ಕೇಕ್ ಶೋ 
ಜಿಲ್ಲಾ ಸುದ್ದಿ

ನಾಳೆಯಿಂದ ಕೇಕ್ ಶೋ

ನಗರದ ಜನತೆ ಕಾತರದಿಂದ ಕಾಯುತ್ತಿರುವ ಕೇಕ್ ಪ್ರದರ್ಶನಕ್ಕೆ...

ಬೆಂಗಳೂರು: ನಗರದ ಜನತೆ ಕಾತರದಿಂದ ಕಾಯುತ್ತಿರುವ ಕೇಕ್ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ.

ಈ ಬಾರಿ 22 ಅಡಿ ಎತ್ತರ ಮತ್ತು ಉದ್ದವಿರುವ ಪಾರ್ಲಿಮೆಂಟ್ ಮಾದರಿಯನ್ನು ಕಲಾವಿದ ರಾಮಚಂದ್ರನ್ ನಿರ್ಮಿಸಿದ್ದಾರೆ.

ಒಟ್ಟು 28 ರೀತಿಯ ಕೇಕ್ ಮಾದರಿಗಳು ಪ್ರದರ್ಶನಗೊಳ್ಳಲಿದ್ದು, ಎಲ್ಲವನ್ನೂ ಸಕ್ಕರೆಯಿಂದ ತಯಾರಿಸಲಾಗಿದ್ದು ಅದಕ್ಕೆ ಎಡಿಬಲ್ ಜಲೆಟಿನ್ ಹಾಗೂ ನಾನಾ ಫ್ಲೇವರ್‌ಗಳನ್ನು ಉಪಯೋಗಿಸಲಾಗಿದೆ. ಈ ಎಲ್ಲ ಮಾದರಿಗಳ ಹಿಂದೆ 60 ಜನರ ಪರಿಶ್ರಮವಿದ್ದು 3 ತಿಂಗಳಿನಿಂದ ಈ ಕೆಲಸದಲ್ಲಿ ತೊಡಗಿರುವುದಾಗಿ ರಾಮಚಂದ್ರನ್ ತಿಳಿಸಿದ್ದಾರೆ.

ಈ ಮಾದರಿಗಳನ್ನು ತಯಾರಿಸಲು 7 ಟನ್ ಸಕ್ಕರೆ ಬಳಕೆ ಮಾಡಿದ್ದು ಒಟ್ಟಾರೆ ರು. 25 ಲಕ್ಷ ವೆಚ್ಚವಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಚರ್ಚ್, ಸ್ನೋ ಮ್ಯಾನ್, ಎಡಿಬಲ್ ಲೇಸ್, ಶುಗರ್ ಡೋ ಅದರ ಜತೆಗೆ ಛೋಟಾ ಭೀಮ್ ಮಾದರಿಯನ್ನು ಬಹಳ ವಿಶಿಷ್ಟ ರೀತಿಯಲ್ಲಿ ಅದರಲ್ಲೂ ಮಕ್ಕಳಿಗೆ ತುಂಬಾ ಇಷ್ಟವಾಗುವ ರೀತಿಯಲ್ಲಿ ತಯಾರಿಸಲಾಗಿದೆ. ಸಂಸತ್ ಮಾದರಿ 5 ಟನ್ ತೂಕವಿದ್ದು, ಸಕ್ಕರೆ, ಮೊಟ್ಟೆ ಹಾಗೂ ಜೋಳದ ಹಿಟ್ಟಿನಲ್ಲಿ ತಯಾರಿಸಲಾಗಿದೆ.

ಇಷ್ಟೇ ಅಲ್ಲದೆ ಮಂಗಳಯಾನ ಅಂತರಿಕ್ಷ ನೌಕೆ ಜತೆಗೆ ಹಾರುವ ಡ್ರಾಗನ್ ನಿರ್ಮಿಸಲಾಗಿದೆ. ಅದನ್ನು ಅರ್ಧ ಟನ್ ಸಕ್ಕರೆ, ಮಾರ್ಷ್ ಮೆಲ್ಲೊ, ರೈಸ್ ಕ್ರಿಸ್ ಪೀಸ್, ಜೋಳದ ಹಿಟ್ಟನ್ನು ಬಳಸಲಾಗಿದೆ. ಇದರ ಜತೆಗೆ ದಿಲ್ಲಿ ಕಾ ಶೇರ್, ರೊಮ್ಯಾಂಟಿಕ್ ಗೇಟ್ ವೇ, ಎ ಕ್ರಿಸ್‌ಮಸ್ ವೆಡ್ಡಿಂಗ್, ಎಥಿಕ್ ಬ್ರೈಡಲ್ ಹ್ಯಾಂಡ್ಸ್, ಫ್ರೂಡಿ ವೆಡ್ಡಿಂಗ್, ಸಿಂಡ್ರೆಲ್ಲಾ ಕಥೆಗಳ ಪ್ರತಿರೂಪಗಳನ್ನು ಮರುಸೃಷ್ಟಿ ಮಾಡಲಾಗಿದೆ.

ಈ ಎಲ್ಲ ಕಲಾಕೃತಿಗಳನ್ನು ನಿರ್ಮಿಸಲು ರಾಮಚಂದ್ರನ್ ಜತೆ, ಸಹಾಯಕ ಕಲಾವಿದರಾದ ಗಾಂಧಿ ಮತ್ತು ಮಣೀಶ್ ಹಾಗೂ ಸುಮಾರು 60 ಜನರಿಗೆ 90 ದಿನಗಳು ತಗುಲಿವೆ. ಇದರ ಜತೆ ಪ್ರದರ್ಶನ ಮುಗಿದ ಮೇಲೆ ಆ ಕೇಕ್‌ಗಳನ್ನು ವ್ಯರ್ಥ ಮಾಡದೆ ಮಕ್ಕಳಿಗೆ ಶುಗರ್ ಸಿರಪ್ ತಯಾರು ಮಾಡುವುದಾಗಿ ಹೇಳಿದ್ದಾರೆ.

ಕಂಠೀರವಾ ಕ್ರೀಡಾಂಗಣದ ಎದುರಿರುವ ಸೇಂಟ್ ಜೋಸೆಫ್ಸ್ ಶಾಲೆಯ ಆವರಣದಲ್ಲಿ ನಡೆಯುವ ಪ್ರದರ್ಶನಕ್ಕೆ ರು. 49 ಪ್ರವೇಶ ಶುಲ್ಕವಿರುತ್ತದೆ. ಡಿ. 19ರಂದು ಪ್ರಾರಂಭವಾದ ಪ್ರದರ್ಶನ ಜನವರಿ 4ರವರೆಗೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT