ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ವಾರ್ಷಿಕ ಜನುಮ ದಿನವನ್ನು ೨೦೧೫ರ ಜನವರಿ ೧೨ ಮತ್ತು ೧೩ ರಂದು ಅದ್ದೂರಿಯಾಗಿ ಸಂಗೊಳ್ಳಿ ರಾಯಣ್ಣ ಉತ್ಸವಾಗಿ ಆಚರಿಸಲು ಸೋಮವಾರ ಜಿಲ್ಲಾಡಳಿತ ಸಭೆಯಲ್ಲಿ ನಿರ್ಣಯಿಸಿದೆ.
ಉಪ ಆಯುಕ್ತ ಎನ್ ಜಯರಾಂ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹಲವಾರು ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಸದ್ಯಕ್ಕೆ ಉತ್ಸವ ನಡೆಸಲು ಜಿಲ್ಲಾಡಳಿತದ ಬಳಿ ೧೦ ಲಕ್ಷ ಇದ್ದು, ಹೆಚ್ಚುವರಿ ೩೦ ಲಕ್ಷ ರೂ ಹಣಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಇಡಲಾಗುವುದು. ಇದು ಉತ್ಸವನ್ನು ಅದ್ದೂರಿಯಾಗಿ ನಡೆಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ ಉಪ ಆಯುಕ್ತ. ರಾಯಣ್ಣನ ರಾಷ್ಟ್ರಭಕ್ತಿ ಮತ್ತು ಧೈರ್ಯವನ್ನು ಪ್ರತಿನಿಧಿಸುವ ಪ್ರಾದೇಶಿಕ ಜನರ, ರಾಜ್ಯದ ಹಾಗೂ ರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಸೆಮಿನಾರ್ ಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಕುಸ್ತಿ, ಕಬ್ಬಡ್ಡಿ ಮತ್ತು ವಾಲಿಬಾಲ್ ಆಟಗಳನ್ನು ಕೂಡ ಆಯೋಜಿಸಲಾಗುವುದು ಎಂದಿದ್ದರೆ.
ಉತ್ಸವದ ಬಗ್ಗೆ ಅರಿವು ಮೂಡಿಸಲು ರಾಯಣ್ಣನಿಗೆ ನೇಣು ಹಾಕಿದ ನಂದಗಡ್ ನಿಂದ "ವೀರಜ್ಯೋತಿ ನಡಿಗೆ"ಯನ್ನು ಆಯೋಜಿಸಿ ಜಿಲ್ಲೆಯ ಎಲ್ಲ ತಾಲ್ಲುಕುಗಳಿಗೂ ಪ್ರವಾಸ ಮಾಡಲಿದ್ದೇವೆ ಎಂದಿದ್ದಾರೆ.