕಠಿಣ ರಾತ್ರಿ ಯಾವುದು?' ಎಂದು ಕೇಳಿದಾಗ ಮಂಧಾನ ಅತ್ಯಂತ ಭಾವುಕರಾದಂತೆ ಕಂಡುಬಂದರು ಮತ್ತು ಉತ್ತರಿಸುವ ಮೊದಲು ಕೆಲಕಾಲ ಮೌನವಾಗಿದ್ದರು.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಸ್ಮೃತಿ ಮಂಧಾನಾ ಅವರು ಆಧುನಿಕ ಕ್ರಿಕೆಟ್ ಜಗತ್ತಿನ ನಿಜವಾದ ಐಕಾನ್ ಆಗಿದ್ದಾರೆ. ತಂಡದ ಪ್ರಮುಖ ಆಧಾರಸ್ತಂಭಗಳಲ್ಲಿ ಒಬ್ಬರಾಗಿರುವ ಮಂಧಾನಾ, ದೇಶಕ್ಕಾಗಿ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಪ್ರತಿಭೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವ ಮಂಧಾನಾ, ಸಾವಿರಾರು ಮಂದಿ ಕ್ರಿಕೆಟ್ ಅನ್ನು ವೃತ್ತಿಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳಲು ಸ್ಫೂರ್ತಿಯಾಗಿದ್ದಾರೆ. ಅವರ ಕ್ರಿಕೆಟ್ ವೃತ್ತಿಜೀವನ ಯಶಸ್ಸಿನತ್ತ ಸಾಗುತ್ತಿದ್ದರೂ, ಅವರ ವೈಯಕ್ತಿಕ ಜೀವನದಲ್ಲಿ ಮದುವೆ ರದ್ದಾಗುವಂತಹ ದೊಡ್ಡ ಹಿನ್ನಡೆಯೊಂದು ಸಂಭವಿಸಿತ್ತು. ರಾಜ್ ಶಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ, ತಮ್ಮ ಜೀವನದಲ್ಲಿ ಎದುರಿಸಿದ 'ಅತ್ಯಂತ ಕಠಿಣ ರಾತ್ರಿ'ಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಧಾನಾ, ಸ್ವಲ್ಪ ಸಮಯ ಮೌನವಾದರು, ತಾನು 'ಕೇವಲ ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಲಿದ್ದೇನೆ' ಎಂದು ಸ್ಪಷ್ಟಪಡಿಸಿದರು.

ತಮ್ಮ ವಿವಾಹ ರದ್ದಾದಾಗಿನಿಂದ, ಕಳೆದ ವರ್ಷ ತಾವು ಯಾರನ್ನು ಮದುವೆಯಾಗಬೇಕಿತ್ತೋ ಆ ಪಲಾಶ್ ಮುಚ್ಚಲ್ ಅವರ ಬಗ್ಗೆ ಮಂಧಾನಾ ಈವರೆಗೆ ಏನನ್ನೂ ಮಾತನಾಡಿಲ್ಲ. ಶಮಾನಿ ಅವರು 'ಅತ್ಯಂತ ಕಠಿಣ ರಾತ್ರಿ'ಯ ಬಗ್ಗೆ ಕೇಳಿದಾಗಲೂ ಮಂಧಾನ, ಕೇವಲ ತಮ್ಮ ಕ್ರಿಕೆಟ್ ಪಯಣದ ಬಗ್ಗೆ ಮಾತ್ರ ಮಾತನಾಡುವುದಾಗಿ ಹೇಳಿದರು.

'ನಿಮ್ಮ ಜೀವನದ ಅತ್ಯಂತ ಕಠಿಣ ರಾತ್ರಿ ಯಾವುದು?' ಎಂದು ಶಮಾನಿ ಕೇಳಿದರು. ಆಗ ಮಂಧಾನ ಅತ್ಯಂತ ಭಾವುಕರಾದಂತೆ ಕಂಡುಬಂದರು ಮತ್ತು ಉತ್ತರಿಸುವ ಮೊದಲು ಕೆಲಕಾಲ ಮೌನವಾಗಿದ್ದರು.

ಯಾವುದೇ ನಿರ್ದಿಷ್ಟ ಪಂದ್ಯಾವಳಿ ಅಥವಾ ಪಂದ್ಯವನ್ನು ಹೆಸರಿಸದೆ, ಅವರು 'ಬಹುಶಃ ಯಾವುದಾದರೂ ವಿಶ್ವಕಪ್' ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು. 'ನಾನು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದ ಅವರು, ಕೋವಿಡ್-19 ಅವಧಿಯು ಕೂಡ ತಮಗೆ ಸಾಕಷ್ಟು ಕಷ್ಟಕರವಾಗಿತ್ತು ಎಂದು ಅವರು ಹೇಳಿದರು.

ತಮ್ಮ ಸ್ವಭಾವದ ಕುರಿತು ಮಾತನಾಡುತ್ತಾ, ತಾವು ಮೇಲ್ನೋಟಕ್ಕೆ ಸಿಡುಕು ಸ್ವಭಾವದವರಂತೆ ಕಾಣಿಸದಿದ್ದರೂ, ತಮ್ಮಲ್ಲಿ ಸಾಕಷ್ಟು ಸಿಟ್ಟು ಅಡಗಿದೆ ಎಂದು ಹೇಳಿದರು. ತಾವು ಸೇಡು ತೀರಿಸಿಕೊಳ್ಳುವ ಸ್ವಭಾವದವರೇ ಎಂದು ಕೇಳಿದಾಗ, ಅಂತಹ ವಿಷಯಗಳಲ್ಲಿ ತಮಗೆ ನಂಬಿಕೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

'ನನ್ನ ಸ್ವಭಾವಕ್ಕೆ ಹೊಂದಿಕೆಯಾಗುವಂತಹವರು ಯಾರೂ ಇಲ್ಲ, ಆದರೆ ನನಗೆ ವಿಪರೀತ ಕೋಪ ಬರಬಹುದು. 'ನನ್ನೊಂದಿಗೆ ಗೋಜಿಗೆ ಹೋಗಬೇಡಿ' ಎಂಬ ಮನಸ್ಥಿತಿ ನನ್ನದು. 'ನಾನು ನಿಮ್ಮ ದಾರಿಗೆ ಅಡ್ಡ ಬರುವುದಿಲ್ಲ, ನೀವು ನನ್ನ ದಾರಿಗೆ ಅಡ್ಡ ಬರಬೇಡಿ' ಎಂಬುದು ನನ್ನ ನಿಲುವು. ನಾನು ಸೇಡು ತೀರಿಸಿಕೊಳ್ಳುವುದಿಲ್ಲ, ಆದರೆ ನಡೆದದ್ದನ್ನು ಮರೆಯುವುದೂ ಇಲ್ಲ. ಆದಾಗ್ಯೂ, ನಾನು ಯಾರಿಗೂ ಕೆಟ್ಟದ್ದನ್ನು ಮಾಡುವುದಿಲ್ಲ' ಎಂದರು.

ಜನರನ್ನು ಸುಲಭವಾಗಿ ಕ್ಷಮಿಸುತ್ತೀರಾ ಎಂದು ಕೇಳಿದಾಗ, 'ನಾನು ಕ್ಷಮಿಸುತ್ತೇನೆ, ಆದರೆ ಮರೆಯುವುದಿಲ್ಲ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS summit 2026: ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣ ವಿರುದ್ಧ ಪ್ರಧಾನಿ ವಿರುದ್ಧ ಮೋದಿ ಎಚ್ಚರಿಕೆ! Video

ಶೀಘ್ರದಲ್ಲೇ ಶಾಲೆಗಳ ಟೈಮ್ ಬದಲು? ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವೇಳಾಪಟ್ಟಿ ಬದಲಾವಣೆಗೆ ಸರ್ಕಾರದ ಚಿಂತನೆ

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು: 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಪ್ರಧಾನಿ ಮೋದಿ ಆಯೋಜಿಸಿದ್ದ BRICS ಗಾಲಾ ಡಿನ್ನರ್‌ಗೆ ಚೀನಾ ಅಧ್ಯಕ್ಷ Xi Jinping ಗೈರು: ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ..!