ಬೆಂಗಳೂರು: ಆನ್‌ಲೈನ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಯುವತಿಯೊಬ್ಬರನ್ನು ರಕ್ಷಿಸಿದ್ದಾರೆ.
ಗೋಪಿ, ಚಂದ್ರು ಹಾಗೂ ಮಹೇಶ್ ಬಂಧಿತರು. ಇವರು ಕಳೆದ ಆರು ತಿಂಗಳಿನಿಂದ ಎಸ್ಕಾರ್ಟ್ ಸೇವೆ ಹೆಸರಿನಲ್ಲಿ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಇವರ ಮೊಬೈಲ್ ಫೋನ್ ನಂಬರ್ ನೀಡುತ್ತಿದ್ದರು.
ವೆಬ್‌ಸೈಟ್ ಮೂಲಕ ಗ್ರಾಹಕರು ಅವರನ್ನು ಸಂಪರ್ಕಿಸಿದಾಗ ಯುವತಿಯರನ್ನು ಬೇಕಾದ ಜಾಗಕ್ಕೆ ಅವರ ಕಾರಿನಲ್ಲೇ ಕಳುಹಿಸುತ್ತಿದ್ದರು. ಆರೋಪಿಗಳು ಮುಂಬೈ ಮೂಲದ ಮೂವರು ಯುವತಿಯರನ್ನು ದಂಧೆಗೆ ಬಳಸಿಕೊಳ್ಳುತ್ತಿದ್ದು ಸದ್ಯ ಒಬ್ಬ ಯುವತಿ ಮಾತ್ರ ಸಿಕ್ಕಿದ್ದು ಇನ್ನಿಬ್ಬರು ಯುವತಿಯರ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.