ದೇವಿ ದುರ್ಗಾ ಪೂಜಾ ವಿಧಾನ ಹಾಗೂ ವಿಶೇಷ 
ದಸರಾ

ದೇವಿ ದುರ್ಗಾ ಪೂಜಾ ವಿಧಾನ ಹಾಗೂ ವಿಶೇಷ

ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಎಲ್ಲಾ ಹಬ್ಬಂದಂತೆ ನವರಾತ್ರಿಯೂ ಸಹ ವಿಶೇಷವನ್ನು ಹೊಂದಿದ್ದು, ಈ ಹಬ್ಬವನ್ನು ಮಹಾಶಕ್ತಿಯ ಆರಾಧನೆಯ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಗೊಂಬೆಗಳ ಹಬ್ಬ ಎಂದೂ ಕರೆಯುತ್ತಾರೆ...

ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಎಲ್ಲಾ ಹಬ್ಬಂದಂತೆ ನವರಾತ್ರಿಯೂ ಸಹ ವಿಶೇಷವನ್ನು ಹೊಂದಿದ್ದು, ಈ ಹಬ್ಬವನ್ನು  ಮಹಾಶಕ್ತಿಯ ಆರಾಧನೆಯ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಗೊಂಬೆಗಳ ಹಬ್ಬ ಎಂದೂ ಕರೆಯುತ್ತಾರೆ.

ನವರಾತ್ರಿಯನ್ನು ಭಾರತದ ಪ್ರತೀಯೊಂದು ರಾಜ್ಯದಲ್ಲೂ ವಿಭಿನ್ನವಾಗಿ ಆಚರಿಸುವುದುಂಟು ಗುಜರಾತಿನಲ್ಲಿ ಈ ಒಂಬತ್ತು ದಿನಗಳು ಉಲ್ಲಾಸಮಯವಾಗಿರುತ್ತವೆ. ಬಂಗಾಳದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ  ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆ ಕಾರ್ಯ ವಿಶೇಷವಾಗಿರುತ್ತವೆ. ಇನ್ನು ಪಂಜಾಬ್ ನಲ್ಲೂ ಕೂಡಾ ಉಪವಾಸ ಮತ್ತು ಜಾಗರಣೆ ಮಾಡುವ ಮೂಲಕ ದೇವಿಯ ಪೂಜೆ ಮಾಡಲಾಗುತ್ತದೆ

ನವರಾತ್ರಿಯಲ್ಲಿ ಮಾತೆ ದುರ್ಗೆಯ ಪೂಜೆ ಮಹತ್ವವಾಗಿದೆ. ಹಬ್ಬದಲ್ಲಿ ದೇವಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಪೂಜೆ ಮಾಡುವುದುಂಟು. ಶೈಲಪುತ್ರಿ, ಬ್ರಹ್ಮಚಾರಿಣಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಲ್ಲಿ ದುರ್ಗೆಯನ್ನು ಪೂಜೆ ಮಾಡುತ್ತಾರೆ.

ದುರ್ಗಾಷ್ಟಮಿಯನ್ನು ನವರಾತ್ರಿಯ ಎಂಟನೇ ದಿನದಂದು ಆಚರಣೆ ಮಾಡುವುದುಂಟು. ಹತ್ತನೆಯ ದಿನವನ್ನು ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ವಿಜಯದಶಮಿಯ ಅರ್ಥ ಹೆಸರೇ ಸೂಚಿಸುವಂತೆ ವಿಜಯ, ಗೆಲುವು ಸೂಚಿಸುವ ಹಬ್ಬ. ವಿಜಯದಶಮಿ ಆಚರಿಸುವುದಕ್ಕೂ ಹಲವು ಸಂಕೇತಗಳಿದ್ದು, ಮಹಾದುರ್ಗೆ ರಾಕ್ಷಸರನ್ನು ಸಂಹಾರ ಮಾಡಿದ ವಿಜಯದ ದಿನ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನ ಎಂಬುದರ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುವುದುಂಟು.

ನವರಾತ್ರಿ ಹಿಂದಿನ ಕೆಲವು ಕಥೆಗಳು ಇಂತಿವೆ...

  • ನವರಾತ್ರಿಯಲ್ಲಿ ತಾಯಿ ದುರ್ಗಾದೇವಿ ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾಳೆ.
  • ಪಾಂಡವರು ಒಂದು ವರ್ಷ ಅಜ್ಞಾತವಾಸಕ್ಕಾಗಿ ಕಾಡಿಗೆ ತೆರಳಲು ಹೋಗುವಾಗ ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀ/ಬನ್ನಿ ಮರದ ಮೇಲೆ ಮುಚ್ಚಿಟ್ಟಿರುತ್ತಾರೆ. ದಶಮಿಯ ದಿನಕ್ಕೆ 1 ವರ್ಷ ಅಜ್ಞಾತವಾಸ ಮುಗಿಯುತ್ತದೆ. ನಂತರ ಮತ್ತೆ ಬನ್ನಿ ಮರದತ್ತ ಬಂದ ಪಾಂಡವರು ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕೌರವರೊಂದಿಗೆ ಯುದ್ಧಕ್ಕೆ ಹೋಗಿ ವಿಜಯ ಸಾಧಿಸುತ್ತಾರೆ. ಈ ದಶಮಿಯನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ.
  • ವಿಜಯ ದಶಮಿಯ ದಿನವನ್ನು ರಾಮ ರಾವಣನನ್ನು ಸಂಹಾರ ಮಾಡಿದ ದಿನವೆಂದು ಕರೆಯುತ್ತಾರೆ. ಶ್ರೀರಾಮನು ಲಂಕೆಯ ಮೇಲೆ ಯುದ್ಧ ಮಾಡಲು ಹೊರಡುವುದಕ್ಕೂ ಮುನ್ನ ದುರ್ಗಾದೇವಿ ಆರಾಧನೆ ಮಾಡುತ್ತಾನೆ. ದುರ್ಗಾ ಪೂಜೆಗಾಗಿ ರಾಮನು 108 ಕಮಲದ ಹೂವುಗಳನ್ನು ಅರ್ಪಿಸಿ 108 ದೀಪಗಳನ್ನು ಹಚ್ಚುತ್ತಾನೆ. ಪೂಜಾ ಸಮಯದ ವೇಳೆ ರಾಕ್ಷಸನೊಬ್ಬ ರಾಮನು ಪೂಜೆ ತಂದಿಟ್ಟ ಕಮಲವನ್ನು ಕದ್ದುಬಿಡುತ್ತಾನೆ. ಹೀಗಾಗಿ ಪೂಜೆಯನ್ನು ಸಂಪೂರ್ಣಗೊಳಿಸುವ ಸಲುವಾಗಿ ಶ್ರೀರಾಮನು ಕಮಲದ ಬದಲಿಗೆ ತನ್ನ ಎರಡು ಕಣ್ಣಗಳಲ್ಲೊಂದನ್ನು ದೇವಿಗೆ ಅರ್ಪಿಸಲು ಮುಂದಾಗುತ್ತದೆ. ಇದನ್ನು ಕಂಡ ದೇವಿಯು ಶ್ರೀರಾಮನ ಮುಂದೆ ಪ್ರತ್ಯಕ್ಷಳಾಗಿ ಯುದ್ಧದಲ್ಲಿ ವಿಜಯಶಾಲಿಯಾಗುವಂತೆ ಆಶೀರ್ವದಿಸುತ್ತಾಳೆ.


ದುರ್ಗಾಪೂಜೆಯನ್ನು 9 ದಿನಗಳ ಕಾಲ ಭಾರತದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು. 9 ದಿನಗಳಲ್ಲಿಯೂ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷತೆ ಇದೆ.  ಆ ದಿನಗಳ ವಿಶೇಷತೆ ಈ ಕೆಳಕಂಡಂತಿದೆ
  • 1ನೇ ದಿನವನ್ನು ಪಾಡ್ಯದ ದಿನವೆಂದು ಅಂದರೆ  ಯೋಗನಿದ್ರಾ ದುರ್ಗಾ ಪೂಜೆಯಂದು ಪೂಜಿಸುತ್ತಾರೆ.
  • 2ನೇ ದಿನವನ್ನು ಬಿದಿಗೆ ದಿನ ಅಂದರೆ ದೇವಜಾತ  ದುರ್ಗಾ ಪೂಜೆಯಂದು ಪೂಜಿಸುತ್ತಾರೆ.
  • 3ನೇ ದಿನವನ್ನು ತದಿಗೆ ದಿನ ಅಂದರೆ ಮಹಿಷಾಸುರ  ಮರ್ಥಿನಿ ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.
  • 4ನೇ ದಿನವನ್ನು ಚತುರ್ದಶಿ ದಿನ ಅಂದರೆ ಶೈಲ ಜಾತಾ  ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.
  • 5ನೇ ದಿನವನ್ನು ಪಂಚಮಿ ದಿನ ಅಂದರೆ ದೂಮೃಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.
  • 6ನೇ ದಿನವನ್ನು ಶಷ್ಠಿ ದಿನ ಅಂದರೆ ಚಂಡ-ಮುಂಡಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.
  • 7ನೇ ದಿನವನ್ನು ಸಪ್ತಮಿ ಅಂದರೆ ರಕ್ತಬೀಜ ದುರ್ಗಾಪೂಜಾದಿನವೆಂದು ಪೂಜಿಸುತ್ತಾರೆ.
  • 8ನೇ ದಿನವನ್ನು ಅಷ್ಟಮಿ ದಿನ ಅಂದರೆ ದುರ್ಗಾಷ್ಠಮಿ ಎಂದು ಪೂಜಿಸುತ್ತಾರೆ.
  • 9ನೇ ದಿನದ ಕಡ ನವರಾತ್ರಿ ಮಹಾನವಮಿ ದಿನ ಅಂದರೆ ಶುಂಭಹಾ ದುರ್ಗಾ ಪೂಜೆಯೆಂದು ಪೂಜಿಸುತ್ತಾರೆ.

ದುರ್ಗಾ ಪೂಜೆ ಮಾಡುವ ವಿಧಾನ...
  • ದುರ್ಗಾಷ್ಟಮಿಯನ್ನು ನವರಾತ್ರಿಯ 8ನೇ ದಿನವನ್ನು ಆಚರಿಸಲಾಗುತ್ತಿದ್ದು, ಅಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ದಿನದಂದು ಪೂಜಿಸಲಾಗುತ್ತದೆ. ಅಂದು ದುರ್ಗಾದೇವಿಯ ಪೂಜೆ ಮಾಡುವವರು, ಎಂದಿನಿಂತೆ ಸೂರ್ಯೋದಯವಾಗುವುದಕ್ಕೂ ಮೊದಲೇ ಎದ್ದು, ಶುದ್ಧ ನೀರಿನಿಂದ ಸ್ನಾನ ಮಾಡಿ, ಮಡಿ ಬಟ್ಟೆ ತೊಡಬೇಕು. ದೇವಿಗೆ ಶುದ್ಧತೆಯಿಂದ ನೈವೇದ್ಯವನ್ನು ತಯಾರು ಮಾಡಿ, ಪೂಜೆಗೆ ತಯಾರಿ ಮಾಡಬೇಕು.
  • ಪೂಜಾಗೃಹದಲ್ಲಿ ದುರ್ಗಾದೇವಿಯ ಫೋಟೋ ಅಥವಾ ಮೂರ್ತಿ ಇಟ್ಟು ಪೂಜಿಸುತ್ತಾರೆ. ಕೆಲವರು ತಮ್ಮ ಸಂಪ್ರದಾಯದಂತೆ ಗೊಂಬೆಗಳನ್ನು ಇಟ್ಟು ಪೂಜಿಸುತ್ತಾರೆ.
  • ಪೂಜೆಗೂ ಮುನ್ನ ದೇವಿಯ ಮುಂದೆ ಸಂಕಲ್ಪ ಮಾಡಿ, ಪೂಜೆ ಮಾಡುವುದಾಗಿ ತಿಳಿಸಿ, ಆ ದಿನದ ಸಂವತ್ಸರ, ಋತು, ಮಾಸ, ಪಕ್ಷ, ವಾರ. ತಿಥಿ, ನಕ್ಷತ್ರವನ್ನು ಹೆಸರಿಸಬೇಕು.
  • ದೇವಿಗೆ ಷೋಡಶೋಪಚಾರ ಪೂಜೆ ಮಾಡಬೇಕು. ಪೂಜೆ ವೇಳೆ ದೇವಿಯ ಸ್ತೋತ್ರಗಳು, ಹಾಡು, ಭಜನೆಯಿಂದ ದೇವಿಯ ಧ್ಯಾನ ಮಾಡಬೇಕು, ಪೂಜೆಯ ನಂತರ ಸುಮಂಗಲಿಯರಿಗೆ ಅರಿಶಿನ ಕುಂಕುಮ ಹಾಗೂ ಫಲ ನೀಡಬೇಕು.

ಸುಮಂಗಲಿಯರು ಈ ನವರಾತ್ರಿಯ ದಿನದಂದು ದೇವಿಯ ಆರಾಧನೆ ಮಾಡುವುದರಿಂದ ದೇವಿಯು ಸಕಲ ಸಂತೋಷಗಳನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನೇಪಾಳ ಬಿಕ್ಕಟ್ಟು: ಭಾರತದಲ್ಲಿ ಕಟ್ಟೆಚ್ಚರ; ಸಹಾಯವಾಣಿ ಆರಂಭ; ಕಠ್ಮಂಡುವಿಗೆ ವಿಮಾನ, ಬಸ್ ಸೇವೆ ರದ್ದು!

ಸಿದ್ದು ಸರ್ಕಾರದ ವಿರುದ್ಧ SC ಒಳಮೀಸಲಾತಿ ಕಿಚ್ಚು: ಫ್ರೀಡಂಪಾರ್ಕ್‌ನಲ್ಲಿ ಸ್ಪೃಶ್ಯ ಸಮುದಾಯದಿಂದ ಉಗ್ರ ಹೋರಾಟ, ಆತ್ಮಹತ್ಯೆಗೆ ಮಹಿಳೆ ಯತ್ನ!

Punjab: ದಲಿತ ಮಹಿಳೆಗೆ ಕಿರುಕುಳ ಪ್ರಕರಣದಲ್ಲಿ AAP ಶಾಸಕ ದೋಷಿ; ಸೆ.12ಕ್ಕೆ ಶಿಕ್ಷೆ ತೀರ್ಪು ಪ್ರಕಟ!

ಬಿಹಾರಕ್ಕೆ ಮೋದಿ ಬಂಪರ್ ಗಿಫ್ಟ್: 7,616 ಕೋಟಿ ರೂ. ರೈಲು, ರಸ್ತೆ ಯೋಜನೆಗಳಿಗೆ ಕೇಂದ್ರ ಅನುಮೋದನೆ

ಮದ್ದೂರು: ಅದ್ಧೂರಿ ಸಾಮೂಹಿಕ ಗಣೇಶ ವಿಸರ್ಜನೆ; ಬಿಜೆಪಿ ನಾಯಕರು ಭಾಗಿ, ಸರ್ಕಾರದ ವಿರುದ್ಧ ವಾಗ್ದಾಳಿ; Video

SCROLL FOR NEXT