ದಸರಾ

ಚಾಣಾಕ್ಷ ಅರ್ಜುನ, ಬೇರೆ ಆನೆಗಳಿಗಿಂತ ಭಿನ್ನ ಹೇಗೆ..?

Srinivasamurthy VN

ದಸರಾ ಹಬ್ಬದಂದು ಕೇಂದ್ರಬಿಂದುವಾಗಿರುವ ಚಿನ್ನದ ಅಂಬಾರಿಯನ್ನು ಹೊರುವ ಅರ್ಜುನನ ಬಗ್ಗೆ ಎಲ್ಲರಿಗೂ ತಿಳಿದ ವಿಚಾರವೇ. 750 ಕೆಜಿ ಚಿನ್ನದ ಅಂಬಾರಿ ಮತ್ತು ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಹೊರುವ ಜವಾಬ್ದಾರಿ ಅರ್ಜುನನಿಗೆ ವಹಿಸಲಾಗಿದೆ ಎಂದರೆ ಈ ಆನೆ ಅದೆಷ್ಟು ಸಮರ್ಥ ಎಂದು ತಿಳಿಯುತ್ತದೆ.

ಕಾವಾಡಿಗಳೇ ಹೇಳುವಂತೆ ಇತರೆ ಆನೆಗಳಿಗೆ ಹೋಲಿಸಿದರೆ ಅರ್ಜುನ ವಿಭಿನ್ನ. ಅರ್ಜುನ ತನ್ನ ಬಹುತೇಕ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾನೆ. ತನ್ನ ಮಾವುತನ ಮಾತನ್ನು ಬಿಟ್ಟರೆ ಬೇರೆ ಯಾರ ಮಾತನ್ನೂ ಕೇಳುವುದಿಲ್ಲ ಈತ. ಸಾಮಾನ್ಯವಾಗಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಇತರೆ ಆನೆಗಳಿಗೆ ಕಾವಾಡಿಗಳು ಮತ್ತು ಮಾವುತರು ಸ್ನಾನ ಮಾಡಿಸುತ್ತಾರೆ. ಆದರೆ ಅರ್ಜುನ ತನ್ನ ಸ್ನಾನವನ್ನು ತಾನೇ ಮಾಡುತ್ತಾನೆ. ಹೀಗಾಗಿ ಅರ್ಜುನ ತೂಕದಲ್ಲೂ ಫಸ್ಟೂ, ನಡಿಗೆಯಲ್ಲೂ ಬೆಸ್ಟ್.

ಅರಮನೆ ಆವರಣಕ್ಕೆ ಬರುವ ಪ್ರವಾಸಿಗರು ನೀಡುವ ಆಹಾರವನ್ನು ಅರ್ಜುನ ಹಾಗೇ ತಿನ್ನುವುದಿಲ್ಲ. ಸಿಪ್ಪೆ ಬಿಡಿಸಿ ತಿನ್ನುತ್ತಾನೆ. ಬರೋಬ್ಬರಿ 5,435 ಕೆಜಿ ತೂಕ ಹೊಂದಿರುವ ಅರ್ಜುನ ಬೇರೆಯಾರ ಮಾತನ್ನೂ ಕೇಳುವುದಿಲ್ಲ. ಅರ್ಜುನನಿಗೆ ಒಳ್ಳೆಯ ಸ್ನೇಹಿತ ಎಂದರೆ ಮಾವುತ ದೊಡ್ಡ ಮಾಸ್ತಿ ಹಾಗೂ ಮಾಸ್ತಿಯ ಮೊಮ್ಮಗ ಮಾತ್ರ. ಇವರಿಬ್ಬರ ಮಾತನ್ನು ಬಿಟ್ಟು ಬೇರೆ ಕಾವಾಡಿಗಳ ಮಾತನ್ನು ಅರ್ಜುನ ಕೇಳುವುದಿಲ್ಲ.

ಸದ್ಯ ಅರಮನೆ ಆವರಣದಲ್ಲೇ ಅರ್ಜುನ ನಿತ್ಯ ಸ್ನಾನ ಮಾಡುತ್ತಾನೆ. ತೀರ ಅನಿವಾರ್ಯವೆಂದರೆ ಮಾತ್ರ ಮಾವುತ ದೊಡ್ಡ ಮಾಸ್ತಿ ಹಾಗೂ ಮಾಸ್ತಿ ಅವರ ಮೊಮ್ಮಗನಿಂದ ಆರೈಕೆಯಾಗುತ್ತದೆ.

SCROLL FOR NEXT