ಜಿಲ್ಲಾ ಸುದ್ದಿ

ಸುಳ್ಳು ಪ್ರಮಾಣಪತ್ರ: ನಿರ್ದಾಕ್ಷಿಣ್ಯ ಕ್ರಮ

Lakshmi R

ವಿಧಾನ ಪರಿಷತ್: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ನ್ಯಾಯಾಧೀಶರೂ ಆಗಿದ್ದಾರೆ, ಮುಖ್ಯ ಎಂಜಿನಿಯರ್ ಆಗಿದ್ದಾರೆ. ಉನ್ನತ ಅಧಿಕಾರಿಗಳೂ ಆಗಿದ್ದಾರೆ. ರಾಜ್ಯದಲ್ಲಿ ಇಂತಹವರ ಸಂಖ್ಯೆ 702ರಷ್ಟಿದೆ. ಬಿಜೆಪಿಯ ತಾರಾ ಅವರ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ನೀಡಿದ ಈ ಹೇಳಿಕೆ ವಿಧಾನಪರಿಷತ್‌ನಲ್ಲಿ ಸಾಕಷ್ಟು ವಾದ-ವಿವಾದಕ್ಕೆ ಕಾರಣವಾಯಿತು.

ರಾಜ್ಯದಲ್ಲಿ ದಲಿತರ ಸ್ಥಿತಿ ಶೋಚನೀಯವಾಗಿದೆ. ನಾಯಿ, ಬೆಕ್ಕುಗಳಿಗಿಂತ ಕಡೆಯಾಗಿ ಜೀವಿಸುತ್ತಿದ್ದಾರೆ. ದಲಿತರ ಪರಿಸ್ಥಿತಿ ಸುಧಾರಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ತಾರಾ ಪ್ರಶ್ನಿಸಿದಾಗ, ಸಚಿವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ 702 ಜನರು ಅಧಿಕಾರದಲ್ಲಿರುವುದನ್ನು ಗಮನಕ್ಕೆ ತಂದರು.

ಇದರಿಂದ ಕೆರಳಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಏನ್ರಿ 702 ಜನರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ವಿವಿಧ ಹುದ್ದೆ ಪಡೆದು ದಲಿತರನ್ನು ವಂಚಿಸಿದ್ದಾರೆ ಎಂದು ನೀವೇ ಹೇಳುತ್ತೀರಿ.

ಹಾಗಿದ್ದರೆ, ಅವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಬಸವರಾಜ ಹೊರಟ್ಟಿ ಸಹ ಬೆಂಬಲ್ಸಿದರು. ಸದ್ಯದಲ್ಲಿಯೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವ ಎಚ್.ಆಂಜನೇಯ ನೀಡಿದ ಹೇಳಿಕೆ ಮತ್ತೆ ಈಶ್ವರಪ್ಪ ಅವರನ್ನು ಕೆರಳಿಸಿತು.

ಒಂದು ಕಾಲಮಿತಿ ಹಾಕಿಕೊಳ್ಳಿ. 6 ತಿಂಗಳು ಬೇಕಾದರೂ ತೆಗೆದುಕೊಳ್ಳಿ ಅಷ್ಟರಲ್ಲಿ ಈ ಪ್ರಕರಣವನ್ನು ಇತ್ಯರ್ಥ  ಪಡಿಸಿ ಎಂದು ಹೇಳಿದರು. ಈ ವೇಳೆ ಎದ್ದು ನಿಂತ ಹೊರಟ್ಟಿ, ಕ್ರಮ ಕೈಗೊಳ್ಳಲು ನಿಮಗೆ ಇರುವ ಅಡ್ಡಿ ಆದರೂ ಏನು? ಇದುವರೆಗೆ ಏಕೆ ಸುಮ್ಮನಿದ್ದೀರಿ ಎಂದಾಗ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ಉಂಟಾಗಿ ಗೊಂದಲ ಏರ್ಪಟ್ಟಿತು.

ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಮಾಯ್ಯನಡುವೆ ಮಧ್ಯೆ ಪ್ರವೇಶಿಸಿ, ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ ಪ್ರಕರಣದ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳುತ್ತೇವೆ. ಪರಿಶಿಷ್ಟ ಜಾತಿ, ಪಂಗದ ಜನರ ಹಕ್ಕು ಕಸಿದುಕೊಳ್ಳುವವರ ವಿರುದ್ಧ ವಿಶೇಷ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

SCROLL FOR NEXT