ಪಾಕಿಸ್ತಾನ ಕ್ರಿಕೆಟ್ ತಂಡ 
ಕ್ರಿಕೆಟ್

ಟೆಸ್ಟ್ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆ: ಭಾರಿ ದಂಡ ವಿಧಿಸಿದ ICC, WTC ಅಂಕ ಕಡಿತ!

ಪಾಕಿಸ್ತಾನ ಲೀಡ್ಸ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಒಂದು ಇನಿಂಗ್ಸ್ ಮತ್ತು 103 ರನ್‌ಗಳಿಂದ, ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 194 ರನ್‌ಗಳಿಂದ ಮತ್ತು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಸೋಲು ಕಂಡಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಲೋ ಓವರ್-ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನಕ್ಕೆ ಸೋಮವಾರ ದಂಡ ವಿಧಿಸಲಾಗಿದೆ. ಇದರೊಂದಿಗೆ, ತಂಡದ 'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್' ಅಂಕಪಟ್ಟಿಯಿಂದ 11 ಅಂಕಗಳನ್ನು ಕಡಿತಗೊಳಿಸಲಾಯಿತು. ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-3 ಅಂತರದಿಂದ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನವು, 'ನಿಗದಿತ ಸಮಯದ ವಿನಾಯಿತಿಗಳನ್ನು ಪರಿಗಣಿಸಿದ ನಂತರವೂ' ಗುರಿಗಿಂತ 11 ಓವರ್‌ಗಳಷ್ಟು ಹಿಂದೆ ಬಿದ್ದಿರುವುದು ಕಂಡುಬಂದಿದೆ ಎಂದು ಐಸಿಸಿ (ICC) ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಪಾಕಿಸ್ತಾನವು ಲೀಡ್ಸ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಒಂದು ಇನಿಂಗ್ಸ್ ಮತ್ತು 103 ರನ್‌ಗಳಿಂದ, ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 194 ರನ್‌ಗಳಿಂದ ಮತ್ತು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಸೋಲು ಕಂಡಿದೆ.

'ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದ ವೇಳೆ ನಿಧಾನಗತಿಯ ಓವರ್-ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನದ ಮೇಲೆ ಎರಡು ರೀತಿಯ ಕ್ರಮಗಳನ್ನು (ದಂಡ ಮತ್ತು ಅಂಕ ಕಡಿತ) ಕೈಗೊಳ್ಳಲಾಗಿದೆ' ಎಂದು ಐಸಿಸಿ ಹೇಳಿದೆ.

ಐಸಿಸಿ ಪಂದ್ಯದ ರೆಫರಿ ರಂಜನ್ ಮದುಗಲೆ, ಮೈದಾನದ ಅಂಪೈರ್‌ಗಳಾದ ಪಾಲ್ ರೈಫೆಲ್ ಮತ್ತು ಕ್ರಿಸ್ ಗಫಾನಿ, ಮೂರನೇ ಅಂಪೈರ್ ಅಲ್ಲಾಹುದೀನ್ ಪಾಲೇಕರ್ ಹಾಗೂ ನಾಲ್ಕನೇ ಅಂಪೈರ್ ರಸೆಲ್ ವಾರೆನ್ ಅವರು ಈ ನಿರ್ಬಂಧಗಳನ್ನು ವಿಧಿಸಿದ್ದಾರೆ.

'ಇದರ ಪರಿಣಾಮವಾಗಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯ ಪಾಕಿಸ್ತಾನದ ಸ್ಥಾನ ಮತ್ತಷ್ಟು ಕುಸಿದಿದೆ; ತಂಡವು ಈಗ ಶೇ 4.63 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ' ಎಂದು ಐಸಿಸಿ ತಿಳಿಸಿದೆ.

'ಕನಿಷ್ಠ ಓವರ್-ರೇಟ್ ಉಲ್ಲಂಘನೆಗಳಿಗೆ ಸಂಬಂಧಿಸಿದ ಐಸಿಸಿ ನೀಚಿ ಸಂಹಿತೆಯ (Code of Conduct) ವಿಧಿ 2.22ರ ಪ್ರಕಾರ, ನಿಗದಿತ ಸಮಯದಲ್ಲಿ ತಮ್ಮ ತಂಡವು ಬೌಲ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯದ ಶುಲ್ಕದ ಶೇ 5ರಷ್ಟು ದಂಡ ವಿಧಿಸಲಾಗುತ್ತದೆ; ಈ ದಂಡವು ಗರಿಷ್ಠವಾಗಿ ಪಂದ್ಯದ ಶುಲ್ಕದ ಶೇ 50 ರಷ್ಟಕ್ಕೆ ಸೀಮಿತವಾಗಿರುತ್ತದೆ. ಇದರ ಜೊತೆಗೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆಟದ ನಿಯಮಗಳ ವಿಧಿ 16.11.2 ರ ಪ್ರಕಾರ, ನಿಗದಿತ ಸಂಖ್ಯೆಗಿಂತ ಕಡಿಮೆ ಇರುವ ಪ್ರತಿ ಓವರ್‌ಗೆ ತಂಡವೊಂದಕ್ಕೆ ಒಂದು ಅಂಕದ ದಂಡ ವಿಧಿಸಲಾಗುತ್ತದೆ. ಪರಿಣಾಮವಾಗಿ, ಪಾಕಿಸ್ತಾನದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳಿಂದ 11 ಅಂಕಗಳನ್ನು ಕಡಿತಗೊಳಿಸಲಾಗಿದೆ' ಎಂದು ಐಸಿಸಿ ತಿಳಿಸಿದೆ.

WTC ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ (ಒಂಬತ್ತನೇ ಸ್ಥಾನ) ಪರದಾಡುತ್ತಿರುವ ಪಾಕಿಸ್ತಾನವು, ಇಲ್ಲಿಯವರೆಗೆ ಆಡಿರುವ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಮತ್ತು ಏಳು ಸೋಲುಗಳನ್ನು ಕಂಡಿದೆ.

ತನ್ನ ಮುಂದಿನ WTC ಸರಣಿಯ ಭಾಗವಾಗಿ, ಪಾಕಿಸ್ತಾನವು ನವೆಂಬರ್‌ನಲ್ಲಿ ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಯೋಜಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌದಿ ಅರೇಬಿಯಾದಲ್ಲಿ ಮುಂದುವರೆದ ಹೌತಿ ಉಗ್ರರ ಅಟ್ಟಹಾಸ; ಕ್ಷಿಪಣಿ ದಾಳಿ ತೀವ್ರ, ದಕ್ಷಿಣ ಭಾಗದಲ್ಲಿ ಭಾರೀ ಸ್ಫೋಟ!

‘ನನ್ನನ್ನು ಬೆನ್ನಟ್ಟಿದರು, ಕೊನೆಗೆ ಡಿಕ್ಕಿ ಹೊಡೆದರು’: Road Rage, ಕಾರು ಚಾಲಕನ ಕರಾಳ ಮುಖ ಬಯಲು ಮಾಡಿದ ಮಹಿಳಾ ಬೈಕ್ ರೈಡರ್! Video

2028 ರ ಚುನಾವಣೆ ಮೇಲೆ ಕಣ್ಣು: 10,000 'ಭಾರತ ಜೋಡೋ' ಯುವ ಸಂಘಗಳತ್ತ ಕಾಂಗ್ರೆಸ್ ಚಿತ್ತ! ಸಿಎಂ ಡಿಕೆಶಿ ಮೆಗಾ ಪ್ಲಾನ್!

ಗಣೇಶನ ವಾಹನವಾಗಿ ಮೂಷಿಕನ ಆಯ್ಕೆ ಏಕೆ? ಇದರ ಹಿಂದಿದೆ ಪುರಾಣದ ಕುತೂಹಲಕಾರಿ ಕಥೆ

'ಟ್ರೋಫಿ ಕಳ್ಳ'; Asia Cup Trophy ಫೈನಲ್ ಪಂದ್ಯ ಬಳಿಕ ಅಭಿಮಾನಿಗಳಿಂದ ಘೋಷಣೆ, ತಿರುಗಿಯೂ ನೋಡದೇ ಓಟಕಿತ್ತ Mohsin Naqvi, ಮತ್ತೆ ಮುಖಭಂಗ!