ಇತಿಹಾಸ ಬರೆದ ಭಾರತ ಮಹಿಳಾ ಕ್ರಿಕೆಟ್ ತಂಡ 
ಕ್ರಿಕೆಟ್

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ಆರಂಭಿಕರಾದ ಸ್ಮೃತಿ ಮಂಧಾನ (79) ಮತ್ತು ಶಫಾಲಿ ವರ್ಮಾ (48) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳೂ ರನ್‌ ಗಳಿಸುವ ಮೂಲಕ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು.

ನಿಸ್ಸಿನ್‌ (ಜಪಾನ್): ನಿರೀಕ್ಷೆಯಂತೆಯೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕ್ರಿಕೆಟ್ ನಲ್ಲಿ ಮತ್ತೊಂದು ಚಿನ್ನದ ಪದಕ ಲಭಿಸಿದ್ದು, ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ ಸತತ 2ನೇ ಪದಕ ಬಾಚಿಕೊಂಡಿದೆ.

ಹೌದು.. ನಾಯಕಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದು, ತನ್ನ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ.

ಮಂಗಳವಾರ ನಡೆದ ಫೈನಲ್‌ನಲ್ಲಿ ಶ್ರೀಲಂಕಾವನ್ನು 147 ರನ್‌ಗಳಿಂದ ಮಣಿಸಿದ ಭಾರತ, ಫೈನಲ್ ಗೆದ್ದು ಚಿನ್ನದ ಪದಕಕ್ಕೆ ಭಾಜನವಾಯಿತು. ಈ ಮೂಲಕ ಹ್ಯಾಂಗ್‌ಝೌ 2022ರಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿತು.

ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 216 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಆರಂಭಿಕರಾದ ಸ್ಮೃತಿ ಮಂಧಾನ (79) ಮತ್ತು ಶಫಾಲಿ ವರ್ಮಾ (48) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳೂ ರನ್‌ ಗಳಿಸುವ ಮೂಲಕ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು. ರಿಚಾ ಘೋಷ್ ಕೇವಲ 22 ಎಸೆತಗಳಲ್ಲಿ ಅಜೇಯ 49 ರನ್‌ ಗಳಿಸಿ ಭಾರತದ ಇನ್ನಿಂಗ್ಸ್‌ಗೆ ಸ್ಫೋಟಕ ಅಂತ್ಯ ನೀಡಿದರು.

216 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ, ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ವಿಕೆಟ್‌ಗಳು ನಿರಂತರವಾಗಿ ಉರುಳಿದ ಪರಿಣಾಮ ಲಂಕಾ ತಂಡ ದೊಡ್ಡ ಮೊತ್ತ ತಲುಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶ್ರೀಲಂಕಾ 15.4 ಓವರ್ ನಲ್ಲಿ ಕೇವಲ 69 ರನ್ ಗಳಿಗೇ ಆಲೌಟ್ ಆಗುವುದರೊಂದಿಗೆ ಭಾರತ 147 ರನ್‌ಗಳ ಭರ್ಜರಿ ಜಯ ದಾಖಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.

ಸತತ 2ನೇ ಚಿನ್ನದ ಪದಕ

ಇನ್ನು ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತನ್ನ ಸತತ ಎರಡನೇ ಚಿನ್ನದ ಪದಕವನ್ನು ಗೆದ್ದಿದೆ. 2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲೂ ಭಾರತವೇ ಚಾಂಪಿಯನ್ ಆಗಿತ್ತು.

ಫೈನಲ್‌ಗೂ ಮುನ್ನ ಭಾರತ ಜಪಾನ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 114 ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಶ್ರೀಲಂಕಾ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿತ್ತು.

ಇದೇ ತಿಂಗಳ ಆರಂಭದಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲೂ ಭಾರತ ಶ್ರೀಲಂಕಾವನ್ನು ಮಣಿಸಿತ್ತು. ಇದೀಗ ಮತ್ತೊಮ್ಮೆ ಅದೇ ಎದುರಾಳಿಯನ್ನು ಪ್ರಶಸ್ತಿ ಪಂದ್ಯದಲ್ಲಿ ಸೋಲಿಸುವ ಮೂಲಕ ಹರ್ಮನ್‌ಪ್ರೀತ್ ಕೌರ್ ಪಡೆ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ

ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆ

ಜೀವ ಪಣಕ್ಕಿಟ್ಟು 3 ಕಿ.ಮೀ ಬೆನ್ನಟ್ಟಿ ಆನೆಮರಿ ರಕ್ಷಿಸಿದ ಮೀನುಗಾರರು, ಕೊನೆಗೂ ತಾಯಿ ಮಡಿಲು ಸೇರಿದ ಪುಟ್ಟ ಕಂದ! Video

'ಚೀಟಿಂಗ್ ಸಮರ್ಥಿಸುತ್ತಿಲ್ಲ.. ಆದ್ರೆ ವ್ಯವಸ್ಥೆ ಸರಿಯಾಗಬೇಕು, ಸಾಹಿಲ್ ಸಾವಿಗೆ ನ್ಯಾಯಬೇಕು': ಪ್ರತಿಭಟನಾ ನಿರತ IIT Bombay ವಿದ್ಯಾರ್ಥಿಗಳು!

ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 ‘ಟ್ರಂಪ್ ಟಿವಿ’ ಸ್ಟ್ರೀಮಿಂಗ್ ಆರಂಭ..!